PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ೧೦-೧೦-೨೦೧೧ ರಂದು  ಯಲಬಿರ್ಗಾ ತಾಲೂಕಿನ ೭ನೇ ಕನ್ನಡ ಸಾಹಿತ್ಯ ಸಮ್ಮೆಳ ಅಕ್ಟೊಬರ್ ೩೧ ರಂದು ಬೊಳಟಗಿಯಲ್ಲಿ ನೇಡೆಯಲ್ಲಿದ್ದು  ಅದರ ಸರ್ವಾಧ್ಯಕ್ಷರನ್ನಾಗಿ ಸಾಹಿತಿಗಳಾದ ಡಾ|| ವಿ.ಬಿ.ರಡ್ಡೆರವರನ್ನು  ಆಯ್ಕೆಗೊಳಿಸಿದ ಇನ್ನಲೆಯಲ್ಲಿ  ಯಲಬುರ್ಗಾ ಕಸಾಪದಿಂದ ಇಂದು ಅವರ ಮನೆಯಲ್ಲಿ  ಸನ್ಮಾನಿಸಿ ಅಹ್ವಾನ ನಿಡಲಾಯಿತು.
 ಈ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರಾದ  ವೀರನಗೌಡ ಪಾಟೀಲ ಬೊಳಟಗಿಯವರು ತಮ್ಮ ಗ್ರಾಮದಲ್ಲಿ  ಸಾಹಿತ್ಯ ಸಮ್ಮೆಳನ ಏರ್ಪಡಿಸಿದ್ದು ಹೆಚ್ಚು ಸಂತಸ ತಂದಿದೆ ರಡ್ಡೇರರಂತ ಹಿರಿಯ ಸಾಹಿತಿಗಳನ್ನು  ತುಂಬು ಹೃದಯದಿಂದ ಸ್ವಾಗತಿಸಿಕೊಂಡು ಸಮ್ಮೇಳನವನ್ನು ಎಲ್ಲಾ ರೀತಿಯಿಂದ ಯಶಸ್ವಿಗೊಳಿಸುವದಾಗಿ ತಿಳಿಸಿದರು. ಯಲಬುರ್ಗಾ  ತಾಲೂಕ  ಕಸಪ ಅಧ್ಯಕ್ಷರಾದ ಈಶಪ್ಪ ಮಳಗಿ  ನುಡಿತೇರನ್ನು ಎಳೆಯಲು  ಈಗಾಗಲ್ಲೇ  ಸಂಪೂರ್ಣಸಿದ್ದತೆ ಯಾಗಿದ್ದು ಅರ್ಥಪೂರ್ಣ ವಿಚಾರ ಗೊಷ್ಠಿ ಏರ್ಪಡಿಸುವದರ ಮೂಲಕ  ಸಮ್ಮೆಳನಕ್ಕೆ ಹೊಸಆಯಾಮ ನೀಡಲಾಗುವದು ಎಂದು ಹೇಳಿದರು 
 ಡಾ|| ಮಾಹಾಂತೇಶ ಮಲ್ಲನಗೌಡರು  ವಿ.ಬಿ.ರಡ್ಡೇರವರ ಜಿವನ ಮತ್ತು ಬದಕು ಬೆಳದು ಬಂದ ಬಗೆ ಹಾಗೂ ಅವರ ಸಾಹಿತ್ಯ ಕೃಷಿ ಕುರಿತು  ವಿವರಿಸಿದರು.  ಈ ಸಂದರ್ಭದಲ್ಲಿ ಸಾಹಿತ್ಯಗಳಾದ ವಿಠ್ಠಪ್ಪ ಗೋರಂಟ್ಲಿ, ವಕೀಲರಾದ ಬಿ.ಎಸ್. ಪಾಟೀಲ ಮಾತನಾಡಿದರು. ಸನ್ಮಾಸ್ವಿಕರಿಸಿದ ಡಾ|| ವಿ.ಬಿ.ರಡ್ಡೇರವರು  ನಮ್ಮ ಕನ್ನಡ ಸಾಹಿತ್ಯ ಸಾಕಷ್ಟು ಸಮೃದ್ದವಾಗಿದೆ ಅದು ನಮ್ಮೆಲ್ಲ ಯುವಪಿಳಿಗೆಗೆ   ಪರಿಚಯಿಸಬೇಕಿದೆ ಚಂದ್ರಶೇಖರ ಕಂಬಾರ ಇವರಿಗೆ ಜ್ಞಾನಪಿಠ ಪ್ರಶಸ್ತಿ ದೊರೆಯುವ ಮೂಲಕ  ನಮ್ಮ ಕನ್ನಡ ಸಾಹಿತ್ಯಕ್ಕೆ ಮತ್ತೊಂದು ಗರಿ ಮುಡಿದೆ ಇಂತಹ ಸಂದರ್ಭದಲ್ಲಿ ನನಗೆ ಸಿಕ್ಕಿರುವ  ಸಮ್ಮೇಳಾಧ್ಯಕ್ಷತೆ ಗೌರವನಮ್ಮ ಎಲ್ಲಾ ಆತ್ಮಿಯ ವಲಯಕ್ಕೆ ದೊರಕಿರುವ ಗೌರವ ಎಂದರು ಈ ಸಂದರ್ಭದಲ್ಲಿ  ಹನಮಂತಪ್ಪ ಅಂಡಗಿ ಚಿಲವಾಡಗಿ, ಶ್ರೀನಿವಾಸ ಚಿತ್ರಗಾರ, ಭೀಮರಡ್ಡಿ ಶಾಡ್ಲಗೇರಿ, ಶ್ರೀಮತಿ ನಿರ್ಮಲಾ.ವಿ ರಡ್ಡೆರ , ಶಿವನಗೌಡ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು  ಕೊಪ್ಪಳ ತಾಲೂಕ ಸಾಹಿತ್ಯ ಪರಿಷತ ಅಧ್ಯಕ್ಷರಾದ ಜಿ.ಎಸ್.ಗೊನಾಳ, ಕಾರ್ಯಕ್ರಮವನ್ನು ನಿರೂಪಿಸಿದರು ಕೊನೆಯಲ್ಲಿ  ಶಿವು ರಾಜೂರು ಯಲಬುರ್ಗಿ  ವಂದಿಸಿದರು.

Advertisement

0 comments:

Post a Comment

 
Top