ಕೊಪ್ಪಳ ಡಿ. ೭ : ಅವಧಿ ಮುಕ್ತಾಯಗೊಳ್ಳುವ ಕೊಪ್ಪಳ ಜಿಲ್ಲಾ ಪಂಚಾಯತ್ ಹಾಗೂ ಈ ವ್ಯಾಪ್ತಿಯ ತಾಲೂಕಾ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಕುರಿತು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಡಿ. ೦೮ ರಂದು ಅಧಿಸೂಚನೆ ಹೊರಡಿಸಲಿದ್ದು, ಡಿ. ೧೫ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಚುನಾವಣೆ ಡಿ. ೨೬ ರಂದು ನಡೆಯಲಿದೆ.
ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಚುನಾವಣಾ ವೇಳಾಪಟ್ಟಿಯನ್ವಯ ಕೊಪ್ಪಳ ಜಿಲ್ಲೆ ಪ್ರಥಮ ಹಂತದ ಚುನಾವಣಾ ವೇಳಾಪಟ್ಟಿಯ ವ್ಯಾಪ್ತಿಗೆ ಬರಲಿದ್ದು, ಚುನಾವಣೆ ಕುರಿತು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಡಿ. ೦೮ ರಂದು ಅಧಿಸೂಚನೆ ಹೊರಡಿಸುವರು. ಡಿ. ೧೫ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಡಿ. ೧೬ ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಡಿ. ೧೮ ಅಂತಿಮ ದಿನವಾಗಿರುತ್ತದೆ. ಮತದಾನ ಅವಶ್ಯವಿದ್ದಲ್ಲಿ, ಮತದಾನ ಪ್ರಕ್ರಿಯೆಯು ಡಿ. ೨೬ ರಂದು ಬೆಳಿಗ್ಗೆ ೦೭ ಗಂಟೆಂದ ಸಂಜೆ ೦೫ ಗಂಟೆಯವರೆಗೆ ನಡೆಯಲಿದೆ. ಮರು ಮತದಾನದ ಅಗತ್ಯ ಬಿದ್ದಲ್ಲಿ ಡಿ. ೩೧ ರಂದು ನಡೆಸಲಾಗುವುದು, ಜನವರಿ ೦೪ ರಂದು ಬೆಳಿಗ್ಗೆ ೦೮ ಗಂಟೆಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣಾ ಪ್ರಕ್ರಿಯೆಯನ್ನು ಜ. ೦೫ ರೊಳಗಾಗಿ ಮುಕ್ತಾಯಗೊಳಿಸುವಂತೆ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಡಿ. ೦೬ ರ ಮಧ್ಯರಾತ್ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment