PLEASE LOGIN TO KANNADANET.COM FOR REGULAR NEWS-UPDATES

ಹೊsಸಪೇಟೆ ಜ. ) : ಈ ಬಾರಿಯ ಹಂಪಿ ಉತ್ಸವ ಹಿಂದೆಂದಿಗಿಂತಲೂ ಅದ್ಧೂರಿಯಾಗಿ, ಸಡಗರ, ಸಂಭ್ರಮದಿಂದ ವಿಜೃಂಭಣೆಯಾಗಿ ನಡೆಯಲಿದೆ. ಅಧಿಕಾರಿಗಳು ಹಂಪಿ ಉತ್ಸವದ ಯಶಸ್ವಿಗೆ ಹಗಲಿರುಳು ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಕೈಗೊಳ್ಳುವಲ್ಲಿ ನಿರತರಾಗಿದ್ದಾರೆ, ಶೀಘ್ರವಾಗಿ ಎಲ್ಲಾ ಸಿದ್ದತೆಗಳು ಪೂರ್ಣಗೊಳ್ಳಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಪ್ರವಾಸೋದ್ಯಮ ಹಾಗೂ ಮೂಲಭೂತ ಸೌಕರ್ಯ ಸಚಿವ ಜಿ. ಜನಾರ್ದನ ರೆಡ್ಡಿ ಅವರು ಹೇಳಿದ್ದಾರೆ.
ಪ್ರತಿ ವರ್ಷಕ್ಕಿಂತ ಈ ಬಾರಿ ಹಂಪಿ ಉತ್ಸವವನ್ನು ಅತ್ಯಂತ ಅದ್ಧೂರಿಯಾಗಿ, ವಿಜೃಂಭಣೆಂದ ಆಚರಿಸಲಾಗುವುದು. ಇದಕ್ಕಾಗಿ ಸರ್ಕಾರ ೧೦ ಕೋಟಿ ರೂ.ಗಳ ಅನುದಾನವನ್ನು ಒದಗಿಸಿದೆ. ಉತ್ಸವವನ್ನು ಅಚ್ಚುಕಟ್ಟಾಗಿ ಯಶಸ್ವಿಯಾಗಿ ಕೈಗೊಳ್ಳಲು ರಚಿಸಲಾಗಿದ್ದ ಸ್ವಾಗತ ಸ"ತಿ, ಸಾರಿಗೆ, ವಸತಿ, ಆಹಾರ ಸೇರಿದಂತೆ ಹಲವು ಉಪಸಮಿತಿಗಳು ತಮಗೆ ವಹಿಸಿರುವ ಕಾರ್ಯವನ್ನು ಜವಾಬ್ದಾರಿಯುತವಾಗಿ ಪೂರ್ಣಗೊಳಿಸಬೇಕು ಎಂದರು.
ಹಂಪಿ ಉತ್ಸವದಲ್ಲಿ ಈ ಬಾರಿ ರ್‍ಟ್ರಾಯ, ಅಂತರ್‌ರ್‍ಟ್ರಾಯ ಖ್ಯಾತನಾಮ ಕಲಾವಿದರು ಆಗಮಿಸಲಿದ್ದಾರೆ, ಖ್ಯಾತ ಕನ್ನಡ ಚಲನಚಿತ್ರ ನಟರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಪಂಚಭಾಷಾ ತಾರೆ ಶೋಭನಾ ಸೇರಿದಂತೆ ಖ್ಯಾತ ಕಲಾವಿದರು, ಸಂಗೀತ ನಿರ್ದೇಶಕರುಗಳಾದ ಶಿವಮಣಿ, ಗುರುಕಿರಣ್, ಕಲಾವಿದರಾದ ಜಯಶ್ರೀ, "ವಿಯಪ್ರಕಾಶ್ ಪಲ್ಲವಿ ಅಲ್ಲದೆ ಹಲವು ಪ್ರಖ್ಯಾತ ಕಲಾ"ದರು ಕಾರ್ಯಕ್ರಮದಲ್ಲಿ ಭಾಗವಹಹಿಸಲಿದ್ದಾರೆ. ರಷ್ಯಾ, ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಿಂದ ಕಲಾವಿದರು ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಆಗಮಿಸಲಿದ್ದಾರೆ. ಈ ಬಾರಿಯ ಹಂಪಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ, ಉತ್ಸವದ ಸವಿಯನ್ನು ಆಸ್ವಾದಿಸುವಂತಾಗಬೇಕು ಎಂದು ನುಡಿದರು.
ಹೊಸಪೇಟೆಂದ ಹಂಪಿಗೆ ಸಾರ್ವಜನಿಕರು ನಿರಂತರವಾಗಿ ಪ್ರಯಾಣಿಸಲು ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು. ಕುಸ್ತಿ ಪಂದ್ಯಾವಳಿ, ಸಾಹಸ ಕ್ರೀಡೆಗಳು ನಿಗದಿತ ಸಮಯದಲ್ಲಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಿಜಯನಗರ ವೈಭವವನ್ನು ಬಿಂಬಿಸುವ ಸ್ತಬ್ಧ ಚಿತ್ರಗಳು, ಮೆರವಣಿಗೆಗಾಗಿ ಆನೆಗಳನ್ನು ತರಿಸಲಾಗಿದೆ ಎಂದರು.
ಅರಣ್ಯ ಇಲಾಖೆಂದ ಪ್ರಮುಖ ವೇದಿಕೆಯ ಬಳಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಉತ್ಸವದ ಸಂದರ್ಭದಲ್ಲಿ ಹಂಪಿಯ ಕಡೆಗೆ ಆಗಮಿಸುವ ಸಾರ್ವಜನಿಕರಿಗೆ ವಿಜಯನಗರ ಸಾಮ್ರಾಜ್ಯದ ವೈಭವ ಮರುಕಳಿಸಿದೆಯೇನೋ ಎನ್ನುವ ಅನುಭವ ಹೊಂದುವಂತಾಗಬೇಕು.
ಸಭೆಯಲ್ಲಿ ಭಾಗವಹಿಸಿದ್ದ ಹೊಸಪೇಟೆ ಉಪವಿಭಾಗಾಧಿಕಾರಿ ಕಾಶಿನಾಥ ಪವಾರ್ ಅವರು ಮಾತನಾಡಿ ಹಂಪಿ ಉತ್ಸವಕ್ಕೆ ಹೆಚ್ಚಿನ ಪ್ರಚಾರ ನೀಡಲು ಈಗಾಗಲೆ ನೆರೆ ಹೊರೆಯ ಜಿಲ್ಲೆಗಳಿಗೆ ಬ್ಯಾನರ್, ಫ್ಲೆಕ್ಸ್ ಫಲಕಗಳನ್ನು ಅಳವಡಿಸುವ ಕಾರ್ಯ ಸಾಗಿದೆ. ಅಲ್ಲದೆ ಈ ಸಲವೂ ರಾಜ್ಯದ ಎಲ್ಲಾ ಬಾನುಲಿ ಕೇಂದ್ರಗಳಿಂದ, ಉತ್ಸವದ ನೇರಪ್ರಸಾರ ಬಿತ್ತರಗೊಳ್ಳಲಿದೆ. ಉತ್ಸವಕ್ಕೆ ಆಗಮಿಸುವ ಅತಿಥಿಗಳು, ಕಲಾವಿದರು, ತಂತ್ರಜ್ಞರು, ಗಣ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳ ವಾಸ್ತವ್ಯಕ್ಕಾಗಿ ಈಗಾಗಲೆ ಹೊಸಪೇಟೆ, ಹಂಪಿ, ಮುಂತಾದೆಡೆ ೩೧ ಹೋಟೆಲ್‌ಗಳಲ್ಲಿ ಸುಮಾರು ೫೦೦ ಕೊಠಡಿಗಳನ್ನು ಕಾರಿಸಲಾಗಿದೆ, ಉತ್ಸವದ ವೇದಿಕೆಗಳಿಗೆ ವಿದ್ಯುತ್ ಪೂರೈಕೆ, ಉತ್ಸವದ ದಿನಗಳಲ್ಲಿ ಹೊರ ಜಿಲ್ಲೆ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಬಸ್ ವ್ಯವಸ್ಥೆ, ಕುಡಿಯುವ ನೀರು, ನೈರ್ಮಲೀಕರಣ, ತಾತ್ಕಾಲಿಕ ಬಸ್ ನಿಲ್ದಾಣ, ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ವಸ್ತುಪ್ರದರ್ಶನ ಏರ್ಪಡಿಸಲು ಬೃಹತ್ ಮಳಿಗೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇದರಲ್ಲಿ ೧೫೦ ಮಳಿಗೆಗಳನ್ನು ನಿರ್ಮಿಸಲಾಗುವುದು. ಆ ಪೈಕಿ ೩೦ ಮಳಿಗೆಗಳನ್ನು ಪುಸ್ತಕ ಪ್ರದರ್ಶನಕ್ಕಾಗಿ ಒದಗಿಸಲಾಗುವುದು, ಸ್ಥಬ್ಧ ಚಿತ್ರಗಳ ನಿರ್ಮಾಣ, ಉತ್ಸವದ ಮೊದಲ ದಿನ ಶೋಭಾಯಾತ್ರೆ, ಹಾಗೂ ಪೂರ್ಣಕುಂಭದ ಮೆರವಣಿಗೆ ಮತ್ತು ಸಮಾರೋಪ ದಿನದಂದು ಜಾನಪದ ವಾಹಿನಿ, ಮೆರವಣಿಗೆಗಳ ವ್ಯವಸ್ತೆಯೂ ಸೇರಿದಂತೆ ಉತ್ಸವದ ವಿವಿಧ ಕೆಲಸ ಕಾರ್ಯಗಳ ಪ್ರಗತಿಯನ್ನು ಸಭೆಗೆ ವಿವರಿಸಿದರು.
ಸಭೆಯಲ್ಲಿ ಕಂಪ್ಲಿ ಶಾಸಕ ಸುರೇಶ್ ಬಾಬು, ಹುಡಾ ಅಧ್ಯಕ್ಷ ಪರಮೇಶ್ವರರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಮ್. ಎನ್. ನಾಗರಾಜ್, ಅಪರ ಜಿಲ್ಲಾಧಿಕಾರಿ ಶಿವಮೂರ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುರೇರ, ಸಹಾಯಕ ಆಯುಕ್ತ ವೆಂಕಟೇಶ್, ತಹಸಿಲ್ದಾರ್ ಮಂಜುನಾಥ್, ಆಹಾರ ಇಲಾಖೆ ಉಪನಿರ್ದೇಶಕ ಮಂಜುನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಿರಿಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿ. ಕೊಟ್ರಪ್ಪ ಸೇರಿದಂತೆ ಉತ್ಸವದ ಉಪಸಮಿತಿಗಳ ಅಧ್ಯಕ್ಷರು, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿ, ಪ್ರಗತಿಯ ಬಗ್ಗೆ ಸಭೆಗೆ ಮಾಹಿತಿ ಒದಗಿಸಿದರು

Advertisement

0 comments:

Post a Comment

 
Top