ಕೊಪ್ಪಳ ಫೆ. ೨೯ ಕೊಪ್ಪಳದ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ನಗರದ ಜಿ.ಜಿ.ಎಂ.ಎಸ್. ಶಾಲೆ ಬಳಿಯ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ೫೨ ನೇ ದಿಂಡಿ ಮಹೋತ್ಸವ ಮಾ. ೦೨ ರಿಂದ ಮಾ. ೦೬ ರವರೆಗೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ. ದಿಂಡಿ ಮಹೋತ್ಸವದ ಅಂಗವಾಗಿ, ಮಾ. ೦೨ ರಂದು ಬೆಳಿಗ್ಗೆ ಕಾಕಡಾರತಿ ಭಜನೆ, ನಂತರ ಪೋಥಿ ಸ್ಥಾಪನೆ ಹಾಗೂ ಗುಲಾಲ ಕಾರ್ಯಕ್ರಮ, ಪೋಥಿ, ಕುಂಭ ಮತ್ತು ಭಜನೆಯೊಂದಿಗೆ ಮೂರ್ತಿಗಳ ಮೆರವಣಿಗೆ, ನಾಮ ಸಂಕೀರ್ತನೆ. ಮಾ. ೦೩ ರಂದು ಪ್ರವಚನ ಮಾ. ೦೪ ರಂದು ನಾಮಸಂಕೀರ್ತನೆ ಅಲ್ಲದೆ ಭಾವಸಾರ ಕ್ಷೇತ್ರೀಯ ಮಹಿಳಾ ಮಂಡಳಿ ಪ್ರಥಮ ವಾರ್ಷಿಕೋತ್ಸವ. ಮಾ. ೦೫ ರಂದು ದಿಂಡಿ ಸೊಹಳಾ ಭವ್ಯ ಭಜನೆಯೊಂದಿಗೆ ನಗರ ಪ್ರದಕ್ಷಿಣೆ. ಮಾ. ೦೬ ರಂದು ಸಂತ ಸಮಾರಾಧನೆ, ಹಾಗೂ ಗಣೇಶ, ಮಾರುತಿ, ನವಗ್ರಹಗಳು, ಸಂತ ಜ್ಞಾನದೇವ ಹಾಗೂ ಸಂತ ತುಕಾರಾಮ ಮಹಾರಾಜರ ಮೂರ್ತಿಗಳ ಪ್ರಾಣ ಸ್ಥಾಪನೆ ನೆರವೇರಲಿದೆ. ದಿಂಡಿ ಮಹೋತ್ಸವದ ಸಂದರ್ಭದಲ್ಲಿ ಪ್ರತಿ ದಿನ ಕಾಕಾಡರತಿ ಭಜನೆ, ಪ್ರವಚನ, ಕೀರ್ತನ, ನಾಮ ಸಂಕೀರ್ತನೆಗಳು ಜರುಗಲಿವೆ. ಈ ದಿಂಡಿ ಮಹೋತ್ಸವಕ್ಕೆ ಇಷ್ಟ-ಮಿತ್ರ ಪರಿವಾರದೊಂದಿಗೆ ತಾಳ ಮೃದಂಗ ಸಹಿತ ಭಜನಾ ಮಂಡಳಿ ಸಮೇತ ಆಗಮಿಸಿ, ಪಾಂಡುರಂಗ ದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕು ಎಂದು ಭಾವಸಾರ ಕ್ಷತ್ರೀಯ ದೈವ ಮಂಡಳಿ ಮನವಿ ಮಾಡಿದೆ.
Subscribe to:
Post Comments (Atom)
0 comments:
Post a Comment