PLEASE LOGIN TO KANNADANET.COM FOR REGULAR NEWS-UPDATES







ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆಯ ಒಂದು ಜನೋತ್ಸವ, ಭಕ್ತಿ ಉತ್ಸವ ಕೊಪ್ಪಳ ನಾಡಿನ ಉತ್ಸವವಾಗಿ ಸುಮಾರು ೪ ಲಕ್ಷ ಭಕ್ತ ಜನಸಾಗರದಲ್ಲಿ ವಿಜೃಂಭಿಸುತ್ತದೆ. ಮಹಾದಾಸೋಹದಲ್ಲಿ ಸವಿಯಾದ ಪ್ರಸಾದ, ರೊಟ್ಟಿ, ಮೆಣಸಿನಕಾಯಿ ಚಟ್ನಿ,ಕಡಲೆ ಪುಡಿ, ಬದನೆಕಾಯಿ, ಕುಂಬಳ ಪಲ್ಯ, ಉಪ್ಪಿನ ಕಾಯಿ, ಹೀಗೆ ಪ್ರಸಾದದ ಪಟ್ಟಿ ಮುಂದುವರಿಯುತ್ತದೆ. ಮೃದುವಾದ ಮಾದಲಿ ಜೊತೆಗೆ ತುಪ್ಪ,ಅದರೊಳಗೆ ಬಿಸಿಹಾಲು ಸವಿಯುತ್ತಿದ್ದರೆ ಅದಕ್ಕಿಂತ ಆನಂದ ಬೇರೋಂದಿಲ. ಅನ್ನ,ಸಾರು, ಹೀಗೆ ಶ್ರೀಮಠದ ದಾಸೋಹವು ಅಬ್ಬಾ ಎನ್ನುವ ಮಟ್ಟಿಗೆ ಅದ್ಬುತವಾಗಿವೆ. ಸುಮಾರು ೫೦೦೦ ಕ್ಕಿಂತ ಹೆಚ್ಚಿನ ಭಕ್ತರು ಏಕಕಾಲಕ್ಕೆ ಪ್ರಸಾದ ಸ್ವೀಕರಿಸುತ್ತಿರುವದು ಕಂಡು ಬರುತ್ತದೆ. ಭಕ್ತರಪ್ರಕಾರ ಉತ್ತರ ಕರ್ನಾಟಕದ ಧರ್ಮಸ್ಥಳ ವಾಗುವದರಲ್ಲಿ ಸಂದೇಹವಿಲ್ಲ ಎಂದು ಹೇಳಿರುವದು ಮಹಾದಾಸೋಹದ ಪ್ರಸಿದ್ಧಿಗೆ ಸಾಕ್ಷಿಯಾಗಿದೆ.

Advertisement

0 comments:

Post a Comment

 
Top