ಕೊಪ್ಪಳ ಅ. : ಕೊಪ್ಪಳ ಜಿಲ್ಲೆಯ ರೈಲ್ವೆ ಸೌಲಭ್ಯ ಹಾಗೂ ವ್ಯವಸ್ಥೆಯ ಅಭಿವೃದ್ಧಿಗಾಗಿ ಆದ್ಯತೆಯ ಮೇರೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಹಲವು ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ರೈಲ್ವೆ ಇಲಾಖೆ ನೀಡಿದೆ ಎಂದು ಸಂಸದ ಶಿವರಾಮಗೌಡ ಅವರು ತಿಳಿಸಿದ್ದಾರೆ.
ಕೊಪ್ಪಳ ರೈಲ್ವೆ ಸಮಸ್ಯೆ ಹಾಗೂ ಹಲವು ಬೇಡಿಕೆಗಳಿಗೆ ಸಂಬಂಧಿಸಿದಂತೆ ಕಳೆದ ಅ. ೦೬ ರಂದು ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ್ ಅವರೊಂದಿಗೆ ನಡೆದ ಸಭೆಯಲ್ಲಿ ಸ್ತೃತವಾಗಿ ಚರ್ಚಿಸಲಾವಿಗಿದೆ. ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಎರಡನೆ ಪ್ಲಾಟ್ ಫಾರ್ಮ್ ನಿರ್ಮಿಸುವ ಕುರಿತು ಈಗಾಗಲೆ ಹೊಸಪೇಟೆಂದ ಕೊಪ್ಪಳದವರೆಗೆ ಪ್ರಾರಂಭವಾಗಿವ ಡಬಲ್ ರೇಲ್ ಲೈನಿಂಗ್ ಮಂಜೂರಾತಿಯಲ್ಲಿ ಈ ಯೋಜನೆಯನ್ನು ಸೇರಿಸಲಾಗಿದ್ದು, ಆರ್.ವಿ.ಎನ್.ಎಲ್. ನಿಂದ ಕಾಮಗಾರಿ ಅನುಷ್ಠಾನಗೊಳ್ಳಲಿದೆ. ಇದಕ್ಕೆ ಬೇಕಾಗುವ ಜಮೀನನ್ನು ಪಡೆಯಲು ರೈಲ್ವೆ ಇಲಾಖೆ ಈಗಾಗಲೆ ಅಗತ್ಯ ಕ್ರಮ ಕೈಗೊಂಡಿದೆ. ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ನಗರಸಭೆಯ ವತಿಂದ ಕುಡಿಯುವ ನೀರಿನ ಸಂಪರ್ಕ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಕೊಪ್ಪಳ-ಭಾಗ್ಯನಗರದ ಗೇಟ್ ಸಂ. ೬೨ ಕ್ಕೆ ಮೇಲ್ಸೇತುವೆಗೆ ಸ್ಥಳ ಗುರುತಿಸಲಾಗಿದ್ದು, ಇದರ ಅಂದಾಜು ಪತ್ರಿಕೆ ಹಾಗೂ ಸೇತುವೆ ನಕ್ಷೆ ತಯಾರಿಸಲು ಬೆಂಗಳೂರಿನ ರೈಟ್ಸ್ ಸಂಸ್ಥೆ ಅವರಿಗೆ ವಹಿಸಲಾಗಿದೆ. ಗುಂತಕಲ್-ಹುಬ್ಬಳ್ಳಿ ಮಾರ್ಗದಲ್ಲಿ ನೂತನವಾಗಿ ಪ್ಯಾಸೆಂಜರ್ ರೈಲನ್ನು ಪ್ರಾರಂಭಿಸಲು ಮನವಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಸಂಚಾರ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಹೌರಾ ಎಕ್ಸ್‌ಪ್ರೆಸ್ ರೈಲನ್ನು ಕೊಪ್ಪಳದಲ್ಲಿ ನಿಲುಗಡೆ ಮಾಡಲು ರೈಲ್ವೆ ಬೋರ್ಡ್‌ಗೆ ಶಿಫಾರಸು ಮಾಡಲಾಗಿದ್ದು, ಶೀಘ್ರದಲ್ಲೆ ಬೋರ್ಡಿನ ಅನುಮತಿ ದೊರೆಯಲಿದೆ. ಯಲಬುರ್ಗಾ ತಾಲೂಕು ಬನ್ನಿಕೊಪ್ಪದಲ್ಲಿ ಪ್ಯಾಸೆಂಜರ್ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಗುಂತಕಲ್-ಗುಲಬರ್ಗಾ ಮಾರ್ಗವಾಗಿ ಸದ್ಯ ಮುಂಬೈ-ಚೆನ್ನೈ ಎಕ್ಸ್‌ಪ್ರೆಸ್‌ನ ೦೩ ರೈಲುಗಳು ಸಂಚರಿಸುತ್ತಿದ್ದು, ಆ ಪೈಕಿ ಒಂದು ರೈಲನ್ನು ಕೊಪ್ಪಳ ಮಾರ್ಗವಾಗಿ ಓಡಿಸಲು ರೈಲ್ವೆ ಬೋರ್ಡ್‌ಗೆ ಶಿಫಾರಸು ಮಾಡಲಾಗುವುದು, ಜೋದ್‌ಪುರ-ಯಶವಂತಪುರ ಹಾಗೂ ಅಜ್ಮೀರ್-ಯಶವಂತಪುರ ಮಾರ್ಗದ ರೈಲುಗಳನ್ನು ಸೊಲ್ಲಾಪುರ ಮಾರ್ಗದಲ್ಲಿ ಸಂಚರಿಸಲು ಮನವಿ ಸಲ್ಲಿಸಲಾಗುವುದು. ನೂತನ ರೈಲ್ವೆ ಮಾರ್ಗಗಳಾದ ಗದಗ-ವಾಡಿ ಹಾಗೂ ಕೊಪ್ಪಳ-ಆಲಮಟ್ಟಿ ರೈಲ್ವೆ ಮಾರ್ಗಕ್ಕೆ ಸಾರ್ವಜನಿಕರ ಅಹವಾಲುಗಳನ್ನು ಪಡೆದು ಎಲ್ಲರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ಸರ್ವೆ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲು ಸಭೆಯಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಸಂಸದ ಶಿವರಾಮಗೌಡ ಅವರು ತಿಳಿಸಿದ್ದಾರೆ.
Why our Parliament member changing the roots of Jodhpur and Ajmir trains?. first he will take interest about new train running. out of three chennai - mumbai trains is good decision. and better the bhagyanagar gate is shifted to Kinnal gate. because in future we make godown plat form and second platform for passangers, but there is no space in rly stn. hence shift it to Kinnal gate.
ReplyDelete