
ಕೊಪ್ಪಳ : ಹೆದ್ದಾರಿ ಅಗಲೀಕರಣದ ಹೋರಾಟದಲ್ಲಿ ಬಂಧಿತರಾಗಿದ್ದ 15ಜನ ಕರವೇ ಕಾರ್ಯಕರ್ತರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಬಂಧಿತರನ್ನು ಕೈಕೊಳ ತೊಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ತೀವ್ರ ಟೀಕೆಗೆ ಕಾರಣವಾಗಿತ್ತು. ಕರವೇ ಕಾರ್ಯಕರ್ತರು ಜಿಲ್ಲಾ ಕಾರಾಗೃಹಕ್ಕೆ ತೆರಳಿ ಕೈಕೊಳ ತೊಡಿಸಿದ ಕೈಗಳಿಗೆ ಹಾರ ತೊಡಿಸಿ ಬೈಕ್ ಗಳ ಮೇಲೆ ಮೆರವಣಿಗೆ ಮಾಡಿಕೊಂಡು ಬಂದು ನಗರದ ಅಶೋಕ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.ಪಟಾಕಿ ಹಚ್ಚಿ ,ಸಿಹಿಯನ್ನು ಹಂಚುವುದರ ಮೂಲಕ ಸಂಭ್ರಮ ಆಚರಿಸಿದರು. ತಮ್ಮ ಮೇಲೆ ಹಲ್ಲೆ ಮಾಡಿದ ಅಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧ್ಯಕ್ಷ ಬಸನಗೌಡ ಪಾಟೀಲ್ ಆಗ್ರಹಿಸಿದರು
0 comments:
Post a Comment