ಕೊಪ್ಪಳ :ಜಿಲ್ಲಾ ಘಟಕ ಹಾಗೂ ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕ ಘಟಕಗಳ ಒಮ್ಮತದ ತೀರ್ಮಾನದಂತೆ ದಿನಾಂಕ ೦೩-೧೦-೨೦೧೧ ರಂದು ಸೋಮವಾರ ಸಮಯ ಮಧ್ಯಾಹ್ನ ೩.೦೦ ಗಂಟೆಗೆ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಪುನರ್ ರಚನೆಗಾಗಿ ಜಿಲ್ಲೆಯ ಸರ್ವಉಪನ್ಯಾಸಕರ ಸಾಮಾನ್ಯ ಸಭೆಯನ್ನು ಕರೆಯಲಾಗಿದೆ. ಸದರಿ ಸಭೆಗೆ ರಾಜ್ಯ ಘಟಕದ ಅಧ್ಯಕ್ಷರಾದ ತಮ್ಮಯ್ಯ ಪುರ್ಲೆಯವರು ಹಾಗೂ ರಾಜ್ಯ ಇತರ ಪದಾಧಿಕಾರಿಗಳು ಸಭೆಗೆ ಆಗಮಿಸಿ ಹೋರಾಟದ ಇತ್ತೀಚಿನ ಬೆಳವಣಿಗೆಗಳು ಹಾಗೂ ಮುಂದಿನ ಹೋರಾಟದ ರೂಪರೇಷಗಳನ್ನು ತಿಳಿಸಲಿದ್ದಾರೆ.
ಕಾರಣ ಕ್ರೀಯಾಶೀಲ ಹಾಗೂ ಸಮರ್ಥ ಜಿಲ್ಲಾ ಘಟಕವನ್ನು ಪುನರ್ ರಚಿಸುವ ಸಲುವಾಗಿ ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ ಮಾರ್ಗದರ್ಶನ ನೀಡಲು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜ ಉಪನ್ಯಾಸಕರ ಸಂಘ (ರಿ), ಬೆಂಗಳೂರು.ಜಿಲ್ಲಾ ಘಟಕ, ಕೊಪ್ಪಳ ಮನವಿ ಮಾಡುತ್ತದೆ.
0 comments:
Post a Comment