PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಡಿ. : ರೈತರು ಆಧುನಿಕ ಕೃ ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚು ಇಳುವರಿ ಪಡೆದುಕೊಳ್ಳುವಲ್ಲಿ ಮುಂದಾಗಬೇಕು ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಕರೆ ನೀಡಿದರು.
ಕೃಷಿ ವಿಶ್ವವಿದ್ಯಾಲಯ, ರಾಯಚೂರು, ಜಿಲ್ಲಾ ಪಂಚಾಯತ್ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಗಂಗಾವತಿ ಕೃ ಸಂಶೋಧನಾ ಕೇಂದ್ರದ ಆವರಣದಲ್ಲಿ ಏರ್ಪಡಿಸಲಾಗಿದ್ದ ಮೂರು ದಿನಗಳ ಕೃಷಿ ಮೇಳ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತು ೬೦ ವರ್ಷ ಗತಿಸಿದರೂ ಸಮರ್ಪಕವಾಗಿ ಕೃ ಕ್ಷೇತ್ರ ಸುಧಾರಣೆ ಮಾಡಲು ಸಾಧ್ಯವಾಗಿರುವುದಿಲ್ಲ, ರೈತರ ಹಲವಾರು ಸಮಸ್ಯೆಗಳು, ಸಮಸ್ಯೆಗಳಾಗಿಯೇ ಉಳಿಯುತ್ತಿವೆ. ಕೃಷಿ ವಿಶ್ವವಿದ್ಯಾಲಯದ ತಾಂತ್ರಿಕತೆ ನಮ್ಮ ರೈತರ ಜಮೀನುಗಳಲ್ಲಿ ಅಳವಡಿಸುವಂತಾಗಬೇಕು. ನವೀನ ಕೃ ತಂತ್ರಜ್ಞಾನಗಳನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟು ಹೆಚ್ಚು ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕು. ರೈತ ದೇಶದ ಬೆನ್ನೆಲಬು ಎಂದು ಹೇಳುತ್ತಿದ್ದರೂ, ರೈತರ ಸಮಸ್ಯೆಗಳಿಗೆ ಸರಿಯಾದ ಸ್ಪಂದನೆ ದೊರೆಯದೆ ಇರುವುದರಿಂದ ಆಹಾರ ಧಾನ್ಯಗಳ ನಿಗದಿತ ಇಳುವರಿ ಕಡಿಮೆ ಆಗತೊಡಗಿದೆ. ರೈತರು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡಾಗ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ರೈತರ ಸಮಸ್ಯೆ ನಿವಾರಣೆಯಲ್ಲಿ ಸರ್ಕಾರದೊಂದಿಗೆ ವಿಜ್ಞಾನಿಗಳು ಹಾಗೂ ಸಮುದಾಯದವರು ಸ್ಪಂದಿಸುವ ಅಗತ್ಯವಿದೆ. ಗಂಗಾವತಿ ಕೃಷಿ ವಿಜ್ಞಾನ ಕೇಂದ್ರ ಮೂರು ನೂರ ಐವತ್ತು ಎಕರೆ ಪ್ರದೇಶವನ್ನು ಒಳಗೊಂಡಿದ್ದು, ರೈತರಿಗೆ ಅನುಕೂಲವಾಗುವ ಈ ಸ್ಥಳದಲ್ಲಿಯೇ ಕೃ ಮಹಾವಿದ್ಯಾಲಯ ಸ್ಥಾಪಿಸುವ ಅಗತ್ಯವಿದೆ. ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿ ಗಂಗಾವತಿಗೆ ಕೃ ಮಹಾವಿದ್ಯಾಲಯ ಮಂಜೂರು ಮಾಡಿಸುವಲ್ಲಿ ಶ್ರಮಿಸುವುದಾಗಿ ಶಾಸಕ ಪರಣ್ಣ ಮುನವಳ್ಳಿ ಅವರು ಈ ಸಂದರ್ಭದಲ್ಲಿ ಪ್ರಕಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ: ವಿ.ವಿ. ಪಾಟೀಲ್ ಅವರು ಮಾತನಾಡಿ, ರೈತರು ಏಕಬೆಳೆ ಪದ್ಧತಿಯನ್ನು ಕೈಬಿಟ್ಟು ಬಹು ಬೆಳೆಗೆ ಮುಂದಾಗಬೇಕು. ಲಾಭದಾಯಕ ಕೃಗೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳುವುದು ಅಗತ್ಯ. ರೈತರಲ್ಲಿ ಹಲವಾರು ತಪ್ಪು ಅಭಿಪ್ರಾಯಗಳು ಹಾಗೂ ಮೂಢನಂಬಿಕೆಗಳು ಬೆಳೆದು ಬಂದಿದೆ. ಇದನ್ನು ಹೋಗಲಾಡಿಸಿದಾಗ ಮಾತ್ರ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ಗಂಗಾವತಿಗೆ ಕೃಷಿ ಮಹಾವಿದ್ಯಾಲಯ ಮಂಜೂರಾತಿಗೆ ಅಗತ್ಯ ನೆರವು ಒದಗಿಸುವುದಾಗಿ ಅವರು ಹೇಳಿದರು.
ಜಿ.ಪಂ. ಉಪಾಧ್ಯಕ್ಷ ಬಿ. ಬಸವರಾಜಪ್ಪ ಅವರು ಮಾತನಾಡಿ, ಜನಸಂಖ್ಯೆ ಬೆಳೆದಂತೆ, ಭೂಮಿ ಬೆಳೆಯುವುದಿಲ್ಲ. ಸದ್ಯ ದೇಶದಲ್ಲಿ ೨೩೦ ಮಿಲಿಯನ್ ಟನ್ ಆಹಾರ ಉತ್ಪಾದನೆಯಾಗುತ್ತಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ದೇಶದ ಆಹಾರ ಉತ್ಪಾದನೆಯನ್ನು ೩೦೦ ಮಿಲಿಯನ್ ಟನ್‌ಗೆ ಹೆಚ್ಚಿಸಬೇಕಾಗಿದೆ. ಆ ದಿಸೆಯಲ್ಲಿ ವಿಜ್ಞಾನಿಗಳು ಹೆಚ್ಚು ಇಳುವರಿ ಪಡೆಯುವ ತಳಿಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಪರಿಸರಕ್ಕೆ ಮಾರಕವಾದ ಕೀಟನಾಶಕ, ಎಂಡೋಸಲ್ಫಾನ್ ಬಳಸದಂತೆ ಸರ್ಕಾರ ನಿಷೇಧ ಹೇರಬೇಕು. ಅದರಿಂದ ಪರಿಸರ ರಕ್ಷಣೆ ಮಾಡಲು ಸಾಧ್ಯ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಕೃಕ ಸಮಾಜದ ಅಧ್ಯಕ್ಷ ಚನ್ನಪ್ಪ ಮಾಳಗಿ, ಎ.ಪಿ.ಎಂ.ಸಿ. ಅಧ್ಯಕ್ಷ ಅಮರೇಗೌಡ, ಸಂಶೋಧನಾ ನಿರ್ದೇಶಕ ಡಾ: ಬಿ.ಟಿ. ಪೂಜಾರ, ವಿಸ್ತರಣಾ ನಿರ್ದೇಶಕ ಎಸ್.ಎಮ್. ಹಂಚಿನಾಳ, ಜಂಟಿಕೃ ನಿರ್ದೇಶಕ ಎಲ್.ಎನ್. ಬೆಳವಣಕಿ, ಡಾ: ಚಲ್ಲಯ್ಯ, ಹನುಮೇಶ್ ನಾಯಕ್, ಆಶಾ ಶೇಷಾದ್ರಿ, ಶಂಕರಗೌಡ, ಭೋಜನಗೌಡ, ಯಂಕನಗೌಡ ಮಲ್ಕಾಪುರ, ಜಿ.ಪಂ. ಸದಸ್ಯರುಗಳಾದ ಪರಶುರಾಮ, ದೇವಪ್ಪ ಖೈರವಾಡಗಿ, ಬಾಲಪ್ಪ ಹೂಗಾರ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಾ.ಪಂ. ಅಧ್ಯಕ್ಷ ಪಾಂಡುರಂಗ ರಾಠೋಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಅಧೀಕ್ಷಕ ವಿ.ಆರ್. ಜೋ ಸ್ವಾಗತಿಸಿದರು. ತಳಿ ವಿಜ್ಞಾನಿ ಮಹಮದ್ ಇಬ್ರಾಹಿಂ ಕೃಷಿ ಮೇಳ ಪರಿಚುಸಿದರು. ಕೊನೆಯಲ್ಲಿ ವಿರೇಶ ಹುನಗುಂದ ವಂದಿಸಿದರು

Advertisement

0 comments:

Post a Comment

 
Top