ಕೊಪ್ಪಳ. ಡಿ.. ತಮ್ಮಷ್ಟಕ್ಕೆ ತಾವು ದೊಡ್ಡ ವಿಚಾರವಂತರು ಎಂದುಕೊಂಡರೆ ಸಾಲದು, ನಮ್ಮದು ಎನ್ನುವ ವಿಚಾರವೂ ಇರಬೇಕು ಇಲ್ಲವಾದರೆ ಭೈರಪ್ಪನವರಂತೆ ಹುಂಬುತನದ ಹೇಳಿಕೆ ಬರುತ್ತವೆ ಎಂದು ಕಸಾಪ ಪ್ರಕಟಣೆ ಮೂಲಕ ಭೈರಪ್ಪನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದೆ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಪ್ರಧಾನ ಕಾರ್ಯದರ್ಶಿ ಎಸ್. ಬಿ. ಗೊಂಡಬಾಳ ಮತ್ತು ಪ್ರಮೋದ ತುರ್ವಿಹಾಳ, ಖಜಾಂಚಿ ರಾಜಶೇಖರ ಅಂಗಡಿ, ತಾಲೂಕ ಅಧ್ಯಕ್ಷ ಜಿ. ಎಸ್. ಗೋನಾಳ, ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಜಿ. ಗೊಂಡಬಾಳ ಮತ್ತು ಬಸಪ್ಪ ದೇಸಾ, ಖಜಾಂಚಿ ಮಹ್ಮದ್ ಪೀರಸಾಬ್ ಬೆಳಗಟ್ಟಿ ಭೈರಪ್ಪನವರ ಹೇಳಿಕೆಯನ್ನು ಖಂಡಿಸಿದ್ದಾರೆ.
ಭೈರಪ್ಪನವರು ತಮ್ಮ ಹೇಳಿಕೆಯನ್ನು ಹಿಂದೆ ಪಡೆದು ಕನ್ನಡಿಗರ ಕ್ಷಮೆ ಕೇಳಬೇಕು ಇಲ್ಲವಾದರೆ, ಅವರನ್ನು ಗುಜರಾತಿಗೆ ಕಳುಹಿಸುವದು ಸೂಕ್ತ ಎಂದು ಕಸಾಪ ವ್ಯಂಗವಾಡಿದೆ. ಕೂಡಲೇ ಹೇಳಿಕೆಯನ್ನು ಹಿಂದಕ್ಕೆ ಪಡೆಯುವಂತೆ ಸರಕಾರ ಕೂಡ ಎಸ್. ಎಲ್. ಭೈರಪ್ಪನವರಿಗೆ ಆಗ್ರಹಿಸಬೇಕು ಇಲ್ಲವಾದರೆ, ಸರಕಾರವೇ ಮುಂದೆ ನಿಂತು ಈ ಹೇಳಿಕೆ ಕೊಡಿಸಿರುವ ಬಗ್ಗೆ ಜನರಲ್ಲಿ ಸಂಶಯ ಮೂಡುತ್ತದೆ ಎಂದು ಕಸಾಪ ತಿಳಿಸಿದ್ದು ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
ಭೈರಪ್ಪ ಹೇಳಿಕೆಗೆ : ವಾಲ್ಮೀಕಿ ಸೇನೆ ಖಂಡನೆ
ಕೊಪ್ಪಳ. ಡಿ.: ಕನ್ನಡಿಗರು ತರಲೆಗಳು ಎಂಬ ಅರ್ಥದಲ್ಲಿ ಹೇಳಿಕೆ ನೀಡಿರುವ ಭೈರಪ್ಪನವರ ಮಾತಿಗೆ ವಾಲ್ಮೀಕಿ ಸೇನೆ ತೀವ್ರವಾಗಿ ಖಂಡಿಸಿದೆ.
ಕರ್ನಾಟಕ ವಾಲ್ಮೀಕಿ ಸೇನೆ ಯಲಬುರ್ಗಾ ತಾಲೂಕ ಅಧ್ಯಕ್ಷ ಬಸವರಾಜ ಮುಂಡರಗಿ, ಉಪಾಧ್ಯಕ್ಷ ಹಿರಣ್ಯಾಕ್ಷಗೌಡ ಮಾಲಿಪಾಟೀಲ್, ಪ್ರಧಾನ ಕಾರ್ಯದರ್ಶಿ ಭೀಮನಗೌಡ ಪೋಲಿಸ್‌ಪಾಟೀಲ್ ಮಂಡಲಮರಿ, ಜಿಲ್ಲಾ ಉಪಾಧ್ಯಕ್ಷ ರಾಮಣ್ಣ ಹವಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಶರಣಪ್ಪಗೌಡ ಪೋಲಿಸ್‌ಪಾಟೀಲ್ ವಜ್ರಬಂಡಿ, ಸಂಘಟನಾ ಕಾರ್ಯದರ್ಶಿ ಹನುಮಂತಗೌಡ ಪೋಲಿಸ್ ಪಾಟೀಲ್ ಇತರರು ಖಂಡಿಸಿ ಭೈರಪ್ಪನವರು ತಮ್ಮ ಅಪ್ರಬುದ್ಧ ಹೇಳಿಕಯನ್ನು ಹಿಂದೆ ಪಡೆಯಬೇಕು, ಇಲ್ಲವಾದರೆ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
0 comments:
Post a Comment