ಕೊಪ್ಪಳ : ಪಿ.ಲಂಕೇಶ್ ನವ್ಯ ಸಾಹಿತ್ಯದ ಪ್ರಮುಖ ಲೇಖಕರು. ಲಂಕೇಶ್ ಕನ್ನಡ ಭಾಷೆಯನ್ನು ಅತೀ ಶಕ್ತಿಯುತವಾಗಿ ಬಳಸಿಕೊಂಡ ಲೇಖಕ. ಅವರ ಅವ್ವ ಕವನ ಸಾರ್ವಕಾಲಿಕವಾದದ್ದು ಎಂದು ಡಾ.ವಿ.ಬಿ.ರಡ್ಡೇರ್ ಅಭಿಪ್ರಾಯಪಟ್ಟರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೭೫ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಲಂಕೇಶ್ ಕಾವ್ಯ ಕುರಿತು ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಲಂಕೇಶ್ ರ ನಿರ್ಭಯ ನಿಲುವು ಅವರ ಬರಹಗಳಲ್ಲಿ ಎದ್ದು ಕಾಣುತ್ತಿತ್ತು. ಲಂಕೇಶ್ ಬರಹಗಳಲ್ಲಿ ಕಾದಂಬರಿಗಳು ಮತ್ತು ನಾಟಕಗಳು ಮಹತ್ವದವು. ಗ್ರಾಮೀಣ ಭಾಷೆ, ಪರಿಸರ, ನಡುವಳಿಕೆಗಳ ಗಟ್ಟಿಯಾದ ಚಿತ್ರಣ ಅವರ ಬರಹಗಳಲ್ಲಿದೆ. ಲಂಕೇಶ್ ರ ಕವನದ ಅವ್ವ ನಮ್ಮೆಲ್ಲರ ಅವ್ವ ಆಗುತ್ತಾಳೆ ಎಂದು ಹೇಳಿದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಶಾಂತು ಬಡಿಗೇರ- ಚೆಲುವೆ, ಶಿವಪ್ಪ ಶೆಟ್ಟರ- ಹಲ್ಲು, ಪುಷ್ಪಾವತಿ- ಕರುಳಬಳ್ಳಿ, ವೀರಣ್ಣ ಹುರಕಡ್ಲಿ- ಕೋಳಿ ಕೂಗಲಿಲ್ಲ, ವಿ.ಬಿ.ರಡ್ಡೇರ್- ಬೆರೆಸೋಣ ಬಾ ಹೃದಯಗಳ, ಅಲ್ಲಮಪ್ರಭು ಬೆಟ್ಟದೂರು- ನೀಲಗಿರಿ, ಪುಷ್ಪಲತಾ ಏಳುಬಾವಿ- ಚುಟುಕುಗಳು, ರೇಣುಕಾ ಕರಿಗಾರ್- ನರೇನ್, ಬಸವರಾಜ ಚೌಡ್ಕಿ- ಸೂರ್ಯ, ಮೆಹಮೂದಮಿಯಾ- ಬಿದಿರು ಮೆಳೆ, ವಿಜಯಲಕ್ಷ್ಮಿ ಮಠದ- ಬಾಳ ಬಟ್ಟೆ ಕವನಗಳನ್ನು ವಾಚನ ಮಾಡಿದರು.
ಲಂಕೇಶ್ ರ ಅವ್ವ, ನಾನು ಗಾಂಧಿ ಮತ್ತು ಮೇಷ್ಟು ಕವನವನ್ನು ಮಹೇಶ್ ಬಳ್ಳಾರಿ ವಾಚನ ಮಾಡಿದರೆ, ಸಿರಾಜ್ ಬಿಸರಳ್ಳಿ ನನ್ನ ಸುತ್ತ ಕವನವನ್ನು ವಾಚನ ಮಾಡಿದರು. ಕಾರ್‍ಯಕ್ರಮದಲ್ಲಿ ಡಾ.ಮಹಾಂತೇಶ ಮಲ್ಲನಗೌಡರ, ಶಿವಾನಂದ ಹೊದ್ಲೂರ, ಜಿ.ಎಸ್.ಗೋನಾಳ, ಲಕ್ಷ್ಮೀ,ಶರಣಪ್ಪ ವಡ್ರಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸ್ವಾಗತವನ್ನು ಡಾ.ರೇಣುಕಾ ಕರಿಗಾರ ವಂದನಾರ್ಪಣೆಯನ್ನು ಮಹೇಶ ಬಳ್ಳಾರಿ ಮಾಡಿದರು. ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.
0 comments:
Post a Comment