PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಡಿ. : ಕೊಳಚೆ ಪ್ರದೇಶದಲ್ಲಿ ವಾಸಿಸುವ ಪ್ರತಿ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ರಾಜ್ಯ ವಸತಿ ಇಲಾಖೆ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ ಅವರು ಹೇಳಿದ್ದಾರೆ.
ಜಿಲ್ಲಾ ಪಂಚಾಯತ್ ಸಬಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವ"ಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ೧೬ ಕೊಳಚೆ ಪ್ರದೇಶಗಳಿದ್ದು, ಕೊಳಚೆ ಪ್ರದೇಶದಲ್ಲಿ ವಾಸಿಸುವ ಕುಟುಂಬ ವರ್ಗದವರಿಗೆ ಅಗತ್ಯ ಮೂಲಭೂತ ಸೌಲಭ್ಯಗಳಾದ ಕುಡಿಯುವ ವಿ ನೀರು, ವಿದ್ಯುತ್, ಉತ್ತಮ ಜೀವನ ನಡೆಸಲು ಅವರಿಗೆ ಮನೆ ನಿರ್ಮಿ ಸಿಕೊಡುವುದು ಅಗತ್ಯವಾಗಿದೆ. ಸರ್ಕಾರದ ನೀತಿಯಂತೆ ೨೫ ೩೫ ಸೈಟಿನಲ್ಲಿ ಅವರಿಗೆ ಮನೆ ನಿರ್ಮಿಸಿಕೊಡಲು ಸರ್ಕಾರ ಯೋಜನೆ ರೂಪಿಸಿದೆ. ಹೆಚ್ಚು ಮಳೆ ಆದಾಗ ಕೊಳಚೆ ನಿವಾಸಿಗಳ ಗುಡಿಸಲುಗಳಿಗೆ ನೀರು ನುಗ್ಗಿ ಅವರಿಗೆ ಆಗಾಗ ತೊಂದರೆ ಉಂಟಾಗುತ್ತಿರುತ್ತದೆ. ಅಂತಹ ಕುಟುಂಬ ಸ್ಥಳಗಳನ್ನು ಗುರುತಿಸಿ, ಅವರನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವುದು ಮತ್ತು ಅವರಿಗೆ ಅಗತ್ಯವಿರುವ ವಸತಿ ಸೌಲಭ್ಯ ಒದಗಿಸಬೇಕು. ಜಿಲ್ಲೆಯಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕೊಳಚೆ ವಾಸಿಗಳ ಬದುಕು ಹಸನಾಗಿಸುವಲ್ಲಿ ಕೊಳಚೆ ಮಂಡಳಿಯ ಅಧಿಕಾರಿಗಳು ಶ್ರಮಿಸಬೇಕಾದ ಅಗತ್ಯವಿದೆ. ವಾಜಪೇ ವಸತಿ ಯೋಜನೆಯಡಿ ಅವರಿಗೆ ಮನೆ ಕಟ್ಟಿಕೊಡಲು ಸರ್ಕಾರ ಯೋಜನೆ ರೂಪಿಸಿದೆ. ಅದೇ ರೀತಿ ಪರಿಶಿಷ್ಟ ಜಾತಿ, ವರ್ಗಗಳಿಗೆ ಪಾತ್ರೆ, ಅಡಿಗೆ ಸಾಮಾನು, ಭಜನೆ ಸಾಮಗ್ರಿ ನೀಡುವುದನ್ನು ಸಂಬಂಧಪಟ್ಟ ಪುರಸಭೆ/ ನಗರಸಬೆಗಳು ನಿಲ್ಲಿಸಬೇಕು. ಅವರು ಉತ್ತಮ ಜೀವನ ನಡೆಸುವುದಕ್ಕಾಗಿ ಮನೆಗಳನ್ನು ಕಟ್ಟಿಸಿಕೊಡಲು ಯೋಜನೆ ರಊಪಿಸಬೇಕು. ವಸತಿ ರಹಿತರನ್ನು ಗುರುತಿಸಿ, ಅವರಿಗೆ ವಸತಿ ಸೌಲಭ್ಯ ಒದಗಿಸಿದಲ್ಲಿ ಗುಡಿಸಲು ರಹಿತ ರಾಜ್ಯವನ್ನಾಗಿ ಮಾಡಲು ಸಾಧ್ಯ ಎಂದು ವಸತಿ ಇಲಾಖೆ ಕಾರ್ಯದರ್ಸಿ ಎಂ. ಲಕ್ಷ್ಮೀನಾರಾಯಣ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ನೆರೆ ಸಂತ್ರಸ್ತರಿಗಾಗಿ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿರುವ ೨೯೦೫ ಮನೆಗಳ ನಿರ್ಮಾಣ ಪ್ರಗತಿಯ ಹಂತದಲ್ಲಿದ್ದು, ೧೭ ಗ್ರಾಮಗಳ ನೆರೆ ಸಂತ್ರಸ್ತ ಕುಟುಂಬಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೆ ಕೊಪ್ಪಳ ತಾಲೂಕಿನ ಕಾಟ್ರಳ್ಳಿ, ಗುನ್ನಳ್ಳಿ, ಚಿಕ್ಕಸಿಂದೋಗಿ ಗ್ರಾಮಗಳ ಫಲಾನುಭ"ಗಳಿಗೆ ಮನೆಗಳ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಎರಡು ಹಂತದಲ್ಲಿ ಮನೆಗಳ ನಿರ್ಮಾಣ ಪೂರ್ತಿಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಜನವರಿ ೩೧ ಕ್ಕೆ ಉಳಿದ ಮನೆಗಳನ್ನು ಪೂರ್ತಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಸಭೆಗೆ ವಿವರಿಸಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಮೂರ್ತಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಆಸರೆ ಮನೆಗಳ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top