ಅಂತರಂಗದ ಧ್ವನಿಯಿಲ್ಲದ ಕವನಗಳಿಗೆ ಒಣ ಆಡಂಭರದಿಂದ ಪ್ರಯೋಜನವಿಲ್ಲ ಎಂದು ಸಾಹಿತಿ,ವಿಮರ್ಶಕ ಡಾ.ವಿ.ಬಿ.ರಡ್ಡೇರ ಹೇಳಿದರು. ಅವರು ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಕವನಗಳ ವಿಶ್ಲೇಷಣೆ ಮಾಡುತ್ತ ಕವಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕವಿಯು ಎಲ್ಲ ಬಗೆಯ ಬೇಧಗಳನ್ನು ಹೊಡೆದೋಡಿಸಲು ನಿರಂತರ ಹೋರಾಟ ಮಾಡುತ್ತಲೇ ಇರುತ್ತಾನೆ ಈ ಹೋರಾಟ ಯಾವತ್ತೂ ಸಾಗಿಯೇ ಇರುತ್ತದೆ. ಕವಿಯು ಯಾವಾಗಲೂ ಅಂತರ್ಮುಖಿ ವ್ಯಕ್ತಿತ್ವ ಹೊಂದಿರುತ್ತಾನೆ. ತನ್ನ ಭಾವನೆಗಳಿಗೆ ರೂಪು ಕೊಡುವ ಕಲೆಗಾರಿಕೆಯಿಂದ ಮತ್ತು ಸತತ ಅಧ್ಯಯನದಿಂದ ಕಾವ್ಯ ಶಕ್ತಿಯುತವಾಗುತ್ತದೆ. ಸಮಾಜವನ್ನು ಜೊತೆಯಲ್ಲಿಟ್ಟುಕೊಂಡು ಹೋಗುವ ಕಾವ್ಯ,ಸಾಹಿತ್ಯ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು. ನಮ್ಮ ಹೈದ್ರಾಬಾದ್ ಕರ್ನಾಟಕ ಸಾಹಿತ್ಯ ಭೋರ್ಗರೆದ ಭೂಮಿ . ಇಲ್ಲಿ ದಾಸ ಮತ್ತು ವಚನ ಸಾಹಿತ್ಯ ವಿಫುಲವಾಗಿ ರಚಿತಗೊಂಡಿವೆ. ಆದರೆ ಈಗ ನಮ್ಮ ಭಾಗದ ಕವಿ, ಸಾಹಿತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ವಿಷಾಧಿಸಿದರು. ಈ ಭಾಗದ ಸಾಹಿತ್ಯ ಕಾರ್‍ಯಕ್ರಮಗಳಿಗೆ, ಸಾಹಿತಿಗಳಿಗೆ ಕವಿಸಮೂಹದ ಈ ಕವಿಸಮಯ ಸೂಕ್ತ ವೇದಿಕೆಯಾಗಲಿ ಎಂದು ಹಾರೈಸಿದರು.
ಈ ವಾರದ ಕವಿಸಮಯದಲ್ಲಿ ೨೧ ಕವಿಗಳು ತಮ್ಮ ಕವನ ವಾಚನ ಮಾಡಿದರು. ಅರುಣಾ ನರೇಂದ್ರ-ಪುಟ್ಟನ ಊಟ, ಶಾಂತಾದೇವಿ ಹಿರೇಮಠ-ಬರ ವರ ಚುಟುಕು, ಪುಷ್ಪಾಲತಾ ಏಳುಭಾವಿ- ಮುತ್ತು ಬಂದಾವ ಕೇರಿಗೆ, ವಾಗೀಶ್‌ಪಾಟೀಲ್- ನೆನೆದು, ಶ್ರೀನಿವಾಸ ಚಿತ್ರಗಾರ- ಅವ್ವಿ, ಶಿವಪ್ರಸಾದ ಹಾದಿಮನಿ- ಆತ್ಮಹತ್ಯೆ, ಜಿ.ಎಸ್.ಬಾರಕೇರ-ಚೆಂದುಳ್ಳಿ ಚೆಲುವೆ, ಮಹಾಂತೇಶ ಮಲ್ಲನಗೌಡರ- ಹೈ.ಕ.ವಿಮೋಚನೆ, ಶಿ.ಕಾ.ಬಡಿಗೇರ-ಭಂಗಿಗಳ ಸ್ವಗತ, ವಿಠ್ಠಪ್ಪ ಗೋರಂಟ್ಲಿಇ- ಅಂದು ಗೋದ್ರಾದಲ್ಲಿ ಮೂಡಿದ ಸೂರ್‍ಯ, ವಿ.ಬಿ.ರಡ್ಡೇರ- ನಾಗರಿಕತೆ, ಎಂ.ಡಿ.ನಂಜುಂಡಸ್ವಾಮಿ, ರಂಗನಾಥ ಕೋಳೂರು-ಪ್ರತಿಭಟನೆ, ಜಡೆಯಪ್ಪ ಇಟಗಿ- ಪ್ರೇಮ ಪಟಾಕಿ, ಶರಣಪ್ಪ ಕೊಪ್ಪದ- ಸೂರ್‍ಯಕಾಂತಿ, ಮಹೇಶ ಬಳ್ಳಾರಿ- ಒಂದು ರಾಜಕೀಯ ಕವಿತೆ, ವಿರೇಶ ಹುಲ್ಲೂರ-ಪ್ರೀತಿ, ವೀರಣ್ಣ ಹುರಕಡ್ಲಿ- ಮನಸ್ಸು, ಬೆಳಕು, ಎಂ.ಡಿ.ಹುಸೇನ್- ಭ್ರಷ್ಟ ರಾಜಕಾರಣಿ, ಶಿವಾನಂದ ಹೊದ್ಲೂರ- ಸಂಪತ್ತು ಚುಟುಕು, ಬಿ.ಸಿ.ಪಾಟೀಲ- ಚುಟುಕು ಸತಿ, ಸಿರಾಜ್ ಬಿಸರಳ್ಳಿ- ಸಾವು ಎಂಬ ಕವನಗಳನ್ನು ವಾಚನ ಮಾಡಿದರು.
ಕಸಾಪದ ರಾಜಶೇಖರ್ ಅಂಗಡಿ ಸೇರಿದಂತೆ ಇತರ ಆಸಕ್ತರು ಭಾಗವಹಿಸಿದ್ದ ಕಾರ್‍ಯಕ್ರಮವನ್ನು ಕವಿಸಮೂಹದ ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.
0 comments:
Post a Comment