ಕೊಪ್ಪಳ: ಅ. ೨: ನಗರದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ದಿನಾಂಕ ೦೨-೧೦-೨೦೧೧ ರಂದು ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರಿಜಿಯವರ ಜಯಂತಿಯನ್ನು ಆಚರಿಸಿಲಾಯಿತು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಹೊಸಪೆಟೆ ವಿಜಯ ನಗರ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಅಧಿಕಾರಿ ನಾಗರಾಜ ಬೊಮ್ಮನಾಳ ಮಾತನಾಡುತ್ತಾ ಗಾಂದೀಜಿಯವರ ತತ್ವ ಆದರ್ಶಗಳನ್ನು ಯುವ ಜನತೆ ಪಾಲಿಸಬೇಕು, ಗಾಂಧೀಜಿ ಎಲ್ಲಾ ಕಾಲಕ್ಕೂ ಸಲ್ಲುವ ವಿಶಾಲ ವ್ಯಕ್ತಿತ್ವ ಹೊಂದಿದವರಾಗಿದ್ದರು. ಇನ್ನೋರ್ವ ಮುಖ್ಯ ಅಥಿತಿಗಳಾದ ಕನ್ನಡ ಪ್ರಾಧ್ಯಪಕ ಡಾ.ಮಾರ್ಕಂಡೇಯ ಹಂದ್ರಾಳ ಮಾತನಾಡುತ್ತಾ, ಗಾಂಧೀಜಿ ತತ್ವಗಳನ್ನು ಕೇವಲ ಮೌಖಿಕವಾಗಿ ಪಾಲಿಸುತ್ತಿದ್ದೇವೆ, ವಾಸ್ತವಿಕವಾಗಿ ಅಲ್ಲ ಯುವಜನತೆ ಸದ್ಯದ ಸಮಸ್ಯೆಗಳಿಗೆ ಗಾಂಧೀಜಿ ಮಾರ್ಗದಲ್ಲಿ ಪರಿಹಾರವನ್ನು ಕಂಡುಕೊಂಡು ಸಕುಚಿತ ಭಾವದಿಂದ ಹೊರಬರಬೇಕು ಎಂದು ಅವರು ಯುವಕರಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಎಂ.ಎಂ.ಕಂಬಾಳಿಮಠ ವಹಿಸಿದ್ದರು. ಪ್ರಾಸ್ತಾವಿಕವಾಗಿ ಎನ್‌ಎಸ್‌ಎಸ್ ಅಧಿಕಾರಿಗಳಾದ ಶರಣಬಸಪ್ಪ ಮಾತನಾಡಿದರು. ಜಯಂತಿಯ ಅಂಗವಾಗಿ ವಿಶೇಷ ಶ್ರಮಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಹಾವಿದ್ಯಾಲಯದ ವಿದ್ಯಾರ್ಥಿಯಾದ ಹನಮಂತಪ್ಪ ಗಾಳಿ ಕಾರ್ಯಕ್ರಮ ನಿರೂಪಿಸಿದರು.ಮಂಜುನಾಥ ವಂದಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಡಾ.ಮಾರ್ಕಂಡೇಯ ಹಂದ್ರಾಳ ಮಾತನಾಡುತ್ತಿರುವರು, ವೇದಿಕೆಯ ಮೇಲೆ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್, ನಾಗರಾಜ ಬೊಮ್ಮನಾಳ, ಎಂ.ಎಂ.ಕಂಬಾಳಿಮಠ, ನಿರಂಜನ, ಹಾಗೂ ಶರಣಬಸಪ್ಪ ಬಿಳೆಯಲಿ ಉಪಸ್ಥತರಿದ್ದರು.
0 comments:
Post a Comment