PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ೨೩- ತುಂಗಭದ್ರಾ ಜಲಾಶಯದ ಹೂಳೆತ್ತುವ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲು ಜನಸಂಗ್ರಾಮ ಪರಿಷತ್ ಅಡಿ ಎರಡು ಸಮಿತಿಗಳ ನೇತೃತ್ವದಲ್ಲಿ ದಿ. ೨೯ ರಂದು ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.
ರವಿವಾರ ತುಂಗಭದ್ರಾ ಜಲಾಶಯದ ಕಾಡಾ ಕಛೇರಿ ಬಳಿ ಜನಸಂಗ್ರಾಮ ಪರಿಷತ್ ಕರೆದಿದ್ದ ಜನಪ್ರತಿನಿಧಿಗಳ ಮತ್ತು ಹೋರಾಟಗಾರರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಮುಂದಿನ ಹೋರಾ ರೂಪಿಸಲು ಎರಡು ಸಮಿತಿ ರಚಿಸಿದ್ದು, ಒಂದು ಚುನಾಯಿತ ಪ್ರತಿನಿಧಿಗಳ ಮತ್ತು ಮಾಜಿ ಸಂಸದ ಮತ್ತು ಮಾಜಿ ಶಾಸಕರ ಸಮಿತಿ ರಚಿಸಿದ್ದು ರೈತ ಹೋರಾಟಗಾರ ಹನುಮಗೌಡ ಸಂಚಾಲಕರನ್ನಾಗಿ ನೇಮಿಸಲಾಗಿದೆ.
ಜನಸಂಗ್ರಾಮ ಪರಿಷತ್ ಅಡಿ ಸಮಿತಿಗೆ ರೈತ ಚಿಂತಕ ಚಂದ್ರಶೇಖರ ಬಾಳೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಮುಖ್ಯಮಂತ್ರಿಗಳನ್ನು ದಿ. ೨೯ರಂದು ಭೇಟಿ ಮಾಡಿ ನಂತರ ಹೋರಾಟ ರೂಪಿಸಲು ನಿರ್ಣಯ ಕೈಗೊಳ್ಳಲು ಕೂಡ ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ತುಂಗಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ್, ಶಾಸಕರಾದ ವೆಂಕಟರಾವ್ ನಾಡಗೌಡ, ಶಿವರಾಜ ತಂಗಡಗಿ, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಮಾಜಿ ಶಾಸಕ ಹಂಪನಗೌಡ್ರ, ರೈತ ಹೋರಾಟಗಾರರಾದ ಹನುಮನಗೌಡ್ರ, ಅಶೋಖಗೌಡ ಹೆಚ್.ಎಸ್. ಪಾಟೀಲ್, ಕೊಪ್ಪಳ ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರ, ಮುಖಂಡರಾದ ಭೀಮನಗೌಡ, ಬಸವರಾಜ ಹಾಲದಳ್ಳಿ ಇತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಎರಡು ನೂರು ರೈತರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.

Advertisement

0 comments:

Post a Comment

 
Top