PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ,ಮೇ.೦೯: ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ದಿ.೧೦ ರಂದು ಬೆಳಿಗ್ಗೆ ಶ್ರೀ ಮಹಾಯೋಗಿ ವೇಮನ ವೇದಿಕೆಯಲ್ಲಿ ಊರಮ್ಮದೇವಿ ಸನ್ನಿಧಿಯಲ್ಲಿ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯೋತ್ಸವ ಹಾಗೂ ದೇವಸ್ಥಾನದ ಅಡಿಗಲ್ಲು ಸಮಾರಂಭ ಜರುಗಲಿದೆ.
ಈ ಕಾರ್ಯಕ್ರಮದ ಮೆರವಣಿಗೆಗೆ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶ ಭೂಮರಡ್ಡಿ ಚಾಲನೆ ನೀಡಲಿದ್ದು, ದೇವಸ್ಥಾನದ ಅಡಿಗಲ್ಲು ಸಮಾರಂಭಕ್ಕೆ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಸಿ.ವಿ.ಚಂದ್ರಶೇಖರ ನೆರವೇರಿಸುವರು.
ಕಾರ್ಯಕ್ರಮದ ಉದ್ಘಾಟನೆಯನ್ನು ವಾಣಿಜ್ಯೋದ್ಯಮಿ ಹಾಗೂ ರಡ್ಡಿ ಸಮಾಜದ ಮುಖಂಡ ಪ್ರಭು ಹೆಬ್ಬಾಳ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಸ್.ಬಿ.ನಾಗರಳ್ಳಿ ವಹಿಸುವರು.
ಪ್ರಾಚಾರ್ಯ ವಿ.ಬಿ.ರಡ್ಡೇರ್ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿ.ಪಂ.ಮಾಜಿ ಅಧ್ಯಕ್ಷ ಹೆಚ್.ಎಲ್.ಹಿರೇಗೌಡ್ರು, ಡಿವೈಎಸ್‌ಪಿ ವಿಜಯಡಂಬಳ, ಗುತ್ತಿಗೆದಾರರಾದ ಕಾಶಿನಾಥರೆಡ್ಡಿ, ಬಸವರಾಜ ಪುರದ್, ಜಿ.ಪಂ.ಮಾಜಿ ಸದಸ್ಯ ಈಶಪ್ಪ ಮಾದಿನೂರು, ಜಿ.ಪಂ.ಸದಸ್ಯೆ ಭಾಗಿರಥಿ ಪಾಟೀಲ್, ಕಾಂಗ್ರೆಸ್ ಮುಖಂಡ ಸಂಗಪ್ಪ ವಕ್ಕಳದ್ ಮತ್ತಿತರರು ವಹಿಸುವರು ಎಂದು ಗ್ರಾಮಸ್ಥರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಡಾ|| ನಾ.ಸು.ಹರ್ಡಿಕರ್ ೧೨೨ನೇ ಜನ್ಮ ದಿನಾಚರಣೆ
ಕೊಪ್ಪಳ,ಮೇ.೦೯: ನಗರದ ಭಾರತ ಸೇವಾದಳ ಕಾರ್ಯಾಲಯದಲ್ಲಿ ಭಾರತ ಸೇವಾದಳ ಸಂಸ್ಥಾಪಕರಾದ ಡಾ|| ನಾ.ಸು.ಹರ್ಡಿಕರ್ ಅವರ ೧೨೨ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಡಾ|| ನಾ.ಸು.ಹರ್ಡಿಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದ ನಂತರ ಭಾರತ ಸೇವಾದಳ ತರಬೇತಿ ಪಡೆದ ಶಾಖಾ ನಾಯಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಸೋಮಶೇಖರ ಹರ್ತಿ ಮಾತನಾಡಿದ, ಡಾ|| ನಾ.ಸು.ಹರ್ಡಿಕರ್ ರವರ ಸ್ವಾತಂತ್ರ್ಯ ಹೋರಾಟ ಅವರ ದೇಶಪ್ರೇಮ ಕುರಿತು ಶಾಲಾ ಕಾಲೇಜುಗಳಲ್ಲಿ ಬೋಧಿಸುವದು ಅವಶ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ.ಎಸ್.ಪಟ್ಟಣಶೆಟ್ಟಿ, ಗಾಂದಿಲಿಂಗಪ್ಪ ಸೇರಿದಂತೆ ಶಾಖಾ ನಾಯಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top