ಮೈಸೂರಿನ ಗೌಸಿಯಾ ನಗರದಲ್ಲಿ ಒಂದೇ ಕುಟುಂಬದ ಕೊಲೆಯ ಬಗ್ಗೆ ಪಿ.ಯು.ಸಿ.ಎಲ್. ಮೈಸೂರು ಘಟಕದ ಸತ್ಯಶೋಧನಾ ಸಮಿತಿ ವರದಿ
ಮೈಸೂರು ಕ್ಯಾತಮಾರನಹಳ್ಳಿಯ ಗೌಸಿಯಾನಗರದಲ್ಲಿ ೦೧-೦೪-೨೦೧೪ ರ ಮುಂಜಾನೆ ಒಂದೇ ಕುಟುಂಬದ ಮನೆಗೆ ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದ್ದು, ಈ ಅಗ್ನಿ ದುರಂತದಲ್ಲಿ ಯಜಮಾನ ಅಫ್ಜಲ್ ಪಾಷಾ, ಪತ್ನಿ ಶರಿನ್‌ತಾಜ್ ಮತ್ತು ಮಕ್ಕಳಾದ ಮೆಹಫೂಜ್ ಯೂನಿಸ್, ಯೂಸುಫ್, ಶಪಿ ಮತ್ತು ಮಸೂದ್ ಗಾಯಗೊಂಡಿದ್ದು ಕೆ.ಆರ್.ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರಲ್ಲಿ ಅಫ್ಜಲ್ ಪಾಷಾ ಹೆಂಡತಿ ಶಿರಿನ್‌ತಾಜ್ ಹಾಗೂ ಮಗು ಶಧಿ ತೀರಿಕೊಂಡಿದ್ದಾರೆ. ನಾಲ್ಕು ಮಕ್ಕಳನ್ನು ಜೆ.ಎಸ್.ಎಸ್. ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ವರ್ಗಾಯಿಸಲಾಗಿದೆ. ಅತಿ ಬಡವರೇ ವಾಸಿಸುವ ಈ ಪ್ರದೇಶದಲ್ಲಿ ನಡೆದ ಈ ಹೃದಯ ವಿದ್ರಾಕ ಘಟನೆಯ ಹಿಂದಿರುವ ಸತ್ಯಾಸತ್ಯತೆಗಳನ್ನು ಮತ್ತು ಸಾಮಾಜಿಕ ಕಾರಣಗಳನ್ನು ಪತ್ತೆ ಹಚ್ಚಲು ಪಿ.ಯು.ಸಿ.ಎಲ್. ಮೈಸೂರು ಘಟಕವು ಶ್ರೀಯುತರಾದ ಟಿ.ಆರ್. ನಟರಾಜ್, ಪಿ.ಎ.ಕುಮಾರ್, ಮರಿದಂಡಯ್ಯ ಬುದ್ಧ, ಅಬ್ದುಲ್‌ಅಜೀಜ್, ಅಬ್ದುಲ್ ರೆಹಮಾನ್, ತನ್‌ವೀರ್ ಪಾಶಾ, ಸಲೀಮ್, ರತಿರಾವ್ ಹಾಗೂ ಡಾ.ಲಕ್ಷ್ಮೀನಾರಾಯಣರವರು ದಿನಾಂಕ ೯ ಹಾಗೂ ೧೦ ರ ಏಪ್ರಿಲ್ ೨೦೧೪ ರಂದು ಜೆ.ಎಸ್.ಎಸ್. ಆಸ್ಪತ್ರೆ ಹಾಗೂ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.
೧. ಘಟನೆಯ ವಿವರ : ಸಾವಿಗೀಡಾದ ಅಫ್ಜಲ್ ಪಾಷಾ ವೃತ್ತಿಯಲ್ಲಿ ನಲ್ಲಿ ಕೆಲಸಗಾರನಾಗಿದ್ದು, ಪತ್ನಿ ಶರಿನ್‌ತಾನ್ ಅಗರ್‌ಬತ್ತಿ ಉಜ್ಜಿ ಜೀವನ ನಿರ್ವಹಿಸುತ್ತಿದ್ದರು. ಸೋಮವಾರ ರಾತ್ರಿ ತಮ್ಮ ಐದು ಮಕ್ಕಳ ಜೊತೆ ಒಂದೇ ಕೊಠಡಿಯ ಅತಿ ಪುಟ್ಟ ಮನೆಯಲ್ಲಿ ಮಲಗಿದ್ದರು. ಮಂಗಳವಾರ (೦೧-೦೪-೨೦೧೪) ಬೆಳಗಿನ ಜಾವ ಅವರ ಸಮೀಪದ ಮನೆಯ ಹಸೀನಾ ಮತ್ತು ಇತರ ಐದು ಜನರ ಗುಂಪು ಇವರ ಬಾಗಿಲಿನ ಚಿಲಕ ಹಾಕಿ ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಬೆಂಕಿಯ ತಾಪೊ ತಪ್ಪಿಸಿಕೊಳ್ಳಲು ಕುಟುಂಬದವರು ಮನೆಯ ಂsbesಣos sheeಣ ನ ಮಾಡನ್ನು ಬಡಿದು ಒಡೆದು ಅರಚಿಕೊಂಡಿದ್ದಾರೆ. ನೆರೆಹೊರೆಯವರು ಅವರನ್ನೆಲ್ಲಾ ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಎರಡು ಕುಟುಂಬದ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇತ್ತೆಂದು ಆರು ತಿಂಗಳ ಹಿಂದೆ ಮಕ್ಕಳ ವಿಚಾರವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. (ಅಫ್ಲಜಲ್ ಪಾಷಾ) ಹಾಗೂ ೧೫ ದಿನಗಳ ಹಿಂದೆ ಸಹ ಒಂದು ಸಣ್ಣ ಪ್ರಕರಣದ ಬಗ್ಗೆ ಮತ್ತೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಅಫ್ಜಲ್ ಪಾಷಾ ರೂ. ೫೦೦೦/- ಸಾಲವಾಗಿ ಪಡೆದು ಅದು ಇಂದು ರೂ. ೫೦,೦೦೦/- ಕ್ಕೆ ಏರಿದೆ. ಇದರ ವಸೂಲಿಗಾಗಿ ಆ ಪುಟ್ಟಮನೆಯನ್ನು ತನಗೆ ಮಾರುವಂತೆ ಆದಿಲ್ ಮತ್ತು ಅವನ ಕುಟುಂಬವು ಒತ್ತಡ ಹೇರುತ್ತಿದ್ದರು. ಈ ಲೇವಾದೇವಿಯ ಅಂತ್ಯ ಕೊಲೆ ಪರ್ಯಾವಸಾನವಾಗಿದೆ.
ಹಿನ್ನೆಲೆ: ಮಹದೇವಪುರ ರಸ್ತೆ ಮತ್ತು ಜರ್ಮನ್ ಪ್ರೆಸ್ ಹಿಂಭಾಗದ ತ್ರಿಕೋನ ಆಕೃತಿಯ ಈ ಜನ ನಿಭಿಡ ಪ್ರದೇಶವು ವಾರ್ಡ್ ೫೦ ಆಗಿದೆ. ಇಲ್ಲಿ ಸುಮಾರು ೫೦,೦೦೦ ಜನಸಂಖ್ಯೆ ಇದೆ. ಬಹುಪಾಲು ಮುಸಲ್ಮಾನ್‌ರವರೇ ಇಲ್ಲಿ ವಾಸಿಸುತ್ತಿದ್ದಾರೆ. ೯೦% ಕೂಲಿಕಾರರು ಮತ್ತು ಬೀಡಿ, ಬ್ಯಾಗ್, ಗಂಧದ ಕಡ್ಡಿ ಉಜ್ಜಿ, ಸಣ್ಣ ಪುಟ್ಟ ವ್ಯಾಪಾರಿಗಳಾಗಿದ್ದಾರೆ. ಪ್ರತಿ ರಾತ್ರಿ ವಸತಿ ಇಲ್ಲದೆ ಸುಮಾರು ೧೦೦ ಜನ ರಸ್ತೆ ಬದಿಯಲ್ಲೆ ಮಲಗುತ್ತಾರೆ. ನೀರಿನ ಸಮಸ್ಯೆ ಅಗಾಧ. ಸರಿಯಾದ ಸರಬರಾಜು ಆಗದೆ ನೀರಿಗಾಗಿ ದಿನನಿತ್ಯ ಬವಣೆ ಪಡುತ್ತಾರೆ. ಇಲ್ಲಿ ೧೦-೧೨ ದಿನಕ್ಕೊಮ್ಮೆ ನೀರು ಬಿಡುತ್ತಾರೆ ಎಂದು ಜನ ದೂರುತ್ತಿದ್ದಾರೆ. ಇಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ. ಪಕ್ಕದ ಉದಯಗಿರಿ ಆಸ್ಪತ್ರೆಯೇ ಗತಿ. ಇರುವುದೊಂದು ದೊಡ್ಡ ಮಸೀದಿಯಲ್ಲಿ ೧೫೦೦ ಜನರಿಗೆ ಮಾತ್ರ ನಮಾಜ್ ಮಾಡಲು ಅವಕಾಶವಿದೆ. ಇನ್ನು ಸಣ್ಣ ಪುಟ್ಟ ೧೫-೧೮ ಮಸೀದಿಗಳಿವೆ. ವಾಸ್ತವವಾಗಿ ಗಾಯಾಳುಗಳ ಚಿಕಿತ್ಸೆಗೆ ಸುಮಾರು ಎರಡು ಲಕ್ಷ ಸಂಗ್ರಹವಾಗಿದ್ದು ಸಕಾಲದಲ್ಲಿ ಸದುಪಯೋಗವಾಗಿದೆ.
ಕೂಲಿಕಾರರೇ ಹೆಚ್ಚಾಗಿ ವಾಸಿಸವು ಈ ಪ್ರದೇಶದಲ್ಲಿ ಸಮಯ ಸಂದರ್ಭದಲ್ಲಿ ಹಣ ಬೇಕಾದರೆ ಸ್ಥಳೀಯ ಬಡ್ಡಿ ಮಾಫಿಯಾವೇ ಗತಿ. ಅವರು ಮೀಟರ್ ಬಡ್ಡಿದರದಲ್ಲಿ ಇಲ್ಲಿಯ ಜನತೆಯನ್ನು ಹೀರುತ್ತಿದ್ದಾರೆ. ಗಮನಾರ್ಹ ಅಂಶವೆಂದರೆ ಇವರೆಲ್ಲಾ ಮುಸ್ಲಿಂರೇ, ವಾಸ್ತವವಾಗಿ ಇಸ್ಲಾಂನಲ್ಲಿ ಬಡ್ಡಿ ವ್ಯವಹಾರ ನಿಶಿದ್ದ. ಸದರಿ ಅಫೋಜಲ್ ಪಾಷಾರವರ ಕುಟುಂಬ ಬಡ್ಡಿ ಜಾಲಕ್ಕೆ ಸಿಲುಕಿ, ರೂ. ೫೦,೦೦೦/- ತೀರಿಸಲಾಗದೆ ಈ ಬೆಳೆದ ಮೊತ್ತಕ್ಕೆ ಮನೆ ವಶಪಡಿಸಲು ಹೊರಟವರು ಈ ಹೀನ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ಹೇಳಲಾಗಿದೆ. ಸದರಿ ಗೌಸಿಯಾ ನಗರದಲ್ಲಿ ಈ ಆರ್ಥಿಕ ಪರಿಸ್ಥಿತಿ ಮುಂದುವರೆದರೆ ಇನ್ನೂ ಅನೇಕ ಕುಟುಂಬಗಳು ಬಲಿಪಶುವಾಗುವುದು ಖಚಿತ.
ತಂಡದ ಅಭಿಪ್ರಾಯಗಳು
೧. ಗೌಸಿಯಾನಗರ ಒಂದು ಸೂಕ್ಷ್ಮ ಪ್ರದೇಶ. ಕೆಲವು ವರ್ಷಗಳ ಇಂದೆ ಕೋಮು ಗಲಭೆಯಿಂದಾಗಿ ಇಲ್ಲಿ ಅನೇಕರು ಪ್ರಾಣ ತೆತ್ತಿದ್ದಾರೆ.
೨. ಮೂಲಭೂತ ನಾಗರೀಕ ಸೌಲಭ್ಯವನ್ನು ಪರಿಪೂರ್ಣವಾಗಿ ಒದಗಿಸಲು ಸರ್ಕಾರ ಹಾಗೂ ನಗರ ಸಭೆ ವಿಫಲವಾಗಿದೆ. ಅದರಲ್ಲೂ ನೀರು ಮತ್ತು ಆರೋಗ್ಯದ ವ್ಯವಸ್ಥೆಯ ನಿರ್ವಹಣೆ ಅತ್ಯಂತ ಅಸಮರ್ಪಕ.
೩. ಅಲ್ಲೊಂದು ಕಾನೂನು ಬಾಹಿರ ಬಡ್ಡಿ ಮಾಫಿಯಾ ಕೆಲಸ ಮಾಡುತ್ತಿದೆ.
೪. ಜನಸಾಮಾನ್ಯರಿಗೆ ಆರ್ಥಿಕ ಸಾಲಸೌಲಭ್ಯ ಒದಗಿಸಲು ಯಾವುದೇ ಪ್ರಯತ್ನ ಮಾಡಲಾಗಿಲ್ಲ.
೫. ಆಕ್ರಮಣಕ್ಕೊಳಗಾದ ಅಫ್ಜಲ್ ಪಾಶಾ ಕುಟುಂಬಕ್ಕೆ ವೈದ್ಯಕೀಯ ವೆಚ್ಚಕ್ಕಾಗಿ ಸರ್ಕಾರ ಯಾವುದೇ ಸಹಾಯ ಹಸ್ತ ನೀಡಿಲ್ಲ.
ಪಿ.ಯು.ಸಿ.ಎಲ್. ನ ಹಕ್ಕೊತ್ತಾಯಗಳು
೧. ಅಫ್ಜಲ್ ಪಾಶಾ ಕುಟುಂಬಕ್ಕೆ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ವಹಿಸಬೇಕು.
೨. ಗೌಸಿಯಾನಗರ ಪ್ರದೇಶದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಬಡ್ಡಿ ಮಾಫಿಯಾವನ್ನು ಸಂಪೂರ್ಣವಾಗಿ ಸದೆಬಡಿಯಬೇಕು. ಪರ್ಯಾಯವಾಗಿ ಸ್ಥಳೀಯವಾಗಿಯೇ ಸರ್ಕಾರದ ವತಿಯಿಂದ ಸಾಲ ಸೌಲಭ್ಯ ದೊರೆಯುವಂತಾಗಬೇಕು.
೩. ಸ್ಥಳೀಯವಾಗಿ ಸಾರ್ವಜನಿಕ ಆಸ್ಪತ್ರೆಯೊಂದು ಸ್ಥಾಪನೆ ಆಗಬೇಕು.
೪. ಪ್ರತಿನಿತ್ಯವು ಪೂರ್ಣ ಪ್ರಮಾಣದ ಕುಡಿಯುವ ನೀರಿನ ತುರ್ತಾಗಿ ವ್ಯವಸ್ಥೆ ಆಗಲೇಬೇಕು.
೫. ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು.
0 comments:
Post a Comment