PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ನ. : ಸಮಾಜ ಕಲ್ಯಾಣ ಇಲಾಖೆಯು ಜಿಲ್ಲೆಯ ಪರಿಶಿಷ್ಟ ವರ್ಗದ ವಿದ್ಯಾವಂತ ಮಹಿಳಾ ಅಭ್ಯರ್ಥಿಗಳಿಗೆ ಪ್ರಸಕ್ತ ಸಾಲಿನ ಕೌಶಲ್ಯ ಯೋಜನೆಯಡಿ ವಿವಿಧ ಕಂಪ್ಯೂಟರ್ ತರಬೇತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೌಶಲ್ಯ ಯೋಜನೆಯಡಿ ೦೪ ತಿಂಗಳಿನ ಅವಧಿಯ ಡೆಸ್ಕ್ ಟಾಪ್ ಪಬ್ಲಿಂಗ್, ಆಫೀಸ್ ಅಟೋಮೇಷನ್, ಪಿ.ಸಿ. ಅಸೆಂಬ್ಲಿ, ಕಂಪ್ಯೂಟರ್ ಪ್ರೋಗ್ರಾಮರ್, ಅಕೌಂಟಿಂಗ್ ಮ್ಯಾನೇಜ್‌ಮೆಂಟ್, ಆಟೋ ಕ್ಯಾಡ್ ತರಬೇತಿ ಅಲ್ಲದೆ ಇದರ ಜೊತೆಗೆ ಬೇಸಿಕ್ ಸ್ಪೋಕನ್ ಇಂಗ್ಲೀಷ್ ಮತ್ತು ಪರ್ಸೊನಾಲಿಟಿ ಡೆವಲಪ್‌ಮೆಂಟ್ ತರಬೇತಿ ನೀಡಲಾಗುವುದು. ಅರ್ಜಿ ಸಲ್ಲಿಸಲು ಎಸ್.ಎಸ್.ಎಲ್.ಸಿ./ಪಿ.ಯು.ಸಿ./ಐಟಿಐ/ಡಿಪ್ಲೋಮಾ/ಪದ" ಉತ್ತೀರ್ಣರಾಗಿರಬೇಕು. ೦೬ ತಿಂಗಳ ಅವಧಿಯ ಡಿಪ್ಲೋಮಾ ಇನ್ ಕಂಪ್ಯೂಟರ್ ಟೀಚರ್‍ಸ್ ಟ್ರೇನಿಂಗ್, ಅಡ್ವಾನ್ಸ್‌ಡ್ ಡಿಪ್ಲೋಮಾ ಇನ್ ಸಾಫ್ಟ್‌ವೇರ್ ಟೆಕ್ನಾಲಜಿ ಮತ್ತು ಡಿಪ್ಲೋಮಾ ಇನ್ ಪಿ.ಸಿ. ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ತರಬೇತಿ ಅಲ್ಲದೆ ಇದರ ಜೊತೆಗೆ ಬೇಸಿಕ್ ಸ್ಪೋಕನ್ ಇಂಗ್ಲೀಷ್ ಮತ್ತು ಪರ್ಸೊನಾಲಿಟಿ ಡೆವಲಪ್‌ಮೆಂಟ್ ತರಬೇತಿ ನೀಡಲಾಗುವುದು, ಎಸ್.ಎಸ್.ಎಲ್.ಸಿ./ಪಿ.ಯು.ಸಿ/ಪದವಿ/ ಐಟಿಐ/ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿ ಸಲ್ಲಿಸಲು ಕುಟುಂಬದ ರ್ವಾಕ ಆದಾಯ ೦೧ ಲಕ್ಷ ರೂ. ಮೀರಿರಬಾರದು, ವಯೋಮಿತಿ ೧೮ ರಿಂದ ೩೫ ವರ್ಷದೊಳಗಿರಬೇಕು. ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿಯನ್ನು ಆಯಾ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆಯಾ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಗೆ ಡಿ. ೧೦ ರ ಒಳಗಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

Advertisement

0 comments:

Post a Comment

 
Top