ಕೊಪ್ಪಳ, ೦೧- ಶಿಕ್ಷಣ ಸಮಾಜದ ಕಟ್ಟಕಡೆಯ ಮಗುವಿಗು ಸಿಕ್ಕಾಗ ಮಾತ್ರ ಸಮಾಜಕ್ಕೂ ಹಾಗೂ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಸೇವೆ ಸಾರ್ಥಕವಾಗುತ್ತದೆ ಎಂದು ಗಿಣಗೇರಿ ಗ್ರಾಮದ ಮುಖಂಡ ಹಾಗೂ ಸಮಾಜ ಸೇವಕ ಸುಬ್ಬಣಾಚಾರ್ಯ ವಿದ್ಯಾನಗರ ಹೇಳಿದರು. ಅವರು ಕೊಪ್ಪಳ ತಾಲೂಕಿನ ಗಿಣಗೇರಾ ಗ್ರಾಮದ ಶ್ರೀಗವಿಶ್ರೀ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸೇವಾ ಸಂಸ್ಥೆಯ ಬೇಂದ್ರೆ ಪಬ್ಲಿಕ್ ಸ್ಕೂಲಿನ ನಾಲ್ಕನೆ ವಾರ್ಷಿಕೀತ್ಸವ ಹಾಗೂ ವರ ಕವಿ ದ.ರಾ.ಬೇಂದ್ರೆ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ಕೊಡುವುದು ಸರ್ಕಾರವಲ್ಲದೇ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ಶಿಕ್ಷಣದಿಂದ ಒಬ್ಬ ವಿದ್ಯಾರ್ಥಿ ವಂಚಿತವಾದರೆ ನಾವು ಒಂದು ಶತಮಾನದ ಹಿಂದೆ ಉಳಿದಂತೆ ಪ್ರತಿಯೊಬ್ಬರು ಜವಾಬ್ದಾರಿಯಿಂದ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಂಗ್ರೇಸ್ ಮುಖಂಡ ಗೊಳಪ್ಪ ಹಲಗೇರಿ ಮಾತನಾಡಿ ಶಿಕ್ಷಣ ಕೊಡಿಸುವುದು ಪಾಲಕರ ಕರ್ತವ್ಯ ಮಕ್ಕಳ ಹಾಗೂ ಪಾಲಕರ ಏಳಿಗೆ ಶಿಕ್ಷಣದಲ್ಲಿ ಅಡಗಿದೆ ಎಂದರು.ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಸಂತೋಷ ದೇಶಪಾಂಡೆ ಪಾಲಕರು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಶಿಕ್ಷಣ ನೀಡಿ ಪ್ರೋತ್ಸಾಹಿಸಿ ಮಕ್ಕಳನ್ನು ನಿಂದಿಸಬೇಡಿ ಎಂದರು.ದೇಶದ
ಕ್ರೀಕೆಟ ತಂಡದ ನಾಯಕ ಮಹೇಂದ್ರ ಸಿಂಗ್‌ದೊನಿ ಪಡೆ ಹುಡುಗ ಇಂದು ವಿಶ್ವ ಶ್ರೀಮಂತರ
ಪಟ್ಟಿಯಲ್ಲಿ ಹೆಸರು ಪಡೆದ ವ್ಯಕ್ತಿ, ಮಗುವಿನ ಆಸಕ್ತಿಗೆ ಅನುಗುಣವಾಗಿ ಪ್ರತಿಭೆಗೆ
ಪ್ರೋತ್ಸಾಹಿಸಿ ವಿಶ್ವಮಟ್ಟದಲ್ಲಿ ನಿಮ್ಮ ಮಗು ಹೆಸರು ಮಾಡುವಂತೆ ಮಾಡಿ ಎಂದು ಕರೆ
ನೀಡಿದರು.ಸನ್ಮಾನ: ಈ ಸಂದರ್ಭದಲ್ಲಿ ಪರ್ತಕತ್ರ ಮಾಧ್ಯಮ ಸಿರಿ ಪ್ರಶಸ್ತಿ ಪುರಸ್ಕೃತ
ಸೋಮರೆಡ್ಡಿ ಅಳವಂಡಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯ ಮೇಲೆ
ಗ್ರಾ.ಪಂ.ಸದಸ್ಯರಾದ ಪಾಂಡುರಂಗ ಹಲಗೇರಿ ಮಲ್ಲಿಕಾರ್ಜುನ ಸೇರಿದಂತೆ ಎಲ್ಲಾ ಸದಸ್ಯರು
ಗ್ರಾಮದ ಮುಖಂಡರಾದ ಅಂಮರೇಶ, ಮಹೇಶ ಚವ್ಹಾಣ, ರಾಜಶೇಖರ ಅಂಗಡಿ, ಡಾ.ಸಿ ಎಸ್,ಕರಮುಡಿ
ಇತರರು ಉಪಸ್ಥಿತರಿದ್ದರು.ಶಿಕ್ಷಕಿ ಶಾರದಾ ಕೊರಗಲ ನಿರೂಪಿಸಿದರು. ಮುಖ್ಯೋಪಾಧ್ಯಾಯ
ಬಸವರಾಜ ಶಿರಗುಂಪಿ ಪ್ರಾಸ್ಥಾವಿಕವಾಗಿ ಮಾತನಾಡಿದರು, ಮಂಜುನಾಥ ಎಲ್ಲರನ್ನು
ಸ್ವಾಗತಿಸಿದರು. ರಮೇಶ ತುಪ್ಪದ ವಂದಿಸಿದರು.
Home
»
Koppal News
»
koppal organisations
» ಶಿಕ್ಷಣ ಸಮಾಜದ ಕಟ್ಟಕಡೆಯ ಮಗುವಿಗು ಸಿಕ್ಕಾಗ ಮಾತ್ರ ಶಿಕ್ಷಣ ಸಂಸ್ಥೆಗಳ ಸೇವೆ ಸಾರ್ಥಕವಾಗುತ್ತದೆ-ಸುಬ್ಬಣಾಚಾರ್ಯ.
Subscribe to:
Post Comments (Atom)
0 comments:
Post a Comment