PLEASE LOGIN TO KANNADANET.COM FOR REGULAR NEWS-UPDATES


ಮುಂಬೈ, ಅ.10: ಖ್ಯಾತ ಘಜಲ್ ಗಾಯಕ, ಪದ್ಮಭೂಷಣ ಜಗಜಿತ್ ಸಿಂಗ್ ಸೋಮವಾರ ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ 70 ವರ್ಷ ವಯಸ್ಸಾಗಿತ್ತು. ಎರಡು ವಾರಗಳ ಹಿಂದೆ ಬ್ರೈನ್ ಹ್ಯಾಮರೇಜ್‌ನಿಂದಾಗಿ ಮುಂಬೈಯ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 8 ಗಂಟೆಗೆ ನಿಧನರಾದರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
1941 ಫೆಬ್ರವರಿ 8ರಂದು ರಾಜಸ್ತಾನದ ಗಂಗಾನಗರದಲ್ಲಿ ಜನಿಸಿದ ಜಗಜಿತ್ ಸಿಂಗ್, ಘಜಲ್ ಗಾಯನದಲ್ಲಿ ಖ್ಯಾತಿ ಗಳಿಸಿದ್ದರು ಹಾಗೂ ಪದ್ಮಭೂಷಣ ಪ್ರಶಸ್ತಿಗೂ ಬಾಜನರಾಗಿದ್ದರು.
ಹಜಾರೊ ಖ್ವಾಯಿಶೆ ಐಸಿ,  ಎ ಕಾಗಜ ಕಿ ಕಸ್ತಿ ಮತ್ತು  ಝುಕಿ ಝುಕಿಸೇ ನಜರ್ ಮೊದಲಾದ ಘಜಲ್‌ ಹಾಡುಗಳಿಗೆ ತಮ್ಮ ಧ್ವನಿಯಿಂದ ಜೀವ ತುಂಬಿ ಶ್ರೋತೃಗಳ ಮನಸೂರೆಗೊಂಡಿದ್ದ ಘಜಲ್‌ಗಳ ‘ಸಾಮ್ರಾಟ’ ಎಂದೇ ಖ್ಯಾತರಾಗಿದ್ದ ಜಗಜಿತ್ ಸಿಂಗ್, ಹಿಂದಿ ಭಾಷೆಯಲ್ಲಲ್ಲದೇ ಪಂಜಾಬಿ, ಬೆಂಗಾಲಿ, ಗುಜರಾತಿ ಮತ್ತು ನೇಪಾಳಿ ಭಾಷೆಗಳಲ್ಲೂ ಹಾಡಿದ್ದಾರೆ.

Advertisement

0 comments:

Post a Comment

 
Top