PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು,  : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಜನಾರ್ದನ ರೆಡ್ಡಿ ಕಳೆದ ವರ್ಷ ಉನ್ನತ ಸ್ಥಾನದಲ್ಲಿ ಕುಳಿತು ನಾಡಿನ ಜನತೆಗೆ ದೀಪಾವಳಿಯ ಶುಭಾಶಯವನ್ನು ಕೋರಿದ್ದರೆ, ಈ ಬಾರಿ ಕಾರಾಗೃಹದಲ್ಲಿ ದೀಪಾವಳಿಯನ್ನು ಆಚರಿಸಬೇಕಾಗಿದೆ. ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಯವರಿಗೆ ಸೋಮವಾರ ಬಿಡುಗಡೆಯ ಭಾಗ್ಯ ಲಭಿಸಲಿಲ್ಲ. ಇದರಿಂದಾಗಿ ಅವರು ಈ ಬಾರಿಯ ದೀಪಾವಳಿ ಹಬ್ಬವನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆಚರಿಸಬೇಕಾಗಿದೆ.
ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಸಿದಂತೆ ಜೈಲುಪಾಲಾಗಿರುವ ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಅ.28ಕ್ಕೆ ಮುಂದೂಡಿದೆ. ಇದೇ ಸಂದರ್ಭದಲ್ಲಿ ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು, ಜಾಮೀನು ನಿರಾಕರಿಸಿದ ಮತ್ತು ಚಿಕಿತ್ಸೆಗೆ ಲೋಕಾಯುಕ್ತ ವಿಶೇಷ ಕೋರ್ಟ್ ಆದೇಶ ವಿಸಿದ ಕೆಲವೊಂದು ಷರತ್ತುಗಳ ರದ್ದತಿಗೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಅ.28ಕ್ಕೆ ಮುಂದೂಡಿದೆ. ಕಟ್ಟಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ವಿ.ಪಿಂಟೊ ಅವರು, ಲೋಕಾಯುಕ್ತ ಪೊಲೀಸರಿಗೆ ನೊಟೀಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.
ವೈದ್ಯಕೀಯ ವರದಿ ಸಲ್ಲಿಕೆಗೆ ಆದೇಶ: ಅನಾರೋಗ್ಯದ ಕಾರಣ ನೀಡಿ ಕಟ್ಟಾ ಜಾಮೀನು ಕೋರಿರುವ ಹಿನ್ನೆಲೆಯಲ್ಲಿ, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಾಕಾರಿಗಳು ಕಟ್ಟಾ ಆರೋಗ್ಯ ಸ್ವರೂಪ ಸಂಬಂಧ ಅೀನ ನ್ಯಾಯಾಲಯಕ್ಕೆ ಒದಗಿಸಿದ್ದ ವೈದ್ಯಕೀಯ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸುವಂತೆ ನ್ಯಾಯಮೂರ್ತಿಗಳು ಕಟ್ಟಾ ಪರ ವಕೀಲರಿಗೆ ಆದೇಶಿಸಿ ವಿಚಾರಣೆಯನ್ನು ಅ.28ಕ್ಕೆ ಮುಂದೂಡಿದರು. ದೇಶದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ತಮಗಿರುವ ಕ್ಯಾನ್ಸರ್ ರೋಗಕ್ಕೆ ಗುಣವಾಗುವುದು ಕಷ್ಟಸಾಧ್ಯ. ಆದುದರಿಂದ ಲಂಡನ್‌ನ ರಾಯಲ್ ಫ್ರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಬೇಕಾಗಿದ್ದು, ಅದಕ್ಕಾಗಿ ಜಾಮೀನು ನೀಡುವಂತೆ ಕಟ್ಟಾ ಹೈಕೋರ್ಟ್‌ನ್ನು ಕೋರಿದ್ದರು.
ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆ ನೇಮಕಾತಿ ಅವ್ಯವಹಾರದ ಆರೋಪಿ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಎಚ್.ಎನ್.ಕೃಷ್ಣರ ಜಾಮೀನು ಅರ್ಜಿ ಸಂಬಂಧ ಸಿಐಡಿ ಪೊಲೀಸರಿಗೆ ನೊಟೀಸ್ ಮಾಡಿರುವ ನ್ಯಾ.ಬಿ.ವಿ.ಪಿಂಟೊ ಅವರು, ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಅ.31ಕ್ಕೆ ಮಂದೂಡಿದರು.
ಯಡಿಯೂರಪ್ಪರಿಗೂ ಜೈಲಲ್ಲೇ ದೀಪಾವಳಿ:
ಯಡಿಯೂರಪ್ಪರಿಗೆ ಜೈಲಾ ಅಥವಾ ಬೇಲಾ ಎಂಬ ಕುರಿತು ತೀವ್ರ ಕುತೂಹಲ ಕೆರಳಿದ ನಡುವೆ, ಅವರ ಮಧ್ಯಾಂತರ ಜಾಮೀನು ಅರ್ಜಿಯನ್ನು ನ್ಯಾ.ಬಿ.ವಿ.ಪಿಂಟೋ ಅವರು ಸೋಮವಾರ ವಜಾಗೊಳಿಸಿದರು. ಪ್ರಕರಣದ ಈ ಹಂತದಲ್ಲಿ ಆರೋಪಿಗೆ ಮಧ್ಯಾಂತರ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದಾಗ, ಮೂಲ ಜಾಮೀನು ಅರ್ಜಿ ಕುರಿತು ವಿಚಾರಣೆ ಮುಂದುವರೆಯಲಿ ಎಂದು ಯಡಿಯೂರಪ್ಪ ಪರ ವಕೀಲರು ಅರ್ಜಿಯನ್ನು ಹಿಂಪಡೆದರು. ಸೋಮವಾರವೂ ಕೂಡ ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿ ಪರ ವಕೀಲರು ವಾದ ಮಂಡಿಸಿದರು. ವಾದ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲ್ಪಟ್ಟಿತ್ತು. ಬಾಷಾ ಪರ ವಕೀಲ ಸಿ.ಎಚ್.ಹನುಮಂತ ರಾಯ್ ಅ.28ರಂದು ವಾದ ಮಾಡಲಿದ್ದಾರೆ. ಯಡ್ಡಿ ಜಾಮೀನಿಗೆ ಪಾಷಾ ಆಕ್ಷೇಪಣೆ: ಭೂ ಹಗರಣ ಸಂಬಂಧ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿರುವ ಯಡಿಯೂರಪ್ಪರಿಗೆ ಜಾಮೀನು ನೀಡಬಾರದು ಎಂದು ದೂರುದಾರ ಸಿರಾಜಿನ್ ಬಾಷಾ ಸೋಮವಾರ ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಈಗಲೂ ರಾಜ್ಯ ಸರಕಾರದ ಮೇಲೆ ಹಿಡಿತ ಹೊಂದಿದ್ದಾರೆ. ಸರಕಾರದ ಒಂದು ಭಾಗವಾಗಿರುವ ಅವರು, ತಮ್ಮ ರಾಜಕೀಯ ಅಕಾರ ಮತ್ತು ಪ್ರಭಾವದ ಮೂಲಕ ಯಾವುದೇ ವ್ಯಕ್ತಿಯ ಮೇಲೆ ಪ್ರಭಾವ ಬೀರಬಲ್ಲರು. ಪ್ರಕರಣದ ಬಹುತೇಕ ಸಾಕ್ಷಿಗಳು ಸರಕಾರಿ ಅಕಾರಿಗಳೇ ಆಗಿರುವುದರಿಂದ ಅವರಿಗೆ ಜಾಮೀನು ನೀಡಿದಲ್ಲಿ ಪ್ರಕರಣದ ಸಾಕ್ಷಿಗಳನ್ನು ಬೆದರಿಸುವ ಅಥವಾ ಅವರ ಮೇಲೆ ಪ್ರಭಾವ ಬೀರಬಹುದಾದ ಸಾಧ್ಯತೆಯಿದೆ. ಅಲ್ಲದೆ, ಸಾಕ್ಷಾಧಾರಗಳನ್ನು ನಾಶಪಡಿಸಿ, ಪ್ರಕರಣದ ದಿಕ್ಕುತಪ್ಪಿಸುವ ಮತ್ತು ವಿಚಾರಣೆಗೆೆ ಅಡ್ಡಿ ಉಂಟು ಮಾಡುವ ಸಾಧ್ಯತೆಯಿದೆ ಎಂದು ಬಾಷಾ ಆಕ್ಷೇಪಿಸಿದ್ದಾರೆ. ಪ್ರಕರಣದ ಸಂಬಂಧ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಲ್ಲದೆ, ಪ್ರತಿದಿನವೂ ಹೊಸ ಹೊಸ ದೂರುಗಳು ಯಡಿಯೂರಪ್ಪರ ವಿರುದ್ಧ ದಾಖಲಾಗುತ್ತಲೇ ಇವೆ.
ಅವರ ವಿರುದ್ಧ ಆರೋಪಗಳು ಗಂಭೀರವಾಗಿದ್ದು, ಮೇಲ್ನೋಟಕ್ಕೆ ದೃಢಪಟ್ಟಿವೆ ಕೂಡ. 7ವರ್ಷ ಕಠಿಣ ಶಿಕ್ಷೆಗೆ ಗುರಿಯಾಗುವ ಆರೋಪಗಳನ್ನು ಯಡಿಯೂರಪ ಎಸಗಿದ್ದು, ಅವರ ವಿರುದ್ಧ ದಾಖಲಾಗಿರುವ ಇತರೆ ಖಾಸಗಿ ದೂರುಗಳ ವಿಚಾರಣೆ ಅೀನ ನ್ಯಾಯಾಲಯದಲ್ಲಿ ಬಾಕಿ ಇದೆ. ಈ ಹಂತದಲ್ಲಿ ಅವರಿಗೆ ಜಾಮೀನು ಮಂಜೂರು ಮಾಡಿದರೆ, ಇತರೆ ಖಾಸಗಿ ದೂರಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದುದರಿಂದ ಅವರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಬಾಷಾ ಅರ್ಜಿಯಲ್ಲಿ ನ್ಯಾಯಾಲಯವನ್ನು ಕೋರಿದ್ದಾರೆ.


ಜಾಮೀನು ಅರ್ಜಿಯ ವಿಚಾರಣೆ ಅ.28ಕ್ಕೆ

ವಕೀಲ ಸಿರಾಜಿನ್ ಬಾಷಾ ತಮ್ಮ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದಾಖಲಿಸಿರುವ ಒಂದು, ನಾಲ್ಕು ಮತ್ತು ಐದನೆ ಖಾಸಗಿ ದೂರಿನ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.

Advertisement

0 comments:

Post a Comment

 
Top