ಕೊಪ್ಪಳ : ಸಧ್ಯದ ಪರಿಸ್ಥಿತಿಯಲ್ಲಿ ಸಾಂಸ್ಕೃತಿಕ ಬದುಕು ಇಕ್ಕಟ್ಟಿನಲ್ಲಿದೆ. ಬರೆಯುವವರದೇ ಒಂದು ವರ್ಗ ಎನ್ನುವಂತಾಗಿದೆ. ಅವರು ಜನರಿಂದ ದೂರ ಸರಿಯುತ್ತಿದ್ದಾರೆ ಎನಿಸುತ್ತಿದೆ. ಕಾವ್ಯಕ್ಕೂ ಬದುಕಿಗೂ ಸಂಬಂಧವಿಲ್ಲದಂತೆ ನಡೆಯುತ್ತಿದೆ. ಬದುಕಿನೆಡೆಗೆ ಬದ್ದತೆ ಮಾಯವಾಗುತ್ತಿದೆ ಎಂದು ಸಂಶೋಧಕ, ವಿಮರ್ಶಕ, ಕವಿ ಡಾ.ಜಾಜಿ ದೇಂವೆಂದ್ರಪ್ಪ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ೪೪ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾವ್ಯ ಸಹಜವಾಗಿ ಬರಬೇಕು. ಕನಿಷ್ಠ ಕಾವ್ಯಗುಣಗಳು ಇರಬೇಕು. ಕವನಗಳಲ್ಲಿ ಹೊಸ ಪರಿಭಾಷೆ ಇರಬೇಕು. ಹಳೆಯದನ್ನು ಮತ್ತು ಹೊಸದನ್ನು ಓದುವ ಗುಣವನ್ನು ಕವಿಗಳು ಬೆಳಿಸಿಕೊಳ್ಳಬೇಕು ಹಾಗಾದಲ್ಲಿ ಕವಿ ಬೆಳೆಯುತ್ತಾನೆ ಎಂದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಡಾ.ಜಾಜಿ ದೇವೇಂದ್ರಪ್ಪ - ಟಿಕೋಲಾ, ಗಾಯತ್ರಿ ಭಾವಿಕಟ್ಟಿ- ನನ್ನದೊಂದು ದೂರು, ಪುಷ್ಪಲತಾ ಏಳುಬಾವಿ- ಬಾಳಿನ ಚುಕ್ಕಿ, ಡಾ. ರೇಣುಕಾ ಕರಿಗಾರ- ನಿನಗಾಗಿ ನಾನು , ವಿಪರ್‍ಯಾಸ, ಪ್ರೋ: ಅಲ್ಲಮಪ್ರಭು ಬೆಟ್ಟದೂರ- ಸಂಸ್ಕೃತ, ಜಡೆಯಪ್ಪ- ದೂಳು ಗೆದ್ದವರು, ಬರಬೇಡ, ಕರಿಸಿದ್ದನಗೌಡ- ಕಟ್ಟುವೆವು ನಾವು, ಶಿವಪ್ರಸಾದ ಹಾಧಿಮನಿ- ಬಂಡಾಯಕ್ಕೊಬ್ಬನೇ ಚಂಪಾ, ಕಾಮನೂರು ನಾಗೇಂದ್ರಪ್ರಸಾದ- ಶೀರ್ಷಿಕೆ ರಹಿತ ಕವಿತೆ, ಡಾ.ಮಹಾಂತೇಶ ಮಲ್ಲನಗೌಡರ -ಎಲ್ಲರೂ ಸಮಾನರು, ಶರಣಪ್ಪ ಬಾಚಲಾಪೂರ- ನನ್ನ ನಿನ್ನ ನಡುವೆ, ವೀರಣ್ಣ ಹುರಕಡ್ಲಿ- ಇವನೊಬ್ಬ ಸ್ನೇಹಿತ, ಮಹೇಶ ಬಳ್ಳಾರಿ - ಮೂಕನ ಮೊಬೈಲು ಮತ್ತು ಗುಬ್ಬಚ್ಚಿ, ಸಿರಾಜ್ ಬಿಸರಳ್ಳಿ- ನಮ್ಮವರು, ಶಾಂತೇಶ ಬಡಿಗೇರ- ಶೃತಿ, ಸುಮತಿ ಹಿರೇಮಠ- ಚರಿತ್ರೆಗೆ ನಾವು, ಮೆಹಮೂದಮಿಯಾ -ಪ್ರಯತ್ನಗಳು, ವಿಠ್ಠಪ್ಪ ಗೋರಂಟ್ಲಿ-ಶಬ್ದ ಸೂತಕ ಕವನಗಳನ್ನು ವಾಚನ ಮಾಡಿದರು.
ಬೆಳ್ಳಿ ಸಾಕ್ಷಿಗೆ ಜಿಲ್ಲಾ ಸಂಚಾಲಕರಾಗಿ ಆಯ್ಕೆಯಾಗಿರುವ ಮಹೇಶ ಬಳ್ಳಾರಿಯವರನ್ನು ಅಭಿನಂದಿಸಲಾಯಿತು. ಎಸ್.ಎಂ.ಕಂಬಾಳಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

0 comments:
Post a Comment