ಕೊಪ್ಪಳ, ೨೩- ಗಣಿ ನಿಷೇದದಿಂದ ಉದ್ಯೋಗವಿಲ್ಲದೆ ತೊಂದರೆ ಅನುಭವಿಸುತ್ತಿರುವ ೯ ಸಾವಿರ ಲಾರಿ ಮಾಲಿಕರು, ೨೦ ಸಾವಿರ ಚಾಲಕರು ಸೇರಿದಂತೆ ಇತರ ಅವಲಂಬಿತ ಉದ್ಯೋಗಿಗಳಿಗೆ ಕೆಲಸ ಒದಗಿಸಲು ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಸರ್ಕಾರ ಕ್ರಮಕೈಗೊಳ್ಳುವುದು ಅಗತ್ಯವಾಗಿದ್ದು, ಸರ್ಕಾರವನ್ನು ಎಚ್ಚರಿಸಲು ಜನಸಂಗ್ರಾಮ ಪರಿಷತ್ ಹೋರಾಟಕ್ಕೆ ಸಿದ್ದವಿದೆ ಎಂದು ರಾಘವೇಂದ್ರ ಕುಷ್ಟಗಿ ಹೇಳಿದರು.
ಅವರು ಮುನಿರಾಬಾದ್ ಕಾಡಾ ಕಛೇರಿ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದರು.
ಗಣಿ ನಿಷೇದದಿಂದ ಆರ್ಥಿಕ ಅಸಮ ತೊಲನ ಉಂಟಾಗಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರದ ವಧದಲ್ಲಿರುವ ಬಳ್ಳಾರಿ, ಚಿತ್ರದುರ್ಗಾ, ತುಮಕೂರ ಜಿಲ್ಲಾಧಿಕಾರಿ ಬಳಿ ಇರುವ ೨.೫ ಲಕ್ಷ ವ್ಯಾ.ಟ. ಅದಿರು ಹರಾಜ ಹಾಕಿ ಹಾನಿಗೊಳಗಾದ ಈ ಜಿಲ್ಲೆಯ ಅಭಿವೃದ್ಧಿಗೆ ಬಳಿಸುವಂತೆ ಸೂಚಿಸಿದ್ದು, ಆ ಹಣದಲ್ಲಿ ಹೂಳು ಎತ್ತಿದರೆ ಲಾರಿ ಕಾರ್ಮಿಕರಿಗೆ ಉದ್ಯೋಗ ದೊರಕುತ್ತದೆಯಲ್ಲದೆ, ರೈತರ ಭೂಮಿಯನ್ನು ಡ್ಯಾಂ ಹೂಳಿನಿಂದ ಫಲವತ್ತುಗೊಳಿಸಬಹುದೆಂದು ಹೇಳಿದರು.
0 comments:
Post a Comment