371 ಕಲಂ ತಿದ್ದುಪಡಿಗಾಗಿ ಜನಜಾಗೃತಿ ಜಾಥಾ
ಹೈದ್ರಾಬಾದ್ ಕರ್ನಾಟಕದ ಜನರ ಬಹುದಿನದ ಬೇಡಿಕೆಯಾಧ 371 ಕಲಂ ತಿದ್ದುಪಡಿಗೆ ಆಗ್ರಹಿಸಿ 21ರಂದು ಜನಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಈ ಜಾಥಾವು ಕೊಪ್ಪಳದಿಂದ ಆರಂಭಗೊಂಡು ಗುಲ್ಬರ್ಗಾದಲ್ಲಿ ಮುಕ್ತಾಯಗೊಳ್ಳಲಿದೆ. ಜಾಥಾ ಸಾಗುವ ದಾರಿಯಲ್ಲಿ ವಿವಿದೆಡೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಕೊಪ್ಪಳದ ಗವಿಮಠದ ಮೈದಾನದಿಂದ ಆರಂಭವಾಗುವ ಈ ಜಾಥಾಕ್ಕೆ ಗವಿಮಠದ ಶ್ರೀಗಳು ಚಾಲನೆ ನೀಡಲಿದ್ದಾರೆ. ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರು, ಎಲ್ಲ ಸಂಘ ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿಗಳು,ರೈತರು, ಶಿಕ್ಷಕರು ಹೋರಾಟಗಾರರು ಎಲ್ಲರೂ ಭಾಗವಹಿಸಲಿದ್ಧಾರೆ. ತಾವೂ ಬನ್ನಿ .. ಹೋರಾಟದಲ್ಲಿ ಭಾಗವಹಿಸಿ
0 comments:
Post a Comment