ಗಂಗಾವತಿ, ಅ.೦೮ : ಅಖಿಲ ಭಾರತ ಮಟ್ಟದ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿನಗಳು ಸಮೀಪಿಸುತಿದ್ದು ಸರ್ವರೂ ತನು-ಮನ-ಧನದಿಂದ ಸಹಕರಿಸಿ ಎಂದು ಸ್ವಾಗತ ಸಮಿತಿ ಪ್ರಧಾನಕಾರ್ಯದರ್ಶಿ ಶೇಖರಗೌಡ ಮಾಲಿಪಾಟೀಲ ಹೇಳಿದರು. ಅವರು ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ಸ್ವಾಗತ ಸಮಿತಿ ಕಛೇರಿಯಲ್ಲಿ ಜಿಲ್ಲಾದರ್ಶನ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ಕನ್ನಡ ತಾಯಿಯ ಕೆಲಸಮಾಡಲು ೩೫ಕ್ಕೂ ಹೆಚ್ಚು ಉಪಸಮಿತಿಗಳು ಸನ್ನದ್ಧವಾಗಿದ್ದು, ಜಿಲ್ಲೆಯ ಸರ್ವಜನರೂ ಪಾಲ್ಗೊಂಡು ರಾಜ್ಯದ ಇತರೆ ಜಿಲ್ಲೆಗಳಿಂದ ಬರುವ ಸಾಹಿತಿಗಳಿಗೆ, ಸಾಹಿತ್ಯಾಸಕ್ತರಿಗೆ ಸ್ವಾಗತ ಮಾಡಲು ಕಂಕಣಬದ್ಧವಾಗಿದ್ದೇವೆ. ಬರುವ ದಿನಗಳಲ್ಲಿ ಸಚಿವರು, ಸಂಸದರು, ಶಾಸಕರು, ಹಾಗೂ ಮಾಜಿಸಚಿವರು, ಸಂಸದರು, ಶಾಸಕರು ಜಿಲ್ಲಾಧಿಕಾರಿಗಳು ಮತ್ತು ಎಲ್ಲಾ ಉಪಸಮಿತಿಗಳು ಒಡಗೂಡಿ ಮನೆ-ಮನೆ ಅತಿಥಿ ಎಂಬ ವಸತಿ ಕಾರ್ಯಕ್ರಮಕ್ಕಾಗಿ ಪಾದಯಾತ್ರೆ ಕೈಗೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ದರ್ಶನ ಸಮಿತಿಯ ಅಧ್ಯಕ್ಷ ದೇವಪ್ಪ ಕಾಮದೊಡ್ಡಿ ಜಿಲ್ಲಾ ಕ.ಸಾ.ಪ ಗೌರವ ಕಾರ್ಯದಶಿ ಎಸ್.ಬಿ.ಗೊಂಡಬಾಳ, ಸ್ವಾಗತ ಸಮಿತಿ ಸಹಕಾರ್ಯದರ್ಶಿ ಹಾಗೂ ತಾಲೂಕಾ ಕ.ಸಾ.ಪ ಅಧ್ಯಕ್ಷ ಬಸವರಾಜ ಕೋಟಿ ಜಿಲ್ಲಾದರ್ಶನ ಸಮಿತಿಯ ಪ್ರಧಾನಕಾರ್ಯದರ್ಶಿ ಸಂದೀಪ ಪಾಟೀಲ, ಕಾರಟಗಿಯ ಪ್ರಹ್ಲಾದ ಜೋಷಿ ಇತರರು ಉಪಸ್ಥಿತರಿದ್ದರು.
0 comments:
Post a Comment