ಕೊಪ್ಪಳ ಅ. : ಜಿಲ್ಲೆಯ ಗಂಗಾವತಿಯಲ್ಲಿ ಬರುವ ನವೆಂಬರ್ ತಿಂಗಳಿನಲ್ಲಿ ಜರುಗುವ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿದ್ದು, ವಿವಿಧ ಸಮಿತಿಗಳ ಸಭೆಗೆ ದಿನಾಂಕ ನಿಗದಿಪಡಿಸಲಾಗಿದೆ.
ಸಮ್ಮೇಳನವನ್ನು ಅಚ್ಚುಕಟ್ಟಾಗಿ ಜರುಗಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಆಯಾ ಸಮಿತಿಗಳು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದಕ್ಕಾಗಿ ಹಲವು ಸಮಿತಿಗಳ ಸಭೆಗೆ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಗಂಗಾವತಿ ಎ.ಪಿ.ಎಂ.ಸಿ. ಆವರಣದಲ್ಲಿನ ಸಮ್ಮೇಳನದ ಸ್ವಾಗತ ಸಮಿತಿ ಕಚೇರಿಯಲ್ಲಿ, ವಿವಿಧ ಸಮಿತಿ ಸಭೆಗಳು ಜರುಗುವ ವಿವರ ಇಂತಿದೆ. ಅ. ೮ ರಂದು ಬೆಳಿಗ್ಗೆ ೧೧ ಗಂಟೆಗೆ ನಗರ ಅಲಂಕಾರ ಮತ್ತು ಮಹಾದ್ವಾರ ಸಮಿತಿ ಸಭೆ ನಡೆಯಲಿದೆ. ಅದೇ ದಿನ ಮಧ್ಯಾಹ್ನ ೩ ಗಂಟೆಗೆ ಜಿಲ್ಲಾ ದರ್ಶನ ಸಮಿತಿ ಸಭೆ, ಅ. ೯ ರಂದು ಬೆಳಿಗ್ಗೆ ೧೧ ಗಂಟೆಗೆ ಸ್ವಾಗತ, ವಿಚಾರಣೆ ಹಾಗೂ ಮಾಹಿತಿ ಸಮಿತಿ, ಮಧ್ಯಾಹ್ನ ೩ ಗಂಟೆಗೆ ವೇದಿಕೆ ನಿರ್ವಹಣಾ ಸಮಿತಿ, ಅ. ೧೦ ರಂದು ಬೆಳಿಗ್ಗೆ ೧೧ ಗಂಟೆಗೆ ಸ್ವಾಗತ ಸಮಿತಿ, ಮಧ್ಯಾಹ್ನ ೩ ಗಂಟೆಗೆ ಸಮನ್ವಯ ಸಮಿತಿ, ಅ. ೧೧ ರಂದು ಬೆಳಿಗ್ಗೆ ೧೧ ಗಂಟೆಗೆ ಅತಿಥಿ ಸತ್ಕಾರ ಸಮಿತಿ, ಮಧ್ಯಾಹ್ನ ೩ ಗಂಟೆಗೆ ಜಾಹೀರಾತು ನಿರ್ವಹಣೆ ಸಮಿತಿ, ಅ. ೧೩ ರಂದು ಬೆಳಿಗ್ಗೆ ೧೧ ಗಂಟೆಗೆ ಸಾಂಸ್ಕೃತಿಕ ಸಮಿತಿ, ಮಧ್ಯಾಹ್ನ ೩ ಗಂಟೆಗೆ ವಸತಿ ಸಮಿತಿ, ಅ. ೧೪ ರಂದು ಬೆಳಿಗ್ಗೆ ೧೧ ಗಂಟೆಗೆ ಸನ್ಮಾನ ಸಮಿತಿ, ಮಧ್ಯಾಹ್ನ ೩ ಗಂಟೆಗೆ ಸಾರಿಗೆ ನಿರ್ವಹಣಾ ಸಮಿತಿ, ಅ. ೧೫ ರಂದು ಬೆಳಿಗ್ಗೆ ೧೧ ಗಂಟೆಗೆ ಸ್ವಯಂ ಸೇವಕರ ಸಮಿತಿ ಹಾಗೂ ಅದೇ ದಿನ ಮಧ್ಯಾಹ್ನ ೩ ಗಂಟೆಗೆ ಮಹಿಳಾ ಸಮಿತಿ ಸಭೆ ಜರುಗಲಿವೆ.
ಆಯಾ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು, ಸದಸ್ಯರುಗಳು ಸೇರಿದಂತೆ ಸಂಬಂಧಪಟ್ಟವರು ಸಭೆಯಲ್ಲಿ ಭಾಗವಹಿಸುವಂತೆ ಕಸಾಪ ಜಿಲ್ಲಾ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಅವರು ಕೋರಿದ್ದಾರೆ.
0 comments:
Post a Comment