PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ :   ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ವತಿಯಿಂದ ಗ್ರಾಮೀಣ ಪೋಲಿಸ್ ಠಾಣೆ ಕೊಪ್ಪಳದಲ್ಲಿ ಚಾಮಲಾಪೂರ ಗ್ರಾಮದ ಶ್ರೀ ದುರ್ಗಾದೇವಿ ಹಾಗೂ ಶ್ರೀ ಮರಿಯಮ್ಮದೇವಿ ಮಹಿಳಾ ಸ್ವಸಹಾಯ ಸಂಘದವರಿಗೆ ತೆರೆದ ಮನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
ಗ್ರಾಮೀಣ ಪೊಲೀಸ ಠಾಣೆಯ ಮಕ್ಕಳ ವಿಶೇಷ ಪೋಲಿಸ ಘಟಕದ ಎ.ಎಸ್.ಐ ಬಸವರಾಜ ಅವರು ಕಾರ್‍ಯಕ್ರಮ ಉದ್ಘಾಟಿಸಿ, ಮಹಿಳೆಯರು ಜಾಗೃತರಾಗಬೇಕು ವಿಶೇಷವಾಗಿ ಅವರಿಗೆ ಇರುವ ಕಾನೂನುಗಳ ಬಗ್ಗೆ ತಿಳಿದುಕೊಂಡು ತಮ್ಮ ಸಮಸ್ಯೆಗಳ ಕಿರುಕುಳ ವಿರುದ್ದ ಠಾಣೆಯಲ್ಲಿ ದೂರು ದಾಖಲಿಸಬೇಕು. ಅಂತೆಯೇ ಬಾಲ್ಯ ವಿವಾಹ, ಬಾಲ ಕಾರ್ಮಿಕತೆ ತಡೆಗಟ್ಟುವುದರಲ್ಲಿ ಮುಂದಾಗಬೇಕು. 
ಪೋಲೀಸ್ ತರಬೇತುದಾರರಾದ  ಉಸ್ಮಾನ್ ರವರು ಪೋಲಿಸ್ ಅಧಿಕಾರಿಗಳ ಕಾರ್‍ಯಚಟುವಟಿಕೆ ಕುರಿತು ವಿವರವಾದ ಮಾಹಿತಿ ಒದಗಿಸಿದರು, ವಾಕಿ ಟಾಕಿ, ಬಂದೂಕು, ಮಹಿಳಾ ಬಂದಿಖಾನೆ ಕುರಿತು ಸವಿವರವಾದ ವಿವರಣೆ ನೀಡಿ, ಪೋಲಿಸ್ ಬಗ್ಗೆ ದೂರು ನೀಡುವುದರ ಬಗ್ಗೆ ಭಯ ಬೇಡ ಎಂದು ಹೇಳಿದರು. 
ಕಾರ್‍ಯಕ್ರಮದಲ್ಲಿ ತಾಲೂಕ ಸಂಯೋಜಕ ಸಂಗಣ್ಣ ಸಂಗಾಪೂರ, ಸಮುದಾಯ ಸಂಘಟಕ ಮಾರುತಿ ಎಮ್.ಎಚ್. ಉಪಸ್ಥಿತರಿದ್ದರು, ಠಾಣೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸಮಜ ಕಾರ್‍ಯಕರ್ತೆ ಕು|| ನಿವೇದಿತಾ ಕಾರ್‍ಯಕ್ರಮ ವಂದಿಸಿದರು .

Advertisement

0 comments:

Post a Comment

 
Top