PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳದ ಶಾರದಾ ಸಂಗೀತ ಮತ್ತು ಸಂಸ್ಕೃತ ಶಿಕ್ಷಣ ಸಂಸ್ಥೆ (ರಿ) ಯ ಸಂಸ್ಥಾಪಕ ದಿ. ಹನುಮಂತರಾವ್ ಬಂಡಿಯವರ ಪ್ರಥಮ ಪುಣ್ಯ ಸ್ಮರಣೆಯ ಅಂಗವಾಗಿ ಅವರ ಶಿಷ್ಯ ವೃಂದ ಹಾಗೂ ಅವರ ಅಭಿಮಾನಿ ಬಳಗದವರ ವತಿಯಿಂದ ಅ. ೧೮ ರಂದು ಮಂಗಳವಾರ ಸಂಜೆ ೬ ಗಂಟೆಗೆ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  
  ಈ ಕಾರ್ಯಕ್ರಮದಲ್ಲಿ ಆಕಾಶವಾಣಿ ಹಾಗೂ ದೂರದರ್ಶನದ ಹೆಸರಾಂತ ಸಂಗೀತ ಕಲಾವಿದರಾದ ಪಂ. ಜಯತೀರ್ಥ ಮೇವುಂಡಿಯವರ ಶಾಸ್ತ್ರೀಯ ಗಾಯನ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.  ಎಲ್ಲ ಸಂಗೀತ ಅಭಿಮಾನಿಗಳು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೊಪ್ಪಳದ ಶಾರದಾ ಸಂಗೀತ ಮತ್ತು ಸಂಸ್ಕೃತ ಶಿಕ್ಷಣ ಸಂಸ್ಥೆಯ ಪ್ರಕಟಣೆ ಕೋರಿದೆ.

Advertisement

0 comments:

Post a Comment

 
Top