PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ೦೩ : ಜಿಲ್ಲಾ ಬಸವ ಜಯಂತ್ಯೋತ್ಸವ ಸಮಿತಿ ಮತ್ತು ಜಿಲ್ಲಾಡಳಿತ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಇದೇ ಮೇ ೦೬, ೨೦೧೧, ಶುಕ್ರವಾರದಂದು ಬಸವ ಜಯಂತ್ಯೋತ್ಸವ ಸಮಾರಂಭವನ್ನು ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಬಸವ ಜಯಂತ್ಯೋತ್ಸವದ ದಿನ ಮುಂಜಾನೆ ೯-೦೦ ಗಂಟೆಗೆ ಕುಷ್ಟಗಿ ಸರ್ಕಲ್‌ನಲ್ಲಿರುವ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಮತ್ತು ಪ್ರಾರ್ಥನೆ ಆಯೋಜಿಸಲಾಗಿದೆ.

ಸಾಯಂಕಾಲ ೪ ಗಂಟೆಗೆ ಮಹಾ ಮಾನವತಾವಾದಿ ಶ್ರೀ ಬಸವೇಶ್ವರರ ಭಾವಚಿತ್ರ ಮೆರವಣಿಗೆಯು ಕೋಟೆ ರಸ್ತೆಯ ಮಹೇಶ್ವರ ದೇವಸ್ಥಾನದಿಂದ ಜವಾಹರ ರಸ್ತೆ ಮಾರ್ಗವಾಗಿ - ಶ್ರೀ ಗವಿಮಠದ ಆವರಣವನ್ನು ತಲುಪಲಿದೆ. ಚಿಕ್ಕಮಗಳೂರು ಜಿಲ್ಲೆಯ ಲಿಂಗದಳ್ಳಿಯ ವಿಶೇಷ ಮಹಿಳಾ ವೀರಗಾಸೆ ನೃತ್ಯ ತಂಡ ಮೆರವಣಿಗೆಗೆ ಮೆರಗನ್ನು ತಂದುಕೊಡಲಿದೆ.

ಸಂಜೆ ೬ ಗಂಟೆಗೆ ಶ್ರೀ ಗವಿಮಠದ ಆವರಣದಲ್ಲಿ ಬಸವಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಸವಗೋಷ್ಠಿಯ ದಿವ್ಯಸಾನಿಧ್ಯವನ್ನು ಶ್ರೀ ಗವಿಸಿದ್ಧೇಶ್ವರ ಶ್ರೀಗಳು ವಹಿಸಲಿದ್ದಾರೆ. ಮುಖ್ಯ ಉಪನ್ಯಾಸಕರಾಗಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಜೆ.ಎಸ್. ಪಾಟೀಲ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಬೈಲಹೊಂಗಲದ ಶರಣೆ ಪ್ರೇಮಕ್ಕ ಅಂಗಡಿ ವಹಿಸಲಿದ್ದಾರೆ. ವಚನ ಸಂಗೀತವನ್ನು ಶ್ರೀಮತಿ ವಿಶಾಲಾಕ್ಷಿ ಹಿರೇಮಠ ಮತ್ತು ತಂಡದವರು ನೆರವೇರಿಸಿಕೊಡಲಿದ್ದಾರೆ.

ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಸವ ಜಯಂತ್ಯೋತ್ಸವದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಬಸವ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top