ಕೊಪ್ಪಳ ಮೇ.೦೭: ರಾಜ್ಯದಲ್ಲಿ ಭ್ರಷ್ಠಚಾರ ಮೀತಿಮೀರಿದ್ದು, ಭ್ರಷ್ಠಚಾರದಲ್ಲಿ ತೊಡಗಿರುವ ಬಿಜೆಪಿ ಸರ್ಕಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಜಯ ಪ್ರಕಾಶ ನಾರಾಯಣ ಜನಾಂದೋಲನ ವೇದಿಕೆ ಎಂಬ ವಿನೂತನ ಕಾರ್ಯಕ್ರಮ ದಿ.೮ ರ ರವಿವಾರ ಬೆಳಿಗ್ಗೆ ೧೧-೦೦ ಗಂಟೆಗೆ ಇಲ್ಲಿನ ಸಾರ್ವಜನಿಕ ಮೈದಾನದಲ್ಲಿ ಜರುಗಲಿದ್ದು, ಇದರಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ.ಈ ಕಾರ್ಯಕ್ರಮದ ವ್ಯವಸ್ಥೆಗಾಗಿ ಈಗಾಗಲೇ ವೇದಿಕೆ ಸಜ್ಜುಗೊಂಡಿದ್ದು, ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪಕ್ಷಾತೀತ ಕಾರ್ಯಕ್ರಮವಾಗಿರುವ ಜನಾಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸೈಯದ್ ಫೌಂಡೇಷನ್ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಘಟಕ ಕೆ.ಎಮ್. ಸೈಯದ್ ಕರೆ ನೀಡಿದ್ದಾರೆ.ಅವರಿಂದು ಸಾರ್ವಜನಿಕ ಮೈದಾನದಲ್ಲಿ ವೇದಿಕೆ ವೀಕ್ಷಣೆ ಮಾಡಿ ವೇದಿಕೆ ಸಜ್ಜುಗೊಳಿಸುತ್ತಿರುವ ಕಾರ್ಯಕರ್ತರನ್ನು ಸೂಚನೆ ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡುತ್ತ ಈ ವಿಷಯಕುರಿತು ಪ್ರಸ್ಥಾಪಿಸಿದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಿರೀಕ್ಷೆಗೂ ಮೀರಿ ಈ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದು ಕೆ.ಎಮ್. ಸೈಯದ್ ದೃಢವಿಶ್ವಸ ವ್ಯಕ್ತಪಡಿಸಿದ್ದಾರೆ.
Home
»
»Unlabelled
» ಜನಾಂದೋಲನ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು
Subscribe to:
Post Comments (Atom)
0 comments:
Post a Comment