PLEASE LOGIN TO KANNADANET.COM FOR REGULAR NEWS-UPDATES



ಸತತವಾದ ಅಧ್ಯಯನ ಮತ್ತು ಆಳವಾದ ಅನುಭವಗಳಿಂದ ಬರವಣಿಗೆ ಗಟ್ಟಿಗೊಳ್ಳುತ್ತದೆ. ಯುವ ಬರಹಗಾರರು ಸಮಾಜದಲ್ಲಿ ನಡೆಯುವ ಎಲ್ಲ ಅನ್ಯಾಯ, ದೌರ್ಜನ್ಯ, ಶೋಷಣೆಗಳ ವಿರುದ್ಧ ದನಿಯೆತ್ತುವ ಮೂಲಕ  ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ ಎಂದು ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ಹೇಳಿದರು.       ಧಾರವಾಡ ‘ಸಾಂಸ್ಕೃತಿಕ ಜನೋತ್ಸವ’ದ ದಶಮಾನದ ಸಂಭ್ರಮದಲ್ಲಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯಿಂದ ಬಾಲ ಬಳಗ ಶಾಲೆಯಲ್ಲಿ ನಡೆದ ಎರಡು ದಿನಗಳ ‘ಯುವ ಬರಹಗಾರರ ಸಾಹಿತ್ಯ ಕಮ್ಮಟ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇವತ್ತಿನ ವಿದ್ಯಾಥರ್ಿಗಳ ಓದು ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗಿದೆ. ಅವರಿಗೆ ಸಾಹಿತ್ಯದ ಓದನ್ನು ಪರಿಚಯಿಸುವ ಕಾರ್ಯ ಇಂತಹ ಕಮ್ಮಟಗಳಿಂದ ನಡೆಯಬೇಕಿದೆ. ಆಗಮಾತ್ರವೇ ಭಾಷೆ ಮತ್ತು ಸಾಹಿತ್ಯ ಸಮೃದ್ಧವಾಗಿ ಬೆಳೆಯಲು ಸಾಧ್ಯವಿದೆ ಎಂದರು. ಇಂದಿಗೂ ಶೋಷಣೆ ಅವ್ಯಾಹತವಾಗಿ ನಡೆಯುತ್ತಿದೆ. ಆದರೆ ಮಾಧ್ಯಮಗಳು ಇಂತಹ ವಿಷಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ ಎಂದು ವಿಷಾದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಐ.ಡಿ.ವೈ.ಓ ಯುವಜನ ಸಂಘಟನೆಯ ರಾಜ್ಯಾಧ್ಯಕ್ಷರಾದ ರಾಮಾಂಜನಪ್ಪ ಆಲ್ದಳ್ಳಿ ವಹಿಸಿದ್ದರು. ಕಮ್ಮಟದ ನಿದರ್ೇಶಕರಾದ ಆವಿಷ್ಕಾರ ಸಂಘಟನೆಯ ರಾಜ್ಯ ಸಂಚಾಲಕರಾದ ಡಾ. ಬಿ.ಆರ್. ಮಂಜುನಾಥ ಉಪಸ್ಥಿತರಿದ್ದರು.          ಕಮ್ಮಟದಲ್ಲಿ ನಡೆದ ಕವಿಗೋಷ್ಟಿಯಲ್ಲಿ ಯುವಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು. ನಂತರದ ವಿವಿಧ ಗೋಷ್ಟಿಗಳಲ್ಲಿ ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಘಟ್ಟಗಳು, ನಾನೇಕೆ ಬರೆಯುತ್ತೇನೆ, ಬರಹಗಾರರ ಮುಂದಿರುವ ಸವಾಲುಗಳು, ಕನ್ನಡ ಸಾಹಿತ್ಯದ ಸೈದ್ಧಾಂತಿಕ ಆಯ್ಕೆಗಳು – ಈ ವಿಷಯಗಳ ಕುರಿತಾಗಿ ವಿಸ್ತೃತವಾಗಿ ಚಚರ್ೆ ನಡೆಯಿತು. ಈ ಗೋಷ್ಠಿಗಳನ್ನು ನಡೆಸಿಕೊಟ್ಟ ಡಾ|| ಬಿ.ಆರ್.ಮಂಜುನಾಥ್ರವರು ಕನ್ನಡ ಸಾಹಿತ್ಯದಲ್ಲಿ ಬಂದ ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ ಸಾಹಿತ್ಯ ಪಂಥಗಳನ್ನು ವಿಶ್ಲೇಷಿಸಿದರು. ಯುವ ಬರಹಗಾರರು ಖ್ಯಾತಿ, ಜನಪ್ರಿಯತೆಗಳಿಗೆ ಗಮನಕೊಡದೆ ಸಾಮಾಜಿಕ ವಿಷಯಗಳನ್ನು, ಜನಸಾಮಾನ್ಯರ ನೋವು, ನಲಿವುಗಳನ್ನು ಪ್ರತಿಬಿಂಬಿಸುವ ಸಾಹಿತ್ಯವನ್ನು ಸೃಷ್ಠಿಸಬೇಕು. ಅವರ ಸಾಹಿತ್ಯ ಜನರಿಗೆ ತಲುಪುವಂತಾಗಬೇಕು. ಜನಪ್ರಿಯತೆಗಾಗಿ ಸಂಧಾನ ಮಾಡಿಕೊಳ್ಳುವುದು ಬೇಡ; ಹಾಗೆಯೇ, ಜನರಿಂದ ದೂರವಾದ, ಅರ್ಥವಾಗದ ಸಾಹಿತ್ಯವೂ ಬೇಡ. ತಮ್ಮ ಅನಿಸಿಕೆಗಳನ್ನು,  ಸಾಮಾಜಿಕ ಸಮಸ್ಯೆಗಳಿಗೆ ತಮ್ಮ ಸ್ಪಂದನೆಗಳನ್ನು ತಮ್ಮ ಸಾಹಿತ್ಯದಲ್ಲಿ ತರಬೇಕು, ಹದಗೆಟ್ಟಿರುವ ಇಂದಿನ ಸಮಾಜದ ಬದಲಾವಣೆಗೆ ಪೂರಕವಾದ ಸಾಹಿತ್ಯ ಸೃಷ್ಠಿಯ ಮೂಲಕ ತಮ್ಮ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು. ಯುವ ಬರಹಗಾರರು ತಮ್ಮ ಬರಹಗಳನ್ನು, ಬರವಣಿಗೆ ಕುರಿತಾದ ತಮ್ಮ ಪ್ರಶ್ನೆ, ಅನುಮಾನಗಳನ್ನು ಮುಕ್ತವಾಗಿ ಹಂಚಿಕೊಂಡರು.          ಎರಡನೇ ದಿನ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನಾಡಿನ ಹಿರಿಯ ಕವಿಗಳಾದ ನಾಡೋಜ ಡಾ.ಚನ್ನವೀರ ಕಣವಿಯವರು ಮಾತನಾಡುತ್ತಾ ಸಾಹಿತ್ಯ ಮತ್ತು ಸಾಮಾಜಿಕ ಪ್ರಜ್ಞೆ ಎರಡೂ ಒಂದೇ ನಾಣ್ಯದ ಮುಖಗಳಿದ್ದಂತೆ. ಅನುಭವಗಳ ವಿನಿಮಯದಿಂದ  ಸಮಾಧಾನ ನೆಮ್ಮದಿ ಉಂಟಾಗುತ್ತದೆ. ಸಮರ್ಥವಾದ ಭಾಷೆಯ ಮೂಲಕ ಭಾವನೆಗಳನ್ನು ಬಿಡುಗಡೆ ಮಾಡುವುದೇ ಸಾಹಿತ್ಯವಾಗಿದೆ. ಯುವ ಬರಹಗಾರರು ಸಾಹಿತ್ಯದ ಜೊತೆಗೆ ವೈಚಾರಿಕ ಹಾಗೂ ವೈಜ್ಞಾನಿಕ ವಿಷಯಗಳ ಕುರಿತು ಆಳವಾದ ಅಧ್ಯಯನ ಮಾಡಬೇಕು. ತಮ್ಮ ಜ್ಞಾನವನ್ನು ವಿಸ್ತಾರಗೊಳಿಸಬೇಕು. ಅವರು ಅಂತರಂಗ ಮತ್ತು ಬಹಿರಂಗಗಳನ್ನು ಒಟ್ಟಿಗೆ ಹಿಡಿಯುವಂತಹ ಸಾಹಿತ್ಯವನ್ನು ಯುವ ಬರಹಗಾರರು ರಚಿಸಬೇಕಾಗಿದೆ ಎಂದರು.ಕಮ್ಮಟದಲ್ಲಿ ಭಾಗವಹಿಸಿದ ಶಿಬಿರಾಥರ್ಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಾಂಜನಪ್ಪ ಆಲ್ದಳ್ಳಿ ವಹಿಸಿದ್ದರು. ಡಾ.ಬಿ.ಆರ್. ಮಂಜುನಾಥ ಹಾಗೂ ರಾಧಾಕೃಷ್ಣ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top