ಹೃದಯವಂತರು ಕವನಗಳನ್ನು ಬರೆಯಬಲ್ಲರು. ಕವಿಗಳ ಸಂಗವೇ ಆನಂದ ನೀಡುವಂಥಹದ್ದು. ನಾನೂ ಬರವಣಿಗೆ ಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದೇ ಕವಿಯಾಗಿ. ಪುರಾಣಗಳಲ್ಲಿ ಹಲವಾರು ವಿಷಯಗಳು ರೂಪಕಗಳ ಮಾದರಿಯಲ್ಲಿವೆ. ನಮ್ಮ ಮೇಲೆ ಹೇರಲಾದ ಅಭಿಪ್ರಾಯಗಳನ್ನು ಪ್ರಶ್ನಿಸಬೇಕು. ನಂಬಿಕೆಗಳು ಬದಲಾಗಬಹುದು ಆದರೆ ಸತ್ಯ ಬದಲಾಗುವುದಿಲ್ಲ. ದೇವರು ಸರ್ವಶಕ್ತ ಎಂದಾಗ ಆಯುಧಗಳು ಅವಶ್ಯಕವೇ? ದೇವರ ಆಜ್ಞೆ ಇಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ ಎಂದರೆ ದುಷ್ಟನ ಸೃಷ್ಟಿ ಹೇಗಾಯಿತು ಎಂದು ನಾಟಕಕಾರ,ಕಾದಂಬರಿಕಾರ ಯೋಗಿಶ್ ಮಾಸ್ಟರ್ ಪ್ರಶ್ನಿಸಿದರು. ಅವರು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಈಶ್ವರ ಗುಡಿಯ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ೧೭೫ನೇ ಕವಿಸಮಯದಲ್ಲಿ ಮಾತನಾಡುತ್ತಿದ್ದರು.
ಕವಿಸಮಯದಲ್ಲಿ ಕವಿಗೋಷ್ಠಿಯ ನಂತರ ದೇವರ ಕೈಯಲ್ಲಿ ಆಯುಧಗಳು ಕುರಿತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂವಾದಲ್ಲಿ ಮಾತನಾಡಿದ ಯೋಗೀಶ್ ಮಾಸ್ಟರ್ -ಎಂತಹ ತುಂಟನಾದರೂ ಕೆಟ್ಟವನಾದರೂ ಮಗುವನ್ನು ತಾಯಿ ಕೊಲ್ಲುವುದಿಲ್ಲ. ಹೀಗಿರುವಾಗ ದೇವರಿಗೆ ತನ್ನ ಸೃಷ್ಟಿಯನ್ನೇ ಸಂಹರಿಸಲು ಆಯುಧಗಳು ಬೇಕೆ? ಸರ್ವಶಕ್ತನಾದ ದೇವರು ತನ್ನ ಶಕ್ತಿಯಿಂದಲೇ ಸಂಹರಿಸಬಹುದಲ್ಲವೇ? ದುಷ್ಟತನ ಅಥವಾ ಕೆಟ್ಟತನ ಎನ್ನುವುದು ಯಾವುದು? ತಮಗೆ ಅನಕೂಲವಾಗುವ ದೃಷ್ಟಿಕೋನದಲ್ಲಿ ಒಳ್ಳೆಯದು ಮತ್ತು ಕೆಟ್ಟದನ್ನು ಅರ್ಥೈಸಲಾಗುತ್ತಿದೆ. ಪುರಾಣಗಳ ಸೃಷ್ಟಿ ಹೇಗಾಯಿತು? ಬರೆದವರ‍್ಯಾರು? ಅದರ ಹಿಂದಿನ ಇತಿಹಾಸವನ್ನು ಅರಿಯಬೇಕು ಎಂದು ಹೇಳಿದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ನಟರಾಜ ಸವಡಿ - ಮಡದಿ, ಕನಕಪ್ಪ ತಳವಾರ- ಶಾಯರಿಗಳು, ಅಮರದೀಪ- ತಮಟೆ ಸದ್ದು, ಎಂ.ಕೆ.ಮಠದ- ಸ್ತ್ರೀ ಶ್ರೇಷ್ಠತೆ, ಬಸವರಾಜ್ ಸಂಕನಗೌಡ್ರ- ಗಜಲ್, ಎನ್.ಜಡೆಯಪ್ಪ- ತುಡುಗಿ, ಎ.ಪಿ.ಅಂಗಡಿ- ಕೃತಕ ಗಾಂಧಿ, ಶ್ರೀನಿವಾಸ ಚಿತ್ರಗಾರ- ಸ್ವಾರ್ಥಿ, ಜಿ.ಎಸ್.ಬಾರಕೇರ-ವಸಂತ, ಪುಷ್ಪಲತಾ ಏಳುಬಾವಿ- ಗಜಲ್, ಶಾಂತಾದೇವಿ ಹಿರೇಮಠ- ಸ್ವಾತಂತ್ರ್ಯ, ಎಸ್.ದಾನಕೈ- ದೂರವಿರು. ಅನಸೂಯಾ ಜಾಗೀರದಾರ -ನಮ್ಮೂರ ರಸ್ತೆಗಳು, ವಿಜಯಲಕ್ಷ್ಮೀ ಮಠದ- ಚುಟುಕು, ಸಿರಾಜ್ ಬಿಸರಳ್ಳಿ-ಕವಿತೆ, ಲಲಿತಾ ಭಾವಿಕಟ್ಟಿ- ವಸಂತನಿಗೊಂದು ಶಾಪ, ಅಲ್ಲಮಪ್ರಭು ಬೆಟ್ಟದೂರ- ವಾಜಪೇಯ, ಶಾಂತಪ್ಪ ಬಡಿಗೇರ- ನಿನ್ನ ಮನದಲ್ಲಿ ನೀನು, ವೀರಣ್ಣ ಹುರಕಡ್ಲಿ- ನನ್ನೆದೆ ಬರಿದಾಗಿದೆ ಕವನಗಳನ್ನು ವಾಚನ ಮಾಡಿದರು.
ಕಾರ‍್ಯಕ್ರಮದಲ್ಲಿ ಎ.ಎಂ.ಮದರಿ,ಶಿವಾನಂದ ಹೊದ್ಲೂರ, ಜಿ.ಎಸ್.ಗೋನಾಳ, ಶೀಲಾ ಹಾಲ್ಕುರಿಕೆ, ಅಶೋಕ,ಕಲ್ಲನಗೌಡ್ರ, ಮಾನಪ್ಪ ಬೆಲ್ಲದ,ಹನುಮಂತಪ್ಪ ಅಂಡಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ‍್ಯಕ್ರಮದ ಸ್ವಾಗತಗೀತೆಯನ್ನು ಅನಸೂಯಾ ಜಾಗೀರದಾರ ನೆರವೇರಿಸಿದರು. ಕಾರ‍್ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.
0 comments:
Post a Comment