ಕೊಪ್ಪಳ : ಸಮಾಜಮುಖಿಯಲ್ಲದ ಸಾಹಿತ್ಯದಿಂದ ಪ್ರಯೋಜನವಿಲ್ಲ. ವಿಚಾರಾತ್ಮಕವಾದ ಸಾಹಿತ್ಯವೇ ಪ್ರಧಾನವಾಗಬೇಕು ಆದರಿಂದು ಪ್ರಚಾರಾತ್ಮಕ ಸಾಹಿತ್ಯ ಹೆಚ್ಚು ಪ್ರಚಾರದಲ್ಲಿದೆ ಇದು ವಿಷಾಧನೀಯ ಎಂದು ಹಂಪಿ ವಿ.ವಿ.ಯ ಪ್ರಾಧ್ಯಾಪಕ ಡಾ.ಸಿ.ಆರ್.ಗೋವಿಂದರಾಜು ಹೇಳಿದರು. ಅವರು ಸಾಹಿತ್ಯ ಭವನದಲ್ಲಿ ನಡೆದ 3ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾಹಿತ್ಯವಲಯದಲ್ಲಿ ಬೌದ್ಧಿಕ ಅಸ್ಪೃಶ್ಯತೆ ಎನ್ನುವುದು ಈಗಲೂ ಉಳಿದುಕೊಂಡಿದೆ. ಅದನ್ನು ಹೋಗಲಾಡಿಸಬೇಕು ನಿರಂತರ ಸೃಜನಶೀಲತೆಯನ್ನು ರೂಡಿಸಿಕೊಳ್ಳಬೇಕು ಎಂದರು.
ಉದ್ಘಾಟನೆಗೂ ಮುನ್ನ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣವನ್ನು ಸ್ವಾಗತ ಸಮಿತಿಯ ಅಧ್ಯಕ್ಷ ಕರಡಿ ಸಂಗಣ್ಣ ಮಾಡಿದರು. ಜಿ.ಎಸ್.ಗೋನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಶೇಖರಗೌಡ ಮಾಲಿಪಾಟೀಲ್, ಅಮರೇಶ ಉಪಲಾಪೂರ, ಪ್ರದೀಪಗೌಡ ಮಾಲಿಪಾಟೀಲ್, ಡಾ.ಮಹಾಂತೇಶ ಮಲ್ಲನಗೌಡರ, ಶಂಭುಲಿಂಗನಗೌಡ, ಕಳಕಪ್ಪ ಜಾದವ, ಸಂಗಮೆಶ ಡಂಬಳ, ಅನಸೂಯಾ ವಾಲ್ಮೀಕಿ, ವೆಂಕನಗೌಡ ಹೊರತಟ್ನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಾನಿಧ್ಯವನ್ನು ನಾಗಭೂಷಣ ಸ್ವಾಮಿಗಳು ವಹಿಸಿಕೊಂಡಿದ್ದರು. ಶಂಕ್ರಯ್ಯ ಅಬ್ಬಿಗೇರಿಮಠ ನಿರೂಪಿಸಿದರು.

0 comments:
Post a Comment