PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-01- ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ತ ವತಿಯಿಂದ ಕೊಪ್ಪಳ ನಗರದಲ್ಲಿ ಹೆಲ್ಮೇಟ್ ಕಡ್ಡಾಯ ಜನಜಾಗೃತಿ ಅಭಿಯಾನವನ್ನು ನಗರದ ಮಹಿಳಾ ಕಾಲೇಜಿನಿಂದ ಆರಂಭಗೊಂಡು ಅಶೋಕ ವೃತ್ತದಲ್ಲಿ ಮಾನ್ಯ ಸಂಸದರಾದ ಸಂಗಣ್ಣ ಕರಡಿಯವರು ಈ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಮಾನ್ಯ ಸಂಸದರು ವಿದ್ಯಾರ್ಥಿನಿಗೆ ಹೆಲ್ಮೇಟ್ ಹಾಕುವ ಮೂಲಕ ಚಾಲನೆಯನ್ನು ನೀಡಿದರು. ಆ ನಂತರ ಕೊಪ್ಪಳ ಪ್ರಮುಖ ಬಿಧಿಗಳಲ್ಲಿ ಜಾಗೃತಿ ಅಭಿಯಾನವನ್ನು ಘೋಷಣೆಯಗಳ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಯಿತು. ಆನಂತರ ಬಸ ನಿಲ್ದಾಣದ ಮುಂದೆ ಮಾನ್ಯ ನಗರದ ಸಿ.ಪಿ.ಐ ಸತೀಶ ಪಾಟೀಲ ಆಗಮಿಸಿ ಬೈಕನಲ್ಲಿ ಹೋಗುತ್ತಿರುವ ಕಾಲೇಜು ವಿದ್ಯಾರ್ಥಿನಿಯರಿಗೆ ಹೆಲ್ಮೇಟ್‌ನ್ನು ಹಾಕಿ ಆ ನಂತರ ಕಾರ್ಯಕ್ರಮವನ್ನು ಕುರಿತು ಬೈಕ್ ಸವಾರರು ಪ್ರಯಾಣಿಸುತ್ತಿರುವಾಗ ತಮ್ಮ ರಕ್ಷಣೆಗಾಗಿ ಹೇಲ್ಮೇಟ್‌ನ್ನು ಧರಿಸಬೇಕು. ಸುಪ್ರೀಂಕೋರ್ಟನ ನಿಯಮವನ್ನು ಎಲ್ಲರು ಪಾಲಿಸಬೇಕು ಆ ನಂತರ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವಂತಹ ಎ.ಬಿ.ವಿ.ಪಿ ಸಂಘಟಕರಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಎ.ಬಿ.ವಿ.ಪಿ ಸಂಘಟಿಕರಾದ ಗವಿಸಿದ್ದಪ್ಪ ಜಂತಕಲ್, ಜಿ.ಸಂ.ಕಾರ್ಯದರ್ಶಿ ಭಾಗೇಶ ಹೊತಿನಮಡಿ, ಜಿ.ಸಂಚಾಲಕರಾದ ರವಿಚಂದ್ರ ಪಾಟೀಲ, ರಾಕೇಶ ಪಾನಘಂಟಿ, ನಗರ ಕಾರ್ಯದರ್ಶಿ ಮುಕುಂದ, ರಾಜ್ಯ ಕಾರ್ಯಕಾರಣಿ ಸದಸ್ಯ ನಾಗರಾಜ ನಾಯಕ, ವಿದ್ಯಾಶ್ರೀ, ಮಂಜುಳಾ, ಶರಣಮ್ಮ, ನಿರ್ಮಲಾ, ಇನ್ನೂ ಅನೇಕ ಕಾಲೇಜ ವಿದ್ಯಾರ್ಥಿಗಳು ಈ ಜಾಗೃತಿ ಅಭಿಯಾನದಲ್ಲಿ ಬಾಗವಹಿಸಿದ್ದರು.

Advertisement

0 comments:

Post a Comment

 
Top