PLEASE LOGIN TO KANNADANET.COM FOR REGULAR NEWS-UPDATES


ದುಬೈ: ಇಲ್ಲಿನ ಜೆಮ್ ಸ್ಕೂಲ್ ನಲ್ಲಿ ಸಜ್ಜಿಸಲಾದ ಆದಿ ಕವಿ ಪಂಪ ಸಭಾಂಗಣದಲ್ಲಿ ಧ್ವನಿ ಪ್ರತಿಷ್ಠಾನದ ಬೆಳ್ಳಿಹಬ್ಬದ ಸಲುವಾಗಿ ನಡೆದ ಕನ್ನಡ ಭುವನೇಶ್ವರಿಯ ಅರಾಧನೆಯು ಅತ್ಯಂತ ವೈಭವಯುತವಾಗಿ ಸಂಪನ್ನಗೊಂಡಿತು. ಹಿರಿಯ ಚೇತನ ಚೆನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನವು ದಿನಪೂರ್ತಿ ನಡೆದು ಧ್ವನಿಯ ಬೆಳ್ಳಿಹಬ್ಬದ ಸಂಭ್ರಮಕ್ಕೆ ಶೋಭೆಯನ್ನು ನೀಡಿತು. ಧ್ವನಿ ಪ್ರತಿಷ್ಠಾನದ ಕನಸು ನನಸಾದ ಸಾರ್ಥಕತೆಯ ಕ್ಷಣಗಳು, ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರರ ಸಾಧನೆಯ ಪಥದಲ್ಲಿ ಮಗದೊಂದು ಮೈಲಿಗಲ್ಲು!!.
ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿಯೇ ತಾಯ್ನಾಡಿನಿಂದ ವಿಶೇಷ ಗಣ್ಯ ಅತಿಥಿಗಳು ಆಗಮಿಸಿದ್ದರು. ಚೆನ್ನವೀರ ಕಣವಿ, ಶಿಕ್ಷಣ ಮಂತ್ರಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಅನಿವಾಸಿ ಭಾರತೀಯ ರಾಜ್ಯ ಉಪಾಧ್ಯಕ್ಷ ಗಣೇಶ್ ಕಾರ್ಣಿಕ್, ಜಯಂತ್ ಕಾಯ್ಕಿಣಿ, ಚಿತ್ರ ನಟಿ ತಾರ, ವಿಜಯಕರ್ನಾಟಕ ದೈನಿಕ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್, ಕೋಟೆ ಶೈಲಿಯ ಖ್ಯಾತಿಯ ಶಶಿಧರ್ ಕೋಟೆ, ಹನಿಗವನಗಳ ದೊರೆ ಜರಗನ ಹಳ್ಳಿ ಶಿವಶಂಕರ್, ಹಿರಿಯ ರಂಗ ಕರ್ಮಿ ವೆಂಕಟರಾಜು, ಮನು ಬಳಿಗಾರ್, ಶ್ರೀಮತಿ ಅಭಿಲಾಷಾ ,ಕುವೈಟಿನಿಂದಾಗಮಿಸಿದ ಇಲ್ಯಾಸ್ ಸಾಂಕ್ಟಸ್, ಸೌದಿಯಿಂದಾಗಮಿಸಿದ ಕನಕರಾಜು, ಮತ್ತು ದುಬಾಯಿ ಯವರೇ ಆದ ಪದ್ಮಶ್ರಿ ಪುರಸ್ಕೃತ ಬಿ. ಆರ್. ಶೆಟ್ಟಿ, ಜಾಫರುಲ್ಲಾ ಖಾನ್, ಸರ್ವೋತ್ತಮ ಶೆಟ್ಟಿ, ಶೇಖರ್ ಶೆಟ್ಟಿ ಕಳತ್ತೂರು ಮತ್ತಿತರ ಗಣ್ಯವ್ಯಕ್ತಿಗಳನ್ನು ಸಂಭ್ರಮದಿಂದ ಪಂಚವಾದ್ಯಗಳ ವಾದನದೊಂದಿಗೆ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತರುವ ಮೂಲಕ ಸಾಹಿತ್ಯ ಸಮ್ಮೇಳನವು ಸಂಚಾಲನೆ ಗೊಂಡಿತು
ಪದ್ಮಶ್ರಿ ಪುರಸ್ಕೃತ ಬಿ. ಆರ್. ಶೆಟ್ಟಿಯವರ ನೇತೃತ್ವದಲ್ಲಿ ಸಮ್ಮೇಳನಾಧ್ಯಕ್ಷ ಚೆನ್ನವೀರ ಕಣವಿ ಮತ್ತು ಇತರ ಗಣ್ಯರು ದೀಪ ಬೆಳಗಿ ಉದ್ಘಾಟಿಸಿದರು. ಪ್ರಕಾಶ್ ರಾವ್ ಪಯ್ಯಾರರು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನ್ನಾಡಿದರು. ಸಮ್ಮೇಳನಾಧ್ಯಕ್ಷ ಚೆನ್ನವೀರ ಕಣವಿ, ಶಿಕ್ಷಣ ಮಂತ್ರಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಅನಿವಾಸಿ ಭಾರತೀಯ ರಾಜ್ಯ ಉಪಾಧ್ಯಕ್ಷ ಗಣೇಶ್ ಕಾರ್ಣಿಕರವರು ಸಮಾರಂಭದಲ್ಲಿ ಭಾಷಣ ಮಾಡಿದರು.
ತಮ್ಮ ಉದ್ಘಾಟನಾ ಬಾಷಣದಲ್ಲಿ ಡಾ.ಬಿ.ಆರ್.ಶೆಟ್ಟಿಯವರು ದ್ವನಿ ಪರ್ತಿಷ್ಟಾನದ ಈ ಕಾರ್ಯಕ್ರಮಕ್ಕೆ ಯಶಸ್ಸುಕೋರಿದರು ಹಾಗೆಯೇ ಇದೇ ಶ್ರದ್ದೆಯಿಂದ ಮಂದುವರಿಸಿ ಇನ್ನೂ ಹೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಾದರಪಡಿಸುವ ನಿಟ್ಟಿನಲ್ಲಿ ತಮ್ಮ ಬೆಂಬಲವನ್ನು ಸೂಚಿಸಿದರು.
ವಿಶ್ವೇಶ್ವರ್ ಹೆಗ್ಗಡೆ ಕಾಗೇರಿಯವರು ತಮ್ಮ ಭಾಷಣದಲ್ಲಿ ಕನಡಿಗರು ದುಬಾಯಿಯನ್ನು ಕಟ್ಟುವ ರೀತಿಯನ್ನು ತುಂಬ ಮೆಚ್ಚಿಕೊಂಡದ್ದಲ್ಲದೆ ಬ್ರೈನ್- ಡ್ರೈನಿನ ಬಗ್ಗೆ ಬೇಸರಿಸಿಕೊಂಡರು. ಮಾನವ ಶಕ್ತಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ವ್ಯವಸ್ಥೆ ಇದ್ದಿರುತ್ತಿದ್ದರೆ ನೀವಿಲ್ಲಿರುತ್ತಿರಲಿಲ್ಲ ನಿಮ್ಮ ದೇಶದಲ್ಲೇ ನಿಮ್ಮ ದೇಶವನ್ನೇ ಕಟ್ಟುವ ಕೆಲಸವನ್ನು ಮಾಡುತ್ತಿದ್ದಿರಿ. ಆದರೂ ನೀವು ಯಾವಾಗ ಹಿಂದಿರುಗಿ ಬಂದರೂನಿಮಗೆ ಸ್ವಾಗತವಿದೆ ಈಗ ನಿಮ್ಮೊರಿನಲ್ಲಿಯೂ ಎಲ್ಲ ಅವಕಾಶ ಅನುಕೂಲಗಳಿವೆ ಎಂದು ಕರೆಗೊಟ್ಟರು.
ಗಣೇಶ್ ಕಾರ್ಣಿಕ್ ರವರು ದೂರದೂರಿನಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡಿಗರು ತಮ್ಮ ಊರಿನ ನೆನಪನ್ನು ಹಸಿರಾಗಿಡುತ್ತಾರೆ, ತಮ್ಮ ಒಂಟಿತನದ ತಮ್ಮವರಿಂದ ದೂರವಿದ್ದು ಅನ್ಯರೊಟ್ಟಿಗಿರುವ ಐಡೆಂಟಿಟಿ ಕ್ರೈಸಿಸನ್ನು ಹತ್ತಿಕ್ಕಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದರು. ಇದೀಗ ಭಾರತ ಸರ್ಕಾರವು ಮಾನವ ಸಂಪನ್ಮೂಲಗಳಿಗೆ ಇಮ್ಮಿಗ್ರೇಶನ್ ಬಗ್ಗೆ ಸೂಕ್ತ ತರಬೇತಿ ಕೊಟ್ಟು ವಿದೇಶಕ್ಕೆ ಕಳಿಸುವ ವಾಗದಾನ ಮಾಡುವ ನಕಲಿ ಏಜೆಂಟರ ಕೈಗೆ ಸಿಕ್ಕಿಬೀಳದಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸೆಕ್ಟರ್ ಸ್ಪೆಸಿಫಿಕ್ ಇನ್ವೆಸ್ಟಮೆಂಟ್ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರು.
ಸನ್ಮಾನಿತ ಅತಿಥಿ ಜನಾಬ್ ಜಫ್ರುಲ್ಲ ಖಾನ್ ಮಾತಾಡಿ ಈ ಸಮ್ಮೇಳನ ಎಲ್ಲಾ ಸಮುದಾಯ ಮತ್ತು ಬಾಗದ ಕನ್ನಡಿಗರನ್ನು ಒಟ್ಟುಗೂಡಿಸಲು ಶಕ್ತವಾಗಿದೆ ಹಾಗೆಯೇ ಈ ಸಂಘಟನೆಗೆ ತಮ್ಮ ಎಲ್ಲಾ ಸಹಕಾರವಿದೆ ಎಂದು ಘೋಷಿಸಿದರು.ತದನಂತರ ದುಬಾಯಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸಮ್ಮಾನಿಸಲಾಯಿತು. ಜಾಫರುಲ್ಲಾ ಖಾನ್, ಸರ್ವೋತ್ತಮ ಶೆಟ್ಟಿ, ಶೇಖರ್ ಶೆಟ್ಟಿ ಕಳತ್ತೂರು, ಅಶೋಕ್ ಶೆಟ್ಟೀ, ಬಿ.ಜೆ. ಸೋಮಯಾಜಿ, ಜೇಮ್ಸ್ ಮೆಂಡೋನ್ಸ, ಉದಯ್ ಕುಮಾರ್ ಕಟೀಲ್ ಮೊದಲಾದ ಗಣ್ಯವ್ಯಕ್ತಿಗಳು ಸಮ್ಮಾನಿತರಾದರು.
ಸಾಹಿತ್ಯ ಗೋಷ್ಟಿ, ಮಾಧ್ಯಮ ಗೋಷ್ಠಿ, ಕವಿಗೋಷ್ಠಿ ಮತ್ತು ಅನಿವಾಸಿ ಗೋಷ್ಠಿಗಳಿದ್ದವು. ಆದರೆ ಸಮಯಾಭಾವದಿಂದಾಗಿ ಅನಿವಾಸಿ ಗೋಷ್ಠಿಯನ್ನು ರದ್ದುಪಡಿಸಲಾಯಿತು. ಸಾಹಿತ್ಯ ಗೋಷ್ಠಿಯು ಜಯಂತ್ ಕಾಯ್ಕಿಣಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಾಧ್ಯಮ ಗೋಷ್ಠಿಯು ವಿಜಯಕರ್ನಾಟಕ ದೈನಿಕ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಇವರ ಅಧ್ಯಕ್ಷತೆಯಲ್ಲಿ ಬಹಳ ವಿನೋದವಾಗಿ ಮೂಡಿ ಬಂತು. ಜರಗನ ಹಳ್ಳಿ ಶಿವಶಂಕರ್ ಇವರ ಸ್ವಾರಸ್ಯಕರವಾದ ಅಧ್ಯಕ್ಷೀಯ ಭಾಷಣದೊಂದಿಗೆ ಕವಿ ಗೋಷ್ಟಿಯು ಚೊಕ್ಕದಾಗಿ ಮೂಡಿಬಂತು.
ಆರಂಭವೇ ವಿಳಂಬಗೊಂಡದ್ದರಿಂದ ಕಾರ್ಯಕ್ರಮಗಳು ನಿಗದಿ ಪಡಿಸಿದ ಸಮಯಕ್ಕಿಂತ ಕೊಂಚ ಹಿಂದೆಯಿತ್ತು ಎನ್ನುವುದನ್ನು ಬಿಟ್ಟರೆ ಬಾಕಿ ವಿವಿಧ ಕನ್ನಡ ಸಂಸ್ಠೆಗಳಿಂದ ಪ್ರಸ್ತುತಪಡಿಸಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯಿತು. ಪ್ರತಿಯೊಂದು ನೃತ್ಯವೂ ರೂಪಕವೂ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ತಾಯ್ನಾಡಿನಿಂದಾಗಮಿಸಿದ ಜಯಂತ್ ಕಾಯ್ಕಿಣಿ, ಚಿತ್ರ ನಟಿ ತಾರ, ವಿಜಯಕರ್ನಾಟಕ ದೈನಿಕ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್, ಕೋಟೆ ಶೈಲಿಯ ಖ್ಯಾತಿಯ ಶಶಿಧರ್ ಕೋಟೆ ಇವರಿಗೆ ಬೆಳ್ಳಿಹಬ್ಬದ ಪ್ರಶಸ್ತಿಯೊಂದಿಗೆ ಪುರಸ್ಕರಿಸಲಾಯಿತು.
ಎಲ್ಲಾ ಗಣ್ಯವ್ಯಕ್ತಿಗಳಿಗೆ ಸ್ಮರಣಿಕೆ ನೀಡಿದ ಬಳಿಕ ಸಮಾರೋಪ ಸಮಾರಂಭದ ಅಧ್ಯಕ್ಷರಾದ ಮನು ಬಳಿಗಾರ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ತರುವಾಯ ಸರ್ವ ಸಮ್ಮೇಳನಧ್ಯಕ್ಷ ಚೆನ್ನವೀರ ಕಣವಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಧ್ವನಿ ಪ್ರತಿಶ್ಠಾನವನ್ನೂ ಅದರ ಕಾರ್ಯ್ಕ್ಷಮತೆಯನ್ನೊ ಹೊಗಳಿ ತಮ್ಮ ಮೆಚ್ಚುಗೆಯನ್ನು ಮುಚ್ಚು ಮರೆಯಿಲ್ಲದೆ ಪ್ರಸ್ತುತ ಪಡಿಸಿದರು.
ಕೃಪೆ: ಗಲ್ಫ್ ಕನ್ನಡಿಗ

Advertisement

0 comments:

Post a Comment

 
Top