ಕೊಪ್ಪಳ ಡಿ. : ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ಫಲಪೂಜಾ ಮಹೋತ್ಸವವು ಡಿ. ೨೩ ರಂದು ರಾತ್ರಿ ೧೦ ಗಂಟೆಗೆ ಅತ್ಯಂತ ವಿಜೃಂಭಣೆಂದ ನೆರವೇರಲಿದೆ.
ಹಂಪಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ಫಲಪೂಜಾ ಮಹೋತ್ಸವವು ಡಿ. ೨೩ ರಂದು ಶ್ರೀ ಚಕ್ರತೀರ್ಥ ಕೋದಂಡರಾಮಸ್ವಾಮಿಯ ಸನ್ನಿಧಿಯಲ್ಲಿ ಅತಿ ವಿಜೃಂಭಣೆಂದ ನೆರವೇರಲಿದ್ದು, ಇದರ ಅಂಗವಾಗಿ ಡಿ. ೨೧ ರಂದು ರಾತ್ರಿ ೯ ಗಂಟೆಗೆ ಶ್ರೀ ಮನ್ಮುಖ ತೀರ್ಥದಲ್ಲಿ ವಿರೂಪಾಕ್ಷ ಸ್ವಾಮಿಯ ತೆಪ್ಪೋತ್ಸವವನ್ನು ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಶ್ರೀ ವಿರೂಪಾಕ್ಷ ಸ್ವಾಮಿ ಸ್ವಯಂಭೂಲಿಂಗವನ್ನು ವಿಜಯನಗರದ ಅರಸರಾದ ಶ್ರೀಕೃಷ್ಣದೇವರಾಯರು ತಮ್ಮ ಪಟ್ಟಾಭಿಷೇಕದ ಅಂಗವಾಗಿ ಶ್ರೀ ವಿರೂಪಾಕ್ಷ ಸ್ವಾಮಿಗೆ ಸಮರ್ಪಿಸಿದ ನವರತ್ನ ಖಚಿತವಾದ ಸುವರ್ಣಮುಖ ಕಮಲದೊಂದಿಗೆ ಅಲಂಕರಿಸಲಾಗುವುದು. ಫಲಪೂಜಾ ಮಹೋತ್ಸವದ ಅಂಗವಾಗಿ ಡಿ.೨೩ ರಂದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಇದಕ್ಕಾಗಿ ಧವಸ ಧಾನ್ಯಗಳನ್ನು ಕೊಡಲಿಚ್ಛಿಸುವವರು ಶ್ರೀ ವಿದ್ಯಾರಣ್ಯ ಮಠದಲ್ಲಿ ನೀಡುವಂತೆ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment