ಕೊಪ್ಪಳ ಫೆ. ೨೭
(ಕ ವಾ) ಕೊಪ್ಪಳ ತಾಲೂಕು ಹಿಟ್ನಾಳ ಗ್ರಾಮದ ಯುವತಿ ಮರ್ದಾನಬಿ (೨೨) ತಂದೆ
ರಾಜಾಸಾಬ ಆಡೂರ ಕಳೆದ ೨೦೧೫ ರ ಅಕ್ಟೋಬರ್ ೧೧ ರಿಂದ ನಾಪತ್ತೆಯಾಗಿದ್ದು, ಯುವತಿಯ
ಪತ್ತೆಗೆ ಸಹಕರಿಸುವಂತೆ ಮುನಿರಾಬಾದ್ ಪಿಎಸ್‌ಐ ಮನವಿ ಮಾಡಿದ್ದಾರೆ.
ಹಿಟ್ನಾಳ ಗ್ರಾಮದ ಪೀರಾಸಾಬ್ ಎಂಬುವವರು ತಮ್ಮ ತಂಗಿ ಮರ್ದಾನಬಿ ಕಳೆದ ೨೦೧೫ ರ ಅಕ್ಟೋಬರ್ ೧೧ ರಂದು ತಾನು ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೊಪ್ಪಳದ ಡಾ. ಕಲಾಲ ಅವರ ಆಸ್ಪತ್ರೆಗೆ ಕರ್ತವ್ಯಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವಳು, ಮನೆಗೆ ಹಿಂದಿರುಗದೆ, ಕಾಣೆಯಾಗಿರುತ್ತಾಳೆ ಎಂದು ಮುನಿರಾಬಾದ್‌ನ ಪೊಲೀಸ್ ಠಾಣೆಗೆ ದೂರು ದಾಖಲಿಸಿರುತ್ತಾರೆ. ಕಾಣೆಯಾಗಿರುವ ಯುವತಿಯ ಚಹರೆ ಗುರುತು ಇಂತಿದೆ. ಯುವತಿ ಹೆಸರು- ಮರ್ದಾನಬಿ, ವಯಸ್ಸು ೨೨, ಜಾತಿ-ಮುಸ್ಲಿಂ, ಎತ್ತರ- ಸುಮಾರು ೫ ಅಡಿ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾಳೆ, ಕಾಣೆಯಾಗಿದ್ದಾಗ ಗುಲಾಬಿ ಬಣ್ಣದ ಹೂವಿನ ಡಿಸೈನ್‌ವುಳ್ಳ ಚೂಡಿದಾರ ಧರಿಸಿರುತ್ತಾಳೆ. ಈ ಚಹರೆ ಗುರುತಿನ ಯುವತಿ ಕುರಿತು ಮಾಹಿತಿ ದೊರೆತಲ್ಲಿ, ಎಸ್‌ಪಿ, ಕೊಪ್ಪಳ-೦೮೫೩೯-೨೩೦೧೧೧, ಡಿವೈಎಸ್‌ಪಿ, ಕೊಪ್ಪಳ-೦೮೫೩೯-೨೨೨೪೩೩, ಸಿಪಿಐ ಕೊಪ್ಪಳ ಗ್ರಾಮೀಣ- ೦೮೫೩೯-೨೨೧೩೩೩ ಅಥವಾ ಪಿಎಸ್‌ಐ ಮುನಿರಾಬಾದ್- ೦೮೫೩೯-೨೭೦೩೩೩ ಕ್ಕೆ ಸಂಪರ್ಕಿಸಿ ನೀಡುವಂತೆ ತಿಳಿಸಿದೆ.

0 comments:
Post a Comment