PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ನ. : ಕನ್ನಡಿಗರು ಬಾಷಾ ಕಿಳರಿಮೆಯನ್ನು ತೊಡೆದು ಹಾಕಿಬೇಕುವಂದು ವಿಧಾನ ಪರಿಪತ್ ಸದ್ಯಸ ಹಾಲಪ್ಪ ಆಚಾರ ಅವರು ಹೇಳಿದ್ದಾರೆ.
ವಾರ್ತಾ ಇಲಾಖೆಯು ಸರ್ಕಾರಿ ಪ್ರೌಢ ಶಾಲೆ ಭಾನಾಪುರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭಾನಾಪುರ ಹಾಗೂ ಗ್ರಾ.ಪಂ ಭಾನಾಪುರ ಇವರ ಸಂಯುಕ್ತ ಆಶ್ರಯದಲ್ಲಿ ವಿಶೇಷ ಪ್ರಚಾರಂದೋಲನದ ಅಂಗವಾಗಿ ಭಾನಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಆಡಳಿತ ಭಾಷೆಯಾಗಿ ಕನ್ನಡ ವಿಚಾರ ಸಂಕಿರಣ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿತಿದ್ದರು.
ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉನ್ನತ ಸ್ಧಾನಗಳು ದೊರೆಯುವದಿಲ್ಲ ಹೆಚ್ಚಿನ ಅವಕಾಶಗಳ ದೊರೆಯದಿರಬಹುದು ಎನ್ನುವ ಆತಂಕ ಕನ್ನಡಿಗರಲ್ಲಿ ಮನೆ ಮಾಡಿದೆ. ಚೀನಾದಂತಹ ದೇಶಗಳಲ್ಲಿ ಬೇರೆ ಭಾಷೆಗಳಿಗೆ ಪ್ರಾಧಾನ್ಯತೆ ನೀಡದೇ ಚಿನೀ ಭಾಷೆಯಲ್ಲಿ ಆಡಳಿತ ಮತ್ತು ವ್ಯವಹಾರ ನಡೆಸುತ್ತಾರೆ. ಸುಮಾರು ಎರಡು ಸಾ"ರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಬಾಷೆ ಸಮೃದ್ದವಾಗಿದ್ದು ಕನ್ನಡ ಮಾಧ್ಯಮದವರು ಓದಿ ಹಲವರು ಉನ್ನತ ಸ್ಧಾನ ಗಳಿಸಿದ ಉದಾರಣೆಗಳು ನಮ್ಮ ಕಣ್ಮುಂದಿವೆ ಕನ್ನಡಿಗರು ಭಾಷೆ "ಷಯದಲ್ಲಿ ಕೀಳರಿಮೆಯನ್ನು ತೊಡೆದು ಹಾಕಬೇಕು. ರಾಜ್ಯ ಸರ್ಕಾರ ಕನ್ನಡಭಾಷೆಯನ್ನು ಆಡಳಿತ ಭಾಷೆಯನ್ನಾಗಿಸಿದೆ. ಕೇಂದ್ರ ಸರ್ಕಾರ ಕೂಡ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಧಾನ ಮಾನ ದೊರಕಿಸಿ ಕೊಟ್ಟಿದೆ. ಕನ್ನಡ ಮಾಧ್ಯಮದಲ್ಲಿ ಉತ್ತೀರ್ಣ ಆದವರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ. ಶಾಲೆ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳು ಶಿಕ್ಷಕರು ಸಂಭಾಸಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ಮಾತನಾಡಬೇಕು. ಇತರೇ ಭಾಷೆಯ ವ್ಯಾಮೋಹಕ್ಕೆ ಒಳಗಾಗಿದಲ್ಲಿ ತಾ ಭಾಷೆಯ ಕತ್ತುಬಿಗಿದಂತಾಗುತ್ತಾದೆ. ಸಂಪರ್ಕ ಮಾಧ್ಯಮವಾಗಿ ಇತರೇ ಭಾಷೆಯನ್ನು ಕಲಿತು ಕೊಳ್ಳಬಹುದು. ಆದರೇ ಆಡಳಿತ ಮತ್ತು ವ್ಯವಹಾರಗಳನ್ನು ಕನ್ನಡದಲ್ಲಿಯೇ ನಡೆಸಬೇಕು. ನಗರ ಪ್ರದೇಶಗಳಿಂತ ಗ್ರಾಮಾಂತ ಪ್ರದೇಶದಲ್ಲಿ ಕನ್ನಡ ಭಾಷೆ ಜೀವಂತಿಕೆಂದ ಉಳಿದು ಬಂದಿದೆ ನಿರಂತರ ಬಾಷಾ ಬಳಕೆಂದ ಕನ್ನಡ ಭಾಷೆ ಬೆಳವಣಿಗೆ ಸಾದ್ಯ ಎಂದು ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್ ಅವರು ಹೇಳಿದರು.
ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ಭಾಗ್ಯನಗರ ಸರ್ಕಾರಿ ಪದವಿ ಪೂರ್ವಕಾಲೇಜು ಪ್ರಾಚಾರ್ಯ ಸಿ.ವಿ. ಜಡಿಯವರ ಮಾತನಾಡಿ ನಮ್ಮ ಸಂಸ್ಕೃತಿ ಹುಟ್ಟುವುದು ಗುಡಿಸಲಿನಲ್ಲಿ ಭಾಷೆ ಮತ್ತು ಸಂಸ್ಕೃತಿ ಜೊತೆ-ಜೊತೆಯಾಗಿ ಬೆಳೆದು ಬರುತ್ತವೆ. ಭಾಷೆ ಸತ್ವಕಳೆದುಕೊಂಡರೆ ಸಂಸ್ಕೃತಿಯೂ ಆಳಿದು ಹೊಗುತ್ತದೆ. ಮನುಷನಿಗೆ ಭಾಷೆಯೇ ಇಲ್ಲವಾದರೆ ಅವನ ಭಾವನೆಗಳಿಗೆ ಬೆಲೆಯೇ ಇಲ್ಲದಾಗುತ್ತದೆ ಕನ್ನಡ ಭಾಷೆ ಬಳಕೆಯಲ್ಲಿ ಉದಾಸೀನ ತಾಳಿದರೆ ಸಂಸ್ಕೃತಿ ಹಾಗೂ ನಮ್ಮ ಬದುಕು ಹಾಳಾಗುತ್ತದೆ. ಮನುಕುಲ ಬೆಳೆಯಲು ಬಾಷೆ ಬೇಕು ಕನ್ನಡ ಭಾಷೆಂದ ಜೀವನ ಬೆಳಗಿಸೋಣ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಬಾಗವಹಿಸಿದ್ದ ಜಿ.ಪಂ ಸದಸ್ಯ ಯಂಕಣ್ಣ ಯರಾಶಿ ಮಾತನಾಡಿ ಸರ್ಕಾರದ ವ್ಯವಹಾರ ಸುತ್ತೋಲೆಗಳು ಕನ್ನಡದಲ್ಲಿಯೆ ನಡೆಯುತ್ತಿದೆ ಸರ್ಕಾರದ ಯೋಜನೆ ಆದೇಶಗಳು ಕನ್ನಡದಲ್ಲಿ ಇದರೆ ಜನಸಾಮಾನ್ಯರಿಗೆ ಯೋಜನೆಗಳ ಪ್ರಯೊಜನೆ ಪಡೆದು ಕೋಳಲು ಅನುಕೂಲ ಎಂದು ಅವರು ಅಭಿಪ್ರಾಯ ಪಟ್ಟರು.
ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಬಸವರಾಜ ಕವಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಶೇಖರಪ್ಪ ಗುಡಿ, ಮುಖ್ಯೋಪಾಧ್ಯಾಯ ಎಂ ಆರ್.ವೀರಣ್ಣ ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಯಲ್ಲಪ್ಪ ಮೇಟಿ, ತಾ.ಪಂ ಸದಸ್ಯ ಶಿವಕುಮಾರ ನಾಗಲಾಪುರ ಮಠ, ಕುಂತಳ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಂಬು ಜೋಳದ, ಗ್ರಾ.ಪಂ ಸದಸ್ಯರುಗಳಾದ ಶರಣಪ್ಪ ಕುಂಬಾರ ಸಂಗಯ್ಯ ಸಾವಳಿಗಿಮಠ ಗೌರಮ್ಮ ಚಲವಾದಿ, ಹುಲಿಗೆಮ್ಮ ಹನಮಗೌಡ, ಸಯ್ಯದಸಾಬ ಗವಿಸಿದ್ದಪ್ಪ ಮಡಿವಾಳ, ಅಶೋಕ ಮುದ್ಲಾಪುರ, ಮುದಿಯಪ್ಪ ಬನ್ನಿಕೊಪ್ಪ, ಫಕೀರಪ್ಪ ದೊಡಮನಿ, ಹುಸೇನ್‌ಸಾಬ ತಳಬಾಳ, ತಿಪ್ಪವ್ವ ಕೊಪ್ಪಳ, ಮುಂತಾವದವರು ವೇದಿಕೆ ಮೇಲೆ ಉಪಸ್ದಿತರಿದ್ದರು ಗ್ರಾ.ಪಂ ಅಧ್ಯಕ್ಷ ಪಾರ್‍ವತಮ್ಮ ಬಗನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು
ಪ್ರಾರಂಭದಲ್ಲಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾದ್ಯಾಯ ಎಚ್.ಸುಬಾಸಚಂದ್ರ ಸ್ವಾಗತಿಸಿದರು ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಅಕಳವಾಡಿ ಪ್ರಾಸ್ತವಿಕ ಭಾಷೆಣ ಮಾಡಿದರು ಸಹ ಶಿಕ್ಷಕ ಅಡಿವೆಪ್ಪ ವಂದಿಸಿದರು ಅನಂದ ಕನ್ನಾರಿ ಕಾರ್ಯಕ್ರಮ ನಿರೂಪಿಸಿದರು.

Advertisement

0 comments:

Post a Comment

 
Top