ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯ ಚನ್ನಬಸವೇಶ್ವ ಜಾತ್ರಾವಹೋತ್ಸವದಲ್ಲಿ ಬಾನಂಗಳದಲ್ಲಿ
ಮಿಂಚಿ ಅರಳಿದ ಹೂವುಗಳು, ಜಾತ್ರೆಯ ಅಂಗವಾಗಿ ಮಹಾರಥೋತ್ಸವದ ಮದ್ದು ಸುಡುವ ಕಾರ್ಯಕ್ರಮ
ವಿಜೃಂಭಣೆಯಿಂದ ನಡೆಯಿತು. ಬಾನಂಗಳದಲ್ಲಿ ಮುಗಿಲ ಮುಟ್ಟುವಂತೆ ಪಟಾಕಿಗಳು ಹೂವುಗಳಂತೆ
ಅರಳಿ ಆಕಾಶದ ತುಂಬೆಲ್ಲ ಹೂವು ಬಾಣಗಳನ್ನು ಚೆಲ್ಲುತ್ತಾ ಜಾತ್ರಾವಹೋತ್ಸವದಲ್ಲಿ
ನೆರದಿದ್ದ ಜನರ ನೋಡುಗರ ಕಣ್ಣನ್ನು ನಿಬ್ಬೆರಗಾಗಿಸಿದವು. ಮುಗಿಲೆತ್ತರಕ್ಕೆ ಪಟಾಕಿಗಳು
ಚಿಮ್ಮುತ್ತಾ, ಹೂವಾಗಿ ಅರಳಿ ಮತ್ತೆ ಧರೆಗಿಳಿಯುತ್ತಿರುವ ದೃಶ್ಯ ಅತ್ಯಂತ ಮನಮೋಹಕವಾಗಿ
ಗೋಚರವಾಗುತ್ತಿತ್ತು. ಜನರ ಸಿಳ್ಳೆ, ಕೇಕೇಗಳು ಪಟಾಕಿ ಸದ್ದುಗಳ ಮಧ್ಯೆ ಮುಗಿಲ
ಮುಟ್ಟುತ್ತಿರುವಂತೆ ಗೋಚರವಾಗುತ್ತಿತ್ತು.
Subscribe to:
Post Comments (Atom)
0 comments:
Post a Comment