ಕೊಪ್ಪಳ : ನಗರದಲ್ಲಿಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಎ ಐಟಿಯುಸಿ ಅಂಗನವಾಡಿ ಕಾರ್ಯಕರ್ತೆಯರನ್ನು ಖಾಯಂಗೊಳಿಸಬೇಕು, ಅವರಿಗೆ ಕನಿಷ್ಟ ಕೂಲಿ ನೀಡಬೇಕು , ನಿವೃತ್ತಿ ವೇತನ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಧರಣಿ ಹಮ್ಮಿಕೊಂಡಿದ್ದರು.
ಮಹಿಳಾ ಮತ್ತು ಕಲ್ಯಾಣ ಮಂತ್ರಿ ಸಿ.ಸಿ.ಪಾಟೀಲ್ ರಿಗೆ ತಹಶೀಲ್ ದಾರರ ಮುಖಾಂತರ ಸಲ್ಲಿಸಲಾದ ಮನವಿಯಲ್ಲಿ ಕಾರ್ಯಕರ್ತೆಯರನ್ನು ಖಾಯಂಗೊಳಿಸಬೇಕು, ಸಾಮಗ್ರಿ ವಿತರಿಸುವದರಲ್ಲಾಗಿರುವ ಹಗರಣಗಳ ಬಗ್ಗೆ ತನಿಖೆಯಾಗಬೆಕು, ಬಾಕಿ ಇರುವ ಗೌರವಧನ ಬಿಡುಗಡೆ ಮಾಡಬೇಕು, ಖಾಸಗೀಕರ ಮಾಡಬಾರದು, ಮಕ್ಕಳಿಗೆ ಕಳಪೆ ಆಹಾರ ಪೂರೈಕೆ ಮಾಡುವುದನ್ನು ನಿಲ್ಲಿಸಬೇಕು,ಕಟ್ಟಿಗೆ ಭತ್ಯೆ ಹೆಚ್ಚಿಸಬೇಕು ಎಂದು ಆಗ್ರಹಿಸಲಾಗಿದೆ. ತಹಶೀಲದಾರರ ಕಚೇರಿ ಎದುರಿಗೆ ನಡೆದ ಧರಣಿಯಲ್ಲಿ ಸುಮಾರು 400 ಕ್ಕೂ ಹೆಚ್ಚು ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಿದ್ದರು. ಧರಣಿಯ ನೇತೃತ್ವನ್ನು ಬಸವರಾಜ್ ಶೀಲವಂತರ, ವಿಠ್ಠಪ್ಪ ಗೋರಂಟ್ಲಿ, ಗಾಳೆಪ್ಪ ಮುಂಗೋಲಿ, ನಾಗರಾಜ ಚೆಲುವಾದಿ, ಪರಿಮಳಾ ಕುಲಕರ್ಣಿ, ಜಾನಕಿ ಶೀಲವಂತರ ವಹಿಸಿದ್ದರು.
ಇದಕ್ಕೂ ಮೊದಲು ಮುಖ್ಯಮಂತ್ರಿಗಳ ಪ್ರತಿಕೃತಿಯ್ನು ದಹನ ಮಾಡಲಾಯಿತು.
0 comments:
Post a Comment