PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-01- ಸರ್ ಸಿ.ವ್ಹಿ.ರಾಮನ್  ರವರ ರಾಮನ್ ಪರಿಣಾಮ ಆವಿಷ್ಕರಿಸಿದ ದಿನವಾದ .ಪೆ. ೨೮ ರಂದು ಸರಕಾರಿ ಪ್ರೌಢಶಾಲೆ ಗಿಣಗೇರಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.
    ವಿಜ್ಞಾನ ಪಠ್ಯ ವಿಷಯದ ವಿವಿದ ಚಿತ್ರಗಳನ್ನು ರಂಗೋಲಿ ಕಲೆಯಲ್ಲಿ ವರ್ಣ ಪ್ರದರ್ಶನ ಗೊಳಿಸಿದ್ದರು, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿವಿಧ ವಿಜ್ಞಾನ ಮಾದರಿಗಳು ನೊಡುಗರಲ್ಲಿ ವೈಜ್ಞಾನಿಕ ಮಾಹಿತಿ ಒದಗಿಸದವು. ಸೌರ ಸಾಧನಗಳು ರಾಕೇಟ್ ಉಡಾವಣೆ ಬೆಳಕಿನ ಪ್ರಯೋಗಗಳು, ಡೈನಮೊ ಮಾದರಿ ಮುಂತಾದವುಗಳು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಉತ್ತಮವಾಗಿ ಮೂಡಿಸಿದವು ವಿಜ್ಞಾನ ವಸ್ತು ಪ್ರದರ್ಶನಕ್ಕೆ ವಿಜ್ಞಾನ ಶಿಕ್ಷಕಿಯರಾದ ಅರುಣಾಕುಮಾರಿ, ಜಯಲಕ್ಷ್ಮಿ, ಅನ್ನಪೂರ್ಣ ಮಾರ್ಗದರ್ಶಕರಾಗಿದ್ದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾದ್ಯಾಯರಾದ ಮಹಾಂತೇಶ ಚನ್ನಿನಾಯ್ಕರ ಮಾತನಾಡುತ್ತಾ ವಿಜ್ಞಾನದಿಂದಾದ ಎಲ್ಲಾ ಸಾಮಗ್ರಿಗಳನ್ನು ಬಳಕೆ ಮಾಡುತ್ತಾರೆ. ಆದರೆ ವಿಜ್ಞಾನವನ್ನು ಬೇಗನೆ ಒಪ್ಪಿಕೊಳ್ಳುವುದಿಲ್ಲ. ಮೂಡ ನಂಬಿಕೆಗಳನ್ನು ಬಹು ಬೇಗನೆ ನಂಬುತ್ತಿರುವುದು ದುರಂತದ ಸಂಗತಿ ಆದ್ದರಿಂದ  ವಿಜ್ಞಾನ ಸಾವತ್ರೀಕರ್ಣಗೊಳ್ಳುವುದು ಅವಶ್ಯಕವಾಗಿದೆ. ಎಂದು ಮಾತನಾಡಿದರು.
    ಕಾರ್ಯಕ್ರಮದ ಉದ್ಘಾಟನೆಯನ್ನು ಎ.ಬಸವರಾಜ ಹಾಗೂ ಕಾಶಿಬಾಯಿ ಶಿಕ್ಷಕಿ ಇವರು ನೆರವೆರಿಸಿದರು ವಿಜ್ಞಾನ ದಿನಾಚರಣೆ ಕುರಿತು ಶಿಕ್ಷಕರಾದ ಮಲ್ಲಪ್ಪ ಹವಾಲ್ದಾರ್ ಹಾಗೂ ಸಿ.ಶರಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸ ಕಾರ್ಯಕ್ರಮದಲ್ಲಿ ಅನುಪಮ ದೇಸಾಯಿ ಲಲೀತಾ ಪೂಜಾರ, ಶರಣಬಸಪ್ಪ ಸಿಂದೋಗಿ, ರುಕ್ಷಾನಾ ಬೇಗ, ಗುಂಡಮ್ಮ ಪಾಟೀಲ, ಗೀತಾಂಜಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top