ಬೆಂಗಳೂರು, ಅ.27: ಲೋಕಾಯುಕ್ತ ಹುದ್ದೆಗೆ ರಾಜ್ಯ ಸರಕಾರ ಶಿಫಾರಸು ಮಾಡಿರುವ ನ್ಯಾ.ಬನ್ನೂರುಮಠರ ವಿರುದ್ಧ ಅಕ್ರಮ ನಿವೇಶನ ಪಡೆದಿರುವ ಆರೋಪ ಕೇಳಿ ಬಂದಿದೆ.ನಗರದ ಅಳ್ಳಾಲಸಂದ್ರದಲ್ಲಿರುವ ನ್ಯಾಯಾಂಗ ಬಡಾವಣೆಯ ಒಂದನೆ ಮುಖ್ಯರಸ್ತೆಯಲ್ಲಿರುವ ನಿವೇಶನ ಸಂಖ್ಯೆ 2118/ಎದಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟಿದ್ದ 100್ಡ60 ವಿಸ್ತೀರ್ಣದ ಜಾಗವನ್ನು ನ್ಯಾ.ಬನ್ನೂರುಮಠ ಕರ್ನಾಟಕ ನ್ಯಾಯಾಂಗ ಇಲಾಖೆಯ ನೌಕರರ ಗೃಹ ನಿರ್ಮಾಣ ಸಂಘದಿಂದ 2001ರಲ್ಲಿ ನಿಯಮ ಬಾಹಿರವಾಗಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಇದೇ ನಿವೇಶನದಲ್ಲಿ 4100 ಚ.ಅ. ವಿಸ್ತೀರ್ಣದ ಮನೆಯನ್ನು ನಿರ್ಮಿಸಲಾಗಿದ್ದು, ಮನೆಯ ಹಿಂಭಾಗದಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನ್ಯಾಯಾಂಗ ಬಡಾವಣೆಯನ್ನು ನಿರ್ಮಿಸಲು 156 ಎಕರೆ ಭೂಮಿಯನ್ನು ಸರಕಾರ ಸ್ವಾಧೀನಪಡಿಸಿಕೊಂಡು ಇದರಲ್ಲಿ 404 ನಿವೇಶನಗಳನ್ನು ಸಿಎ ಹಾಗೂ ಉದ್ಯಾನವನಗಳಿಗಾಗಿ ಮೀಸಲಿಟ್ಟಿತು. ಇವುಗಳ ಪೈಕಿ ನ್ಯಾ. ಬನ್ನೂರುಮಠರಿಗೆ ಹಂಚಿಕೆ ಮಾಡಲಾಗಿರುವ ನಿವೇಶನವೂ ಸೇರಿದೆಯೆಂದು ಹೇಳಲಾಗಿದೆ.
ಅಕ್ರಮ ನಿವೇಶನ ಹೊಂದಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಸೆ.19ರಂದು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಸರಕಾರ ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಿರುವ ನ್ಯಾ.ಬನ್ನೂರುಮಠರ ವಿರುದ್ಧವೂ ಅಕ್ರಮ ನಿವೇಶನ ಪಡೆದಿರುವ ಆರೋಪ ಕೆೀಳಿ ಬಂದಿದೆ.
0 comments:
Post a Comment