ಕೊಪ್ಪಳ ನ. : ಕೊಲೆ ಆರೋಪ ಎದುರಿಸುತ್ತಿದ್ದ ೩ ಜನ ಆರೋಪಿತರಿಗೆ ೨ನೇ ತ್ವರಿತ ನ್ಯಾಯಾಲಯವು ೫ ವರ್ಷ ೬ ತಿಂಗಳ ಸಾದಾ ಶಿಕ್ಷೆಯನ್ನು ವಿಧಿಸಿರುತ್ತದೆ.
ತಾವರಗೇರಾ ಪೋಲಿಸ್ ಠಾಣೆ ವ್ಯಾಪ್ತಿಯ ಗಂಗನಾಳ ಗ್ರಾಮದಲ್ಲಿ ದಿನಾಂಕ: ೧೬-೮-೨೦೦೮ ರಂದು ರಾತ್ರಿ ೯ ಗಂಟೆಗೆ ಅದೇ ಗ್ರಾಮದ ಯಂಕಪ್ಪ ತಂದೆ ಶಿವಪ್ಪ ಗೊಡಿನಾಳ ನಿಂಗಪ್ಪ ತಂದೆ ಶಿವಪ್ಪ ಗೊಡಿನಾಳ ಹನಮಂತ ತಂದೆ ಶಿವಪ್ಪ ಗೊಡಿನಾಳ ನೀಲಪ್ಪ ತಂದೆ ಶಿವಪ್ಪ ಗೊಡಿನಾಳ ಹಾಗು ಶಿವಮ್ಮ ಗಂಡ ಶಿವಪ್ಪ ಗೊಡಿನಾಳ ಇವರು ಅಕ್ರಮ ಕೂಟ ಕಟ್ಟಿಕೊಂಡು ರಾಮಪ್ಪ ಎನ್ನುವವರ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ೧ನೇ ಆರೋಪಿ ಯಂಕಪ್ಪನ ಹೆಂಡತಿ ಜೊತೆ ರಾಮಪ್ಪನ ಅನೈತಿಕ ಸಂಬಂಧ ಹೊಂದಿರುವನು ಎಂದು ತಿಳಿದು ಅತನಿಗೆ ಕೊಲೆ ಮಾಡುವ ಉದ್ದೇಶದಿಂದ ಯಂಕಪ್ಪನು ರಾಮಪ್ಪನ ಕುತ್ತಿಗೆಗೆ ಕುಡುಗೋಲಿನಿಂದ ಹೊಡೆದು ನಿಂಗಪ್ಪ ಮತ್ತು ಹನಮಂತ ಇವರು ಬಡಿಗೆಗಳಿಂದ ಹೊಡೆದು ಇನ್ನುಳಿದವರು ಕೈಂದ ಹೊಡೆಬಡೆ ಮಾಡಿ ಮನೆಯೋಳಗಿನಿಂದ ಅಂಗಳಕ್ಕೆ ಎಳೆದುತಂದು ಕಾಲಿನಿಂದ ಒದ್ದು ತೀವ್ರಸ್ವರೂಪ ಗಾಯಗೊಳಿಸಿದ ಮೇರೆಗೆ ರಾಮಪ್ಪನು ಬಳ್ಳಾರಿಯ ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ಮೈತಪಟ್ಟಿದ್ದರಿಂದ ಕುಷ್ಟಗಿ ಸರ್ಕಲ್ ಇನ್ಸಪೆಕ್ಟರ್ ತನಿಖೆ ನಡೆಸಿ ೫ ಜನ ಆರೋಪಿತರ ವಿರುದ್ದ ದೋಷಾರೋಪಣ ಪಟ್ಟಿ ಸಲ್ಲಿಸದ್ದರು.
ಪ್ರಕರಣದ ವಿಚಾರಣೆಯಲ್ಲಿ ವಾದ ವಿವಾದ ಆಲಿಸಿದ ಲೆಕ್ಕದಪ್ಪ ಜಂಬಗಿ ೨ನೇ ತ್ವರಿತ ನ್ಯಾಯಾಧೀಶರು ಕೊಪ್ಪಳ ಇವರು ಯಂಕಪ್ಪ ನಿಂಗಪ್ಪ ಹಾಗೂ ಹನಮಂತ ಇವರ ಮೇಲಿನ ಆರೋಪ ಸಾಭೀತು ಪಟ್ಟಿರುತ್ತದೆಂದು ತಲಾ ರೂ.೧೧.೦೦೦ಗಳ ದಂಡ ಹಾಗೂ ೫ ವರ್ಷ ೬ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದು ದಂಡದ ಮೊತ್ತದಲ್ಲಿ ರೂ.೩೦.೦೦೦ ಗಳನ್ನು ಪಿರ್‍ಯಾಧಿದಾರನಿಗೆ ಪರಿಹಾರ ರೂಪದಲ್ಲಿ ನೀಡಲು ಆದೇಶಿಸಲಾಗಿದೆ. ನೀಲಪ್ಪ ಹಾಗೂ ಶಿವಪ್ಪ ಇವರ ಮೇಲಿನ ಅರೋಪ ಸಾಭೀತಾಗಿಲ್ಲವೆಂದು ಇವರನ್ನು ಬಿಡುಗಡೆಗೋಳಿಸಲಾಗಿದೆ. ಸರ್ಕಾರದ ಪರವಾಗಿ ಗೌರಮ್ಮ ದೇಸಾ ವಿಶೇಷ ಸರ್ಕಾರಿ ಅಭಿಯೋಜಕರು ಇವರು ವಾದಿಸಿದ್ದರು.
0 comments:
Post a Comment