PLEASE LOGIN TO KANNADANET.COM FOR REGULAR NEWS-UPDATES


ಗಂಗಾವತಿ, ಅ.೦೮ : ಅಖಿಲ ಭಾರತ ಮಟ್ಟದ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಸಮಗ್ರ ಐತಿಹಾಸಿಕ ಮಾಹಿತಿಗೆ ಜಿಲ್ಲಾದರ್ಶನ ಸಮಿತಿ ಸನ್ನದ್ಧವಾಗಿದೆ ಎಂದು ಜಿಲ್ಲಾದರ್ಶನ ಹಾಗೂ ನಗರಸಭೆ ಸದಸ್ಯ ದೇವಪ್ಪ ಕಾಮದೊಡ್ಡಿ ಹೇಳಿದರು.
ಅವರು ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಲಯದಲ್ಲಿ ನಡೆದ ಜಿಲ್ಲಾದರ್ಶನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಈಗಾಗಲೇ ಅಖಿಲ ಭಾರತ ಮಟ್ಟದ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು ಎಲ್ಲಾ ಉಪಸಮಿತಿಗಳು ಸಿದ್ಧವಾಗಿದ್ದು, ಅದೇ ರೀತಿಯಲ್ಲಿ ಕೊಪ್ಪಳ ಜಿಲ್ಲೆಯ ನಮ್ಮ ಐತಿಹಾಸಿಕ ಮಾಹಿತಿಯನ್ನು ಮೂರು ದಿನ ಸಮ್ಮೇಳನದಲ್ಲಿ ಭಾಗವಹಿಸುವ ಸಾಹಿತ್ಯಾಸಕ್ತರಿಗೆ ದರ್ಶನ ಮಾಡಿಸಲು ೩ಕ್ಕೂ ಹೆಚ್ಚು ಬಸ್ಸಿನ ವ್ಯವಸ್ಥೆ ಮಾಡಲಾಗುವುದು. ಆನೆಗುಂದಿ ಹಾಗೂ ಹಂಪಿ ವೃತ್ತದ ಐಸಿಹಾಸಿಕ ಸ್ಥಳಗಳು, ಕೊಪ್ಪಳ,ಕುಕನೂರು ಹಾಗೂ ವೆಂಕಟಗಿರಿ ಮಾರ್ಗದ ಐತಿಹಾಸಿಕ ಸ್ಥಳಗಳು, ಕನಕಗಿರಿ ಹಾಗೂ ನವಲಿ ಮಾರ್ಗದ ಐತಿಹಾಸಿಕ ಸ್ಥಳಗಳು ಹೀಗೆ ಮೂರು ಭಾಗಗಳನ್ನಾಗಿ ಮಾಡಿ ಪ್ರವಾಸ ಏರ್ಪಡಿಸಲಾಗುತ್ತದೆ. ಒಟ್ಟಾರೆ ಮಾದರಿ ರೀತಿಯಲ್ಲಿ ಜಿಲ್ಲಾದರ್ಶನ ಸಮಿತಿ ಐತಿಹಾಸಿಕ ಸ್ಥಳಗಳ ವೀಕ್ಷಣೆ ಮಾಡಿಸುತ್ತದೆ ಎಂದರು. ಈ ಸಮ್ಮೇಳನ ನಮ್ಮೆಲ್ಲರ ನಾಡ ಹಬ್ಬವಾಗಿ ಎಲ್ಲರೂ ತನು-ಮನ-ಧನದಿಂದ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಪ್ರಧಾನಕಾರ್ಯದರ್ಶಿ ಹಾಗೂ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ   ಶೇಖರಗೌಡ ಮಾಲಿಪಾಟೀಲ, ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ   ಎಸ್.ಬಿ.ಗೊಂಡಬಾಳ, ಸ್ವಾಗತ ಸಮಿತಿ ಸಹಕಾರ್ಯದರ್ಶಿ ಹಾಗೂ ತಾಲೂಕಾ ಕ.ಸಾ.ಪ ಅಧ್ಯಕ್ಷ ಬಸವರಾಜ ಕೋಟಿ  ಜಿಲ್ಲಾದರ್ಶನ ಸಮಿತಿಯ ಪ್ರಧಾನಕಾರ್ಯದರ್ಶಿ ಸಂದೀಪ ಪಾಟೀಲ, ಕಾರಟಗಿಯ ಪ್ರಹ್ಲಾದ ಜೋಷಿ ಇತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top