PLEASE LOGIN TO KANNADANET.COM FOR REGULAR NEWS-UPDATES


ದಿನಾಂಕ : ೨೩-೪-೨೦೧೦ ಸಾಯಂಕಾಲ ೪.೩೦ ಗಂಟೆಗೆ ಕೊಪ್ಪಳ ನಗರದ ದಿಡ್ಡಿಕೇರಿ ಓಣೀಯಲ್ಲಿ ಆಹಾರ ಹಕ್ಕು ರಕ್ಷಣೆ ಹೋರಾಟ ವೇದಿಕೆ ಹಾಗೂ ಖ್ವಾಜಾ ಗರೀಬ್ ನವಾಜ್ ಸಮಾಜ ಸೇವಾ ಯುವಕ ಸಂಘ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಜಾನುವಾರು ಹತ್ಯೆ ನಿಷೇದ ಹಾಗೂ ಸಂರಕ್ಷಣೆ ಕಾಯ್ದೆ ವಿರೋಧಿಸಿ ಪತ್ರ ಚಳುವಳಿಯ ಕಾರ್‍ಯಕ್ರಮ ನಡೆತು.

ರಾಜ್ಯ ಬಿಜೆಪಿ ಸರಕಾರವು ಜಾರಿ ತರಲು ಉದ್ಧೇಶಿಸಿರುವ ಈ ಕಾಯ್ದೆಯು ನಮ್ಮ ಆಹಾರದ ಹಕ್ಕನ್ನು ಕಿತ್ತುಕೊಳ್ಳುತ್ತಿದೆ ಈ ಜನ ವಿರೋಧಿ ಕಾನೂನಿನ ವಿರುದ್ದ ಎಲ್ಲರೂ ಒಟ್ಟಾಗಿ ಹೋರಾಟ ಮಾಡುವ ಅನಿವಾರ್‍ಯತೆ ಇದೆ, ಬಡಜನರು ತಮ್ಮ ತಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಆಹಾರ ಪದ್ದತಿಯನ್ನು ರೂಡಿಸಿಕೊಂಡಿದ್ದಾರೆ. ಆದರೆ ಸರಿ ಆಹಾರವನ್ನು ಕಿತ್ತುಕೊಳ್ಳುವ ಈ ಕ್ರೂರ ಕಾಯ್ದೆಯು ಜನವಿರೋಧಿಯಾಗಿದ್ದು ಇದರ ವಿರುದ್ದ ತೀವ್ರವಾದ ಹೋರಾಟವನ್ನು ಮಾಡಬೇಕಾಗಿದೆ ಎಂದು ಕಾರ್‍ಯಕ್ರಮವನ್ನು ಉದ್ಘಾಟಿಇ ಬಸವರಾಜ ಶೀಲವಂತರ ಮಾತನಾಡಿದರು.

ಅತಿಥಿಗಳಾಗಿದ್ದ ರಾಜಾಬಕ್ಷಿ ಎಚ್.ವಿ.ಯವರು ಮಾತನಾಡುತಾ ಈ ಜನ"ರೋಧಿ ಕಾನೂನನ್ನು ರಾಜ್ಯ ಸರಕಾರವು ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದವರ ಶೋಷಣೆಗೆ ಮಾಡಿರುವ ಕಾನೂನಿನಂತಿದ್ದು ಇದರಿಂದ ಈ ವರ್‍ಗಗಗಳು ಆತಂಕದಲ್ಲಿ ಜೀವಿಸುವಂತಾಗುತ್ತದೆ. ಈ ಕಾನೂನಿನ ವಿರುದ್ದ ಎಲ್ಲರೂ ಸಂಘಟಿತರಾಗುವ ಅವಶ್ಯಕತೆ ಇದ್ದು ಇದಕ್ಕೆ ಸಂಬಂಧಪಟ್ಟ ಯಾವುದೇ ಚಳುವಳಿಗಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ದಲಿತ ಮುಖಂಡರಾದ ಹೇಮರಾಜ ವೀರಾಪೂರವರು ಮಾತನಾಡುತ್ತ ಈ ಕಾನೂನು ಸಂವಿದಾನದತ್ತವಾದ ಆಹಾರ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಹಾಗು ಸಮಾಜದಲ್ಲಿ ಒಡಕನ್ನುಂಟು ಮಾಡುತ್ತದೆ. ಈ ಕಾನೂನು ಕೋಮು ಗಲಭೆಗಳಿಗೆ ಕುಮ್ಮಕ್ಕು ನೀಡುವ ಕಾನೂನು ಆಗಿರುತ್ತದೆ. ಒಂದು ವೇಳೆ ಈ ಕಾನೂನು ಜಾರಿ ಮಾಡಲು ಸರಕಾರವು ಮುಂದಾದದಲ್ಲಿ ನಮ್ಮ ಆಹಾರದ ಹಕ್ಕನ್ನು ಪಡೆಯಲು ನಾವು ಒಗ್ಗಟ್ಟಾಗಿ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಸರಕಾರವನ್ನು ಎಚ್ಚರಿಸಿದರು.

ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಠ್ಠಪ್ಪ ಗೋರಂಟ್ಲಿಯವರು ಮಾತನಾಡುತ್ತ ಮಾಂಸಹಾರಿಗಳಿಗೆ ಈ ಕಾನೂನಿನ ಬಗ್ಗೆ ಅರಿವಿಲ್ಲ. ಎಲ್ಲ ಜಾತಿ ಜನಾಂಗಗಳಲ್ಲಿಯೂ ಮಾಂಸಹಾರಿಗಳಿದ್ದಾರೆ. ಮಾಂಸಾಹಾರವನ್ನು ಮಾಡುವುದು ಅವರವರ ಇಚ್ಛೆಗೆ ಬಿಟ್ಟ ವಿಷಯವಾಗಿದೆ. ಕೆಳ ಮತ್ತು ಮಧ್ಯಮ ವರ್ಗದವರ ಪ್ಠೌಕ ಆಹಾರವಾದ ಗೋಮಾಂಸವನ್ನು ಅವರಿಂದ ಕಿತ್ತುಕೊಳ್ಳುತ್ತಿರುವ ಸರಕಾರದ ಧೋರಣೆಯು ತಪ್ಪು. ಸರಕಾರ ಕೂಡಲೇ ಈ ಬಗ್ಗೆ ಯೋಚಿಸುವ ಅಗತ್ಯವಿದೆ. ಮಾಂಸ ಸೇವನೆ ಇಂದು ನಿನ್ನೆಯದಲ್ಲ. ಶತ ಶತಮಾನಗಳಿಂದ ನಡೆದುಕೊಂಡು ಬಂದಿರುವಂಥದ್ದು. ಮಾಂಸ ಸೇವನೆಯನ್ನು ಯಾವ ಧರ್ಮವೂ ವಿರೋಧಿಸುವುದಿಲ್ಲ. ಮಾಂಸ ಸತ್ವಯುತ, ಶಕ್ತಿಯುತ ಆಹಾರವಾಗಿರುವುದರಿಂದ ಸಾಮಾನ್ಯವಾಗಿ ಎಲ್ಲರೂ ಮಾಂಸ ಸೇವನೆಯನ್ನು ಮಾಡುತ್ತಾರೆ. ಹೀಗಾಗಿ ಆಹಾರ ಸೇವನೆ ಹಕ್ಕಿನ ಮೇಲೆ ನಿರ್ಬಂದಿಸುವುದು ಹಕ್ಕಿನ ಮೇಲೆ ನಡೆಯುವ ದೌರ್ಜನ್ಯ ಮತ್ತು ದಬ್ಬಾಳಿಕೆಯಾಗುತ್ತದೆ. ಮನುಷ್ಯರನ್ನು ಆಹಾರ ಸೇವನೆಯ ಮೇಲೆ ಅಳೆಯಬಾರದರು. ಪ್ರಾಣಿ ಹಿಂಸೆ ಮಾಡದವವರು ಕದ್ದು ಮುಚ್ಚಿ ಮಾಂಸಹಾರ ಸೇವನೆಯನ್ನು ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ವಿಚಾರ ಗೊತ್ತಿದ್ದೂ ಸರಕಾರ ಓಟಬ್ಯಾಂಕ್ "ನ್ನೆಲೆಯಲ್ಲಿ ಮುಸ್ಲಿಂ ಸಮುದಾಯ ಮತ್ತು ದಲಿತ ಸಮುದಾಯವನ್ನು ಗುರುಯಾಗಿಟ್ಟುಕೊಂಡು ಆಹಾರ ಹಕ್ಕಿನ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಖಂಡನೀಯರ. ಕಾರಣ ಜನತೆ ಸುಮ್ಮನೆ ಇರದೇ ಸರಕಾರದ ದಬ್ಬಾಳಿಕೆಯ "ರುದ್ದ ಧ್ವನಿ ಎತ್ತಬೇಕಾದ ಅನಿವಾರ್‍ಯತೆ ಬಂದೊದಗಿದೆ ಎಂದರು.

ಪ್ರಾಸ್ತಾ"ಕವಾಗಿ ಸೈಯದ್ ಗೌಸ್ ಪಾಷಾರವರು ಮಾತನಾಡಿದರು. ಕಾರ್‍ಯಕ್ರಮದಲ್ಲಿ ಹಜ್ರತ್ ಖ್ವಾಜಾ ಗರೀರ್ಭ ನವಿವಾಜ್ ಸಮಾಜ ಸೇವಾ ಯುವಕ ಸಂಘದ ಖಾಜಾವಲಿ ಗುಡಿಗೇರಿ, ಅನ್ನು ಗಾದಿಗನೂರ, ಗೌಸ್ ಪಾಷಾ ಹಾಗೂ ಇತರ ಎಲ್ಲಾ ಪದಾಧಿಕಾರಿಗಳು , ಹುಸೇನ ಪಾಷಾ, ಸಿರಾಜ್ ಬಿಸರಳ್ಳಿ, ಖುರೇ ಸಮಾಜದ ಹಿರಿಯರಾದ ಮಹ್ಮದ ಗೌಸ ಬೇಪಾರಿ, ಓಣಿಯ "ರಿಯರಾದ ಮಕ್ಬೂಲ್ ಸಾಬ್ ಮನಿಯಾರ್, ನಜೀರ್ ಅಹ್ಮದ್ ನಿಶಾನಿ, ಜಾರತ್ ಅಲಿ, ಜಲೀಲ್ ಸಾಬ್ ದಾಗದಾರ್, ಜಾಫರಸಾವ ಬೇಪಾರಿ, ಎಸ್.ನೂರುಲ್ಲ ಖಾದ್ರಿ ಮುಂತಾದವರು ಉಪಸ್ಥಿತರಿದ್ದರು.

ಬಸವರಾಜ ಶೀಲವಂತರ

ಆಹಾರ ಹಕ್ಕು ರಕ್ಷಣಾ ಹೋರಾಟ ವೇದಿಕೆ ಕೊಪ್ಪಳ

Advertisement

0 comments:

Post a Comment

 
Top