PLEASE LOGIN TO KANNADANET.COM FOR REGULAR NEWS-UPDATES

ಗಂಗಾವತಿ :  ಅನಿವಾರ್ಯ ಕಾರಣಗಳಿಂದ ಡಿಸೆಂಬರ್ 9,10,11ಕ್ಕೆ  ನಡೆಸಲು ಉದ್ದೇಶಿಸಲಾಗಿರುವ ಸಮ್ಮೇಳನ  ಆ ದಿನಾಂಕ ತಪ್ಪಿದರೆ ಮುಂದೆ ಗಂಗಾವತಿಯಲ್ಲಿ ನಡೆಯುವುದೇ ಅನುಮಾನವೇ ? ಕಸಾಪ ಅಧ್ಯಕ್ಷ ನಲ್ಲೂರ ಪ್ರಸಾದರ ಪ್ರಕಾರ ಹೌದು. ಯಾಕೆಂದರೆ ಡಿಸೆಂಬರ್ ನಂತರ ಕಸಾಪಕ್ಕೆ ಚುನಾವಣೆ ನಡೆಯಬೇಕಿದೆ. ಗಂಗಾವತಿಯ ಜನತೆ ಹೆಚ್ಚಿನ ಆಸಕ್ತಿಯಿಂದ ಸಮ್ಮೇಳನ ನಡೆಸಬೇಕಿದೆ. ಆ ದಿನಾಂಕ ತಪ್ಪಿದರೆ ಗಂಗಾವತಿಯಲ್ಲಿ ಸಮ್ಮೇಳನ ನಡೆಯುವುದೇ ಅನುಮಾನ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ಸ್ವಾಗತ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಚುನಾವಣೆ ಹಿನ್ನೆಲೆಯಲ್ಲಿ ಸೂಕ್ತ ರೀತಿಯ ಕೆಲಸಗಳು ನಡೆದಿಲ್ಲ.  ಈಗಲಾದರೂ ತೀವ್ರಗತಿಯಲ್ಲಿ ಎಲ್ಲ ಸಿದ್ದತೆಗಳು ನಡೆಬೇಕಿದೆ ಎಂದರು. ಸಭೆಯಲ್ಲಿ ಲೋಕಸಭಾ ಸದಸ್ಯ ಎಸ್.ಶಿವರಾಮಗೌಡ, ಶಾಸಕರಾದ ಶಿವರಾಜ ತಂಗಡಗಿ, ಪರಣ್ಣ ಮುನವಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಸಲವೂ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಗೈರಾಗಿದ್ದು ಸಾಹಿತ್ಯಾಸಕ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.  ಇದುವರೆಗೆ ನಡೆದ ಸಭೆಗಳಲ್ಲಿ ಮೊದಲಿನೊಂದು ಸಭೆ ಬಿಟ್ಟರೆ ಅವರು ಸಾಹಿತ್ಯ ಸಮ್ಮೇಳನದ ಬಗ್ಗೆ ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎಂದು ಸಾಹಿತ್ಯಾಸಕ್ತರು ಬೇಸರವ್ಯಕ್ತಪಡಿಸಿದ್ದಾರೆ.

Advertisement

0 comments:

Post a Comment

 
Top