ಕೊಪ್ಪಳ: : ಸಹಾಸದಂತಹ ಕ್ರೀಡೆಗಳಲ್ಲಿ ತರಬೇತಿ ಹೊಂದಿದರೆ ಆತ್ಮಸ್ಥೈರ್ಯ ಬರಲು ಸಾಧ್ಯ, ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ಆರೋಗ್ಯವಂತರಾದರೆ ಯುವಕರು ಎಲ್ಲಾ ರಂಗದಲ್ಲೂ ಪ್ರಗತಿ ಸಾಧಿಸಬಹುದು. ದೇಶದ ಅಭೀವೃದ್ಧಿಗೆ ಆರೋಗ್ಯವಂತ ಯುವ ಪೀಳಿಗೆ ಅಗತ್ಯ. ದುಶ್ಚಟಗಳಿಂದ ದೂರವಿದ್ದು ಇಂತಹ ಓಲಂಪಿಕ್ ಹಾಗೂ ಇನ್ನಿತರ ಕ್ರೀಡೆಗಳ ತರಬೇತಿ ಪಡೆಯಲು ಆಸಕ್ತಿ ಹೊಂದಿದರೆ ಅಂತಹವರಿಗೆ ನಮ್ಮ ಸಹಕಾರ ಇರುತ್ತದೆ ಎಂದು ಸೈಯದ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ (ರಿ) ನ ಅಧ್ಯಕ್ಷ ಕೆ.ಎಂ.ಸೈಯದ ಹೇಳಿದರು.
ಕೊಪ್ಫಳ ನಗರದ ಶಾರದಾ ಟಾಕೀಸ್ ಹಿಂದೆ ಇರುವ ಕುವೇಂಪು ಶಾಲೆಯಲ್ಲಿ ಸೈಯದ ಫೌಂಡೇಶನ ಚಾರಿಟೇಬಲ್ ಟ್ರಸ್ಟ್ (ರಿ), ದಿ ಬೆಸ್ಟ್ ಇನ್ಸ್‌ಟಿಟ್ಯೂಟ್ , ನಾಲಂದಾ ಶಿಕ್ಷಣ ಹಾಗೂ ಗ್ರಾಮೀಣ ಅಭೀವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ದಿ ಬೆಸ್ಟ್ ಬೇಸಿಗೆ ತರಬೇತಿ ಶಿಬಿರವನ್ನು ಓಲಂಪಿಕ್ ಕ್ರೀಡೆಗಳಲ್ಲಿ ಉಪಯೋಗಿಸುವ ಇನ್ ಲೈನ್ ಸ್ಕೇಟಿಂಗ್ ಕ್ರೀಡಾ ಪಟುಗಳಿಗೆ ನೀಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಅಬಕಾರಿ ಇಲಾಖೆಯ ಮೆಹಬೂಬ ಹುಸೇನ್ ಅವರು ಮಾತನಾಡಿ ಓಲಂಪಿಕ್ ಹಾಗೂ ಸಹಾಸ ಕ್ರೀಡೆಗಳನ್ನು ತರಬೇತಿ ನೀಡಲು ಸಹಕರಿಸುತ್ತಿರುವ ಸೈಯದ ಫೌಂಡೇಶನ ಚಾರಿಟೇಬಲ್ ಟ್ರಸ್ಟ್ (ರಿ)ನವರ ಆಸಕ್ತಿಯನ್ನು ನೋಡಿದರೆ ಮುಂದಿನ ದಿಗಳಲ್ಲಿ ಕೊಪ್ಪಳ ಜಿಲ್ಲೆಯ ಯುವ ಪ್ರತಿಭೆಗಳು ಅಂತಾರಾಷ್ಟ್ರೀಯ ಓಲಂಪಿಕ್ ಕ್ರೀಡೆಗಳಲ್ಲಿ ಮಿಂಚಬಹುದಾಗಿದೆ ಎಂದು ಹೇಳಿದರು.
ಇನ್ನೋಬ್ಬ ಮುಖ್ಯ ಅತಿಥಿಗಳಾಗಿದ್ದ ಸುಪರ್ ಬುಡೋಕಾನ್ ಕರಾಟೆ ಕ್ಲಬ್‌ನ ಅಧ್ಯಕ್ಷ ಹಾಗೂ ನ್ಯಾಯವಾದಿಯಾದ ಎಂ.ಡಿ.ಮುಜೀಬ್ ಖಾನ್ ಮಾತನಾಡಿ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಸಹಾಸ ಕ್ರೀಡೆಗಳನ್ನು ಕೊಪ್ಪಳದಲ್ಲಿ ತರಬೇತಿ ನೀಡುತ್ತಿರುವದು ಸಂತಸದ ವಿಷಯ, ಯುವ ಜನಾಂಗ ಇಂತಹ ಕ್ರೀಡೆಗಳ ತರಬೇತಿ ಪಡೆಯಲು ಮುಂದೆ ಬರಬೇಕು ಎಂದು ಹೇಳಿದರು.
ಅತಿಥಿಯಾಗಿದ್ದ ನಾಲಂದಾ ಶಿಕ್ಷಣ ಹಾಗೂ ಗ್ರಾಮೀಣ ಅಭೀವೃದ್ಧಿ ಸಂಸ್ಥೆ ಅಧ್ಯಕ್ಷರಾದ ಎಸ್.ಎ.ಗಫಾರ್ ಮಾತನಾಡಿ ಕೊಪ್ಪಳ ಜಿಲ್ಲೆಯಲ್ಲಿ ಸ್ಕೇಟಿಂಗ್ ಕೋಟ್ ಇಲ್ಲಾ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಲು ಕೋರಿದಾಗ ತಮ್ಮ ಒಲವು ವ್ಯಕ್ತಪಡಿಸಿದ್ದಾರೆ, ಅದೇ ರೀತಿ ಕೆ.ಎಂ.ಸೈಯದ ಅವರು ಸಹ ನಗರದಲ್ಲಿ ನಿರ್ಮಿಸುತ್ತಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಸ್ಕೇಟಿಂಗ್ ಕೋಟ್ ನಿರ್ಮಿಸಲು ಮುಂದೆ ಬರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರ ಸಭೆ ಮಾಜಿ ಸದಸ್ಯರಾದ ಅಶೋಕ ಬಜಾರಮಠ ಮಾತನಾಡಿ ವಿವಿಧ ಕ್ರೀಡಾ ತರಬೇತಿಗಳಿಗೆ ತಮ್ಮ ಸಹಕಾರ ಇರುವದಾಗಿ ಹೇಳಿದರು. ಹಿರಿಯ ಮುಖಂಡರಾದ ವೆಂಕನಗೌಡ ಹೊರತಟ್ನಾಳ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ಕೇಟಿಂಗ್ , ಕರಾಟೆ, ನೃತ್ಯ ಮುಂತಾದ ಕಲೆಗಳ ಪ್ರದರ್ಶನ ನೀಡಲಾಯಿತು. ಸ್ವಗತ ಅನ್ವರ್ ಹುಸೇನ್ ಮಂಡಲಗೇರಿ, ನಿರೂಪಣೆಯನ್ನು ಸುನಿತಾ.ಆರ್, ವಂದನಾರ್ಪಣೆ ರಾಘವೇಂದ್ರ ಅರಕೇರಿ ಮಾಡಿದರು.

0 comments:
Post a Comment