ಹೊಸದಿಲ್ಲಿ, ಅ.22: 2ಜಿ ತರಂಗಗುಚ್ಛ ವಿತರಣೆ ಹಗರಣದ ಬಂಧಿತ ಆರೋಪಿಗಳಾದ ಮಾಜಿ ಟೆಲಿಕಾಂ ಸಚಿವ ಎ.ರಾಜಾ,ಡಿಎಂಕೆ ಸಂಸತ್ ಸದಸ್ಯೆ ಕನಿಮೋಳಿ ಹಾಗೂ ಇತರ 12 ಮಂದಿ ಮತ್ತು ಮೂರು ಕಂಪೆನಿಗಳ ವಿರುದ್ಧ ಭಾರತೀಯ ದಂಡ ಸಂಹಿ ತೆಯ 409ನೆ ಸೆಕ್ಷನ್‌ನಡಿ ಕ್ರಿಮಿನಲ್ ದೋಷಾರೋಪ ಹೊರಿಸಲಾಗಿದೆ. ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿ ಅಥವಾ ಬ್ಯಾಂಕರ್ ಅಥವಾ ಏಜೆಂಟ್‌ನಿಂದ ಕ್ರಿಮಿನಲ್ ಸ್ವರೂ ಪದ ವಿಶ್ವಾಸದ್ರೋಹವನ್ನೆಸಗಿದ ಪ್ರಕ ರಣದಲ್ಲಿ ಈ ದೋಷಾರೋಪ ಹೊರಿಸಲಾಗಿದ್ದು, ನ್ಯಾಯಾಂಗ ವಿಚಾರಣೆಯು ನವೆಂಬರ್ 11ರಂದು ಆರಂಭವಾಗಲಿದೆ.
ಒಂದು ವೇಳೆ ನ್ಯಾಯಾಲಯದ ವಿಚಾರಣೆಯಲ್ಲಿ ಈ ಆರೋಪಿಗಳು ದೋಷಿಗಳೆಂದು ಸಾಬೀತಾದಲ್ಲಿ, ಕ್ರಿಮಿ ನಲ್ ಒಳಸಂಚು ಹಾಗೂ ನಂಬಿಕೆ ದ್ರೋಹದ ಅಪರಾಧಕ್ಕಾಗಿ ಅವರಿಗೆ ಗರಿಷ್ಠ ಶಿಕ್ಷೆಯಾಗಿ ಜೀವಾವಧಿ ಸಜೆ ಯನ್ನು ಮತ್ತು ಕನಿಷ್ಠವೆಂದರೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸ ಬಹುದಾಗಿದೆ. ಶನಿವಾರ ಹೊಸದಿಲ್ಲಿಯ ಪಾಟಿ ಯಾಲಾ ನ್ಯಾಯಾಲಯದಲ್ಲಿ ವಿಚಾ ರಣೆ ನಡೆಸಿದ ವಿಶೇಷ ನ್ಯಾಯಾಧೀಶ ಓ.ಪಿ.ಸಾನಿ, 2ಜಿ ಹಗರಣದ ಎಲ್ಲ 17 ಮಂದಿ ಆರೋಪಿಗಳ ವಿರುದ್ಧ ಹೊರಿಸಲಾದ ಆರೋಪಗಳಿಗೆ ಬಲವಾದ ಸಾಕ್ಷಗಳಿರುವುದನ್ನು ಕಂಡುಕೊಂಡ ಬಳಿಕ ಅವರ ವಿರುದ್ಧ ದೋಷಾರೋಪ ಹೊರಿಸಿ ಆದೇಶ ನೀಡಿದರು. ತಮ್ಮ ಮೇಲಿನ ಆರೋಪಗಳನ್ನು ಎಲ್ಲ ಆರೋಪಿಗಳು ನಿರಾಕರಿಸಿದ ಬಳಿಕ, ನ್ಯಾಯಾಧೀಶ ಸಾನಿ ಪ್ರಕರಣದ ನ್ಯಾಯಾಂಗ ವಿಚಾರಣೆಯನ್ನು ನವೆಂಬರ್ 11ರಂದು ಆರಂಭಿಸಲು ದಿನ ನಿಗದಿಪಡಿಸಿದರು.
ಆರೋಪಿಗಳ ಪೈಕಿ ರಾಜಾ ಹಾಗೂ ಮಾಜಿ ಟೆಲಿಕಾಂ ಕಾರ್ಯದರ್ಶಿ ಸಿದ್ಧಾರ್ಥ ಬೆಹ್ರೂವಾ ಸಾರ್ವಜನಿಕ ಸೇವೆಯಲ್ಲಿದ್ದ ವ್ಯಕ್ತಿಗಳಾಗಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಸೆಕ್ಷನ್ 409ರನ್ವಯ ಕ್ರಿಮಿನಲ್ ಸ್ವರೂಪದ ನಂಬಿಕೆ ದ್ರೋಹದ ಆರೋಪ ಹೊರಿಸಲಾಗಿದೆ. ಕನಿಮೋಳಿ ಹಾಗೂ ರಾಜಾರ ಮಾಜಿ ಖಾಸಗಿ ಕಾರ್ಯದರ್ಶಿ ಆರ್.ಕೆ.ಚಂದೋಲಿಯಾ ಸೇರಿದಂತೆ ಇತರ 15 ಮಂದಿಯ ವಿರುದ್ಧ ಸೆಕ್ಷನ್ 409ಕ್ಕೆ ಅನುಗುಣವಾಗಿ ಭಾರತೀಯ ದಂಡ ಸಂಹಿತೆಯ 120(ಬಿ) ಸೆಕ್ಷನ್ ಅನ್ವಯ ಕ್ರಿಮಿನಲ್ ಸಂಚಿನ ಆರೋಪ ಕೂಡಾ ಹೊರಿಸಲಾಗಿದೆ.
ಎಲ್ಲ ಆರೋಪಿಗಳ ವಿರುದ್ಧವೂ ಸೆಕ್ಷನ್ 409ರನ್ವಯ ಮೊಕದ್ದಮೆ ದಾಖಲಿಸಲು ನ್ಯಾಯಾಲಯ ಆದೇಶ ನೀಡಿರುವುದು ಅವರಿಗೆ ಅತಿ ದೊಡ್ಡ ಹಿನ್ನಡೆಯಾಗಿದೆ. ಈ ಎಲ್ಲ ಆರೋಪಿಗಳ ವಿರುದ್ಧವೂ ವಂಚನೆ, ಕ್ರಿಮಿನಲ್ ಸಂಚು, ಫೋರ್ಜರಿ, ಅಕ್ರಮವಾಗಿ ಪ್ರತಿಫಲ ಸ್ವೀಕಾರ ಹಾಗೂ ಸಾರ್ವಜನಿಕ ನಂಬಿಕೆ ದ್ರೋಹದ ಕ್ರಿಮಿನಲ್ ಉಲ್ಲಂಘನೆಯ ಆರೋಪಗಳನ್ನು ಹೊರಿಸಲಾಗಿದೆ. 2ಜಿ ಹಗರಣದಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿರುವ ಟೆಲಿಕಾಂ ಸಂಸ್ಥೆಗಳಾದ ರಿಲಾಯನ್ಸ್ ಟೆಲಿಕಮ್ಯುನಿಕೇಶನ್ಸ್, ಯೂನಿಟೆಕ್ ವಯರ್‌ಲೆಸ್ ಪ್ರೈ.ಲಿ.(ತಮಿಳ್ನಾಡು) ಹಾಗೂ ಪ್ರಸ್ತುತ ಡಿಬಿಎಟಿ ಸ್ಯಾಲ್ಯಾಟ್ ಎಂದು ಕರೆಯಲ್ಪಡುವ ಸ್ವಾನ್ ಟೆಲಿಕಾಂ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಸಂಚು ಹಾಗೂ ಕುಮ್ಮಕ್ಕಿನ ಆರೋಪ ಹೊರಿಸಲಾಗಿದೆ. 2ಜಿ ಹಗರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಸಿಬಿಐ ಏಳು ತಿಂಗಳ ಹಿಂದೆಯೇ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಮಾಜಿ ಟೆಲಿಕಾಂ ಸಚಿವ ಎ.ರಾಜಾ ಈ ಬಹು ಸಹಸ್ರ ಕೋಟಿ ಹಗರಣದ ಹಿಂದಿನ ಸೂತ್ರಧಾರಿಯೆಂದು ಅದು ಚಾರ್ಜ್‌ಶೀಟ್‌ನಲ್ಲಿ ಆಪಾದಿಸಿದೆ.
ಕರುಣಾ-ಸೋನಿಯಾ ಮಾತುಕತೆ
ಹೊಸದಿಲ್ಲಿ, ಅ.22: ಕನಿಮೋಳಿಯವರ ತಂದೆ ಹಾಗೂ ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಶನಿವಾರ ಹೊಸದಿಲ್ಲಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಮಾತುಕತೆ ನಡೆಸಿದರು. ಕನಿಮೋಳಿ ಕಳೆದ ಆರು ತಿಂಗಳು ಗಳಿಂದ ತಿಹಾರ್ ಜೈಲಿನಲ್ಲಿದ್ದು, ಅವರಿಗೆ ಈತನಕ ಜಾಮೀನು ದೊರೆತಿಲ್ಲ. ಏತನ್ಮಧ್ಯೆ ಕನಿಮೋಳಿ ಸೇರಿದಂತೆ ಪ್ರಕರಣದ ವಿವಿಧ ಆರೋಪಿಗಳು ಸಲ್ಲಿಸಿ ರುವ ಜಾಮೀನು ಅರ್ಜಿಗಳ ಆಲಿಕೆಯು ಅಕ್ಟೋಬರ್ 24ರಿಂದ ನಡೆಯಲಿದೆ
ಹೊಸದಿಲ್ಲಿ, ಅ.22: ಕನಿಮೋಳಿಯವರ ತಂದೆ ಹಾಗೂ ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಶನಿವಾರ ಹೊಸದಿಲ್ಲಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಮಾತುಕತೆ ನಡೆಸಿದರು. ಕನಿಮೋಳಿ ಕಳೆದ ಆರು ತಿಂಗಳು ಗಳಿಂದ ತಿಹಾರ್ ಜೈಲಿನಲ್ಲಿದ್ದು, ಅವರಿಗೆ ಈತನಕ ಜಾಮೀನು ದೊರೆತಿಲ್ಲ. ಏತನ್ಮಧ್ಯೆ ಕನಿಮೋಳಿ ಸೇರಿದಂತೆ ಪ್ರಕರಣದ ವಿವಿಧ ಆರೋಪಿಗಳು ಸಲ್ಲಿಸಿ ರುವ ಜಾಮೀನು ಅರ್ಜಿಗಳ ಆಲಿಕೆಯು ಅಕ್ಟೋಬರ್ 24ರಿಂದ ನಡೆಯಲಿದೆ
0 comments:
Post a Comment