PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಎ. ೩. ಕಜಾಪ ಮೂಲಕ ಕೊಪ್ಪಳ ಜಿಲ್ಲೆಯ ಜನಪದ ಕಲೆಗಳ ಮತ್ತು ಕಲಾವಿದರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ ಮಾಡಲಾಗುವದು ಎಂದು ಕೊಪ್ಪಳ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಹೇಳಿದರು. ಅವರಿಂದು ನಗರದ ಪ್ರವಾಸಿ ಮಂದಿರದಲ್ಲಿ ಜರುಗಿದ ಕಜಾಪ ಪ್ರಥಮ ಸಭೆಯ ಅಧ್ಯಕ್ಷತೆವಹಿಸಿ ಈ ವಿಷಯ ತಿಳಿಸಿದರು, ಜಿಲ್ಲಾ ಘಟಕದ ರಚನೆ ಮಾಡಿ, ಜಿಲ್ಲೆಯ ಜಾನಪದ ಕಲೆಗಳ ದಾಖಲೀಕರಣ, ಕ್ಷೇತ್ರಕಾರ್ಯ, ತರಬೇತಿ, ಸ್ಪರ್ಧೆಗಳ ಮೂಲಕ ಜಾನಪದ ಕಲೆಗಳ ಸಂರಕ್ಷಣೆ ಮಾಡುವ ಕಾರ್ಯವನ್ನು ಕಜಾಪ ಮಾಡಲಿದೆ. ಜಿಲ್ಲೆ, ತಾಲೂಕ, ಹೋಬಳಿ ಮಟ್ಟದ ಘಟಕಗಳನ್ನು ರಚಿಸಿ ಸಂಘಟನೆ ಮಾಡಬೇಕಿದೆ, ಸಂಘಟನೆಯ ಜೊತೆ ಜೊತೆಗೆ  ಕೊಪ್ಪಳ ಜಿಲ್ಲೆಯ ಕಲಾವಿದರ ಪರಿಚಯ ಕೃತಿ ಮತ್ತು ಕಲೆಗಳ ಪುಸ್ತಕಗಳನ್ನು ಪ್ರಕಟಿಸುವದು, ಆಡಿಯೋ ಮತ್ತು ವಿಡಿಯೋ ದಾಖಲೀಕರಣ ಮಾಡುವದು, ೫೦ ದಾನಿಗಳಿಂದ ದತ್ತಿಗಳನ್ನು ಆರಂಭಿಸುವದು, ೩ ಜಿಲ್ಲಾ ೧೨ ತಾಲೂಕ ಸಮ್ಮೇಳನಗಳನ್ನು ಹಾಗೂ ಎಲ್ಲಾ ಹೋಬಳಿಯಲ್ಲಿ ಹೋಬಳಿ ಮಟ್ಟದ ಜನಪದ ಸಮ್ಮೇಳನ ಮಾಡುವದು. ಅದಕ್ಕಾಗಿ ಎಲ್ಲಾ ಹೋಬಳಿ ಘಟಕಗಳನ್ನು ರಚಿಸುವದು. ಪ್ರತಿ ಶಾಲೆ, ಕಾಲೇಜು, ಹಾಸ್ಟೆಲ್‌ಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಸ್ಪರ್ಧೆಗಳನ್ನು, ಉಪನ್ಯಾಸಗಳನ್ನು ಹಮ್ಮಿಕೊಳ್ಳುವದು. ಬರಹಗಾರರಿಗೆ ಜನಪದ ಕಾವ್ಯ ಕಮ್ಮಟ, ಕಥಾ ಕಮ್ಮಟ, ಸಂಶೋಧನಾ ಕಮ್ಮಟ, ಜನಪದ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮಾಡುವದು ಸೇರಿದಂತೆ ಜನಪದಕ್ಕೆ  ಪ್ರಾಮಾಣಿಕವಾಗಿ ಮತ್ತು ನಿಜವಾದ ಸೇವೆ ಮಾಡಿದವರಿಗೆ ರಾಜ್ಯಮಟ್ಟದ ಸಮ್ಮೇಳನ ಸೇರಿದಂತೆ ವಿವಿಧ ಇಲಾಖೆ ಮತ್ತು ಸರಕಾರದಿಂದ ಸಿಗಬೇಕಾದ ಪ್ರಶಸ್ತಿ, ಸನ್ಮಾನ, ಭಾಗವಹಿಸುವಿಕೆ ಸೇರಿದಂತೆ ಎಲ್ಲೆಡೆಯೂ ಅವಕಾಶಗಳನ್ನು ಕೊಡಿಸುವದನ್ನು ಮಾಡಲಾಗುದು ಹಾಗೂ ಎಲ್ಲಾ ಶರಣ-ಶರಣೆಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸುವದು, ಅವರನ್ನು ಸ್ಮರಿಸಿ ಸಮಾಜವನ್ನು ಪೂರ್ಣತೆಯೆಡೆಗೆ ಕೊಂಡೊಯ್ಯುವ ಮಹತ್ವದ ಕೆಲಸ ಕಜಾಪ ದಿಂದ ಮಾಡಲಾಗುವದು ಎಂದರು. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ೧೦ ಮಹಿಳಾ ಹಾಗೂ ೧೦ ಪುರುಷರ ಜನಪದ ತಂಡಗಳನ್ನು ಕಟ್ಟಿ ಅವರಿಗೆ ತರಬೇತಿ ನೀಡಿ, ಆರ್ಥಿಕವಾಗಿ ಬೆಳೆಯಲು ವಿವಿಧ ಇಲಾಖೆಗಳ ಸಹಾಯ ಸಹಕಾರ ದೊರಕುವಂತೆ ಮಾಡಲಾಗುದು ಜನಪದ ಕಲೆಯಲ್ಲಿ ಆಸಕ್ತರು ಮಂಜುನಾಥ ಜಿ. ಗೊಂಡಬಾಳ (ಮೊ ೯೪೪೮೩೦೦೦೭೦) ರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.  ಇದೇ ವೇಳೆ ಚಿಂತಕ ವಿಜಯ ಅಮೃತ್‌ರಾಜ್ ಮಾತನಾಡಿ, ಜನಪದಕ್ಕೆ ಸಂಬಂಧಿಸಿದ ಸಿನೆಮಾ ಮತ್ತು ಸಾಕ್ಷ್ಯ ಚಿತ್ರಗಳನ್ನು ಬಳಸಿಕೊಂಡು ಜನರನ್ನು ತಲುಪುವದು, ಜನಪದ ಉಟೋಪಚಾರದ ಕಾರ್ಯಕ್ರಮ ಮಾಡುವದು, ಜಾನಪದ ಕ್ರೀಡಾ ಕೂಟವನ್ನು ಮಾಡುವದು ಹಾಗೂ ದೇಸಿ ಜನಪದ ಸೊಗಡಿನ ಉಡುಗೆ ತೊಡುಗೆಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮಾಡುವದು ಸೇರಿದಂತೆ ಜನಪದರ ಇರುವಿಕೆಯ ಬಗ್ಗೆ ಜನಜಾಗೃತಿ ಮಾಡುವ ನಿಟ್ಟಿನ ಎಲ್ಲಾ ಸಲಹೆಗಳನ್ನು ಸಭೆ ಅಂಗೀಕರಿಸಿ, ಅವುಗಳನ್ನು ಜಾರಿಗೊಳಿಸಲು ಶೀಘ್ರ ಕಾರ್ಯಮಾಡಲಾಗುವದು ಎಂದು ಅಧ್ಯಕ್ಷರು ಸಭೆಯ ಪರವಾಗಿ ತಿಳಿಸಿದರು. ವಕೀಲರಾದ ವಿಜಯ ಅಮೃತ್‌ರಾಜ್, ಪತ್ರಕರ್ತ ನಿಂಗಪ್ಪ ದೊಡ್ಡಮನಿ, ಕನ್ನಡ ಸೇವಕ ಶಿವಾನಂದ ಹೊದ್ಲೂರ, ಮಹಾಂತೇಶ ಯಲಬುರ್ಗಾ, ರಾಮು ಪೂಜಾರ, ಹನುಮಂತಪ್ಪ ನಾಯಕ, ಪರಶುರಾಮಪ್ರಿಯ ಗಂಗಾವತಿ, ನೀಲಪ್ಪ ಗುಳದಳ್ಳಿ, ಪ್ರಸನ್ನ ಇತರರು ಇದ್ದರು.

Advertisement

0 comments:

Post a Comment

 
Top