ಕುಷ್ಟಗಿಯಲ್ಲಿ ಸ್ಮಶಾನದಲ್ಲಿ ಹೂತು ಹಾಕಿದ್ದ ನವಜಾತ ಶಿಶುಗಳು ನಾಯಿ ಹಂದಿಗಳ ಪಾಲಾಗುತ್ತಿರುವ ಹೃದಯವಿದ್ರಾವಕ ಘಟನೆ ಕುಷ್ಟಗಿಯಲ್ಲಿ ನಡೆಯುತ್ತಿದೆ. ಜನಿಸಿ ಕಣ್ಣು ಬಿಡುವ ಮೊದಲೇ ಸಾವನ್ನಪ್ಪುವ ನವಜಾತ ಶಿಶುಗಳು ಮಣ್ಣಲ್ಲಿ ಮಣ್ಣಾಗುವ ಬದಲು ಬಿಡಾಡಿ ನಾಯಿಗಳಿಗೆ ಆಹಾರವಾಗುತ್ತಿವೆ. ಸತ್ತ ಶಿಶುಗಳ ದೇಹದ ಅಂಗಾಗಗಳನ್ನು ನಾಯಿಗಳನ್ನು ಬಾಯಲ್ಲಿ ಹಿಡಿದೊಯ್ಯುವ ದೃಶ್ಯಗಳು ಸ್ಥಳಿಯರನ್ನು ಬೆಚ್ಚಿಬೀಳಿಸಿವೆ. ಗಜೇಂದ್ರಗಡ ರಸ್ತೆಯ ಚರ್ಚಕಾಲೋನಿಯ ಪಕ್ಕದಲ್ಲಿ ಸ್ಮಶಾನವಿದೆ. ಇಲ್ಲಿ ಹೂತು ಹಾಕಿರುವ ನವಜಾತ ಶಿಶುಗಳ ಶವವನ್ನು ನಾಯಿಗಳು ಎಳೆದು ತಂದು ಎಲ್ಲೆಂದರದಲ್ಲಿ ತಿನ್ನುತ್ತಿವೆ. ನಾಯಿಗಳು ತಿಂದು ಬಿಟ್ಟ ಅರೆ ಬರೆ ಶವದ ಅವಶೇಷಗಳನ್ನು ಸ್ಥಳೀಯರು ಮರುಸಂಸ್ಕಾರ ಮಾಡುತ್ತಿದ್ದಾರೆ. ನಿನ್ನೆ ಮೊನ್ನೆಯಷ್ಟೇ ಸಾವನ್ನಪ್ಪಿದ್ದ 3 ಶಿಶುಗಳ ಶವವನ್ನು ಇದೇ ರೀತಿ ತಂದು ತಿಂದಿವೆ. ಏನೂ ಸಿಗದಾದಾಗ ತಮ್ಮ ಮಕ್ಕಳ ಮೇಲೆ ಎಲ್ಲಿ ನಾಯಿಗಳು ದಾಳಿ ಮಾಡುವುತ್ತವೆಯೋ ಎಂದು ಭಯದಲ್ಲಿದ್ದಾರೆ ಸ್ಥಳೀಯರು. ಶಿಶುಗಳ ಕಳೆಬರವನ್ನು ಆಳವಾದ ತಗ್ಗುತೋಡಿ ಮುಚ್ಚಿದರೆ ಈ ಸಮಸ್ಯೆ ಇರುವುದಿಲ್ಲ. ಆದರೆ ಮದ್ಯರಾತ್ರಿಯಲ್ಲಿ ಸಾವನ್ನಪ್ಪುವ ಮಕ್ಕಳನ್ನು ಹಳ್ಳಿಗರು ಅಥವಾ ಆಸ್ಪತ್ರೆಗೆ ಬಂದವರು ಅರೆ ಬರೆ ತಗ್ಗತೋಡಿ ಮುಚ್ಚಿಬಿಡುತ್ತಾರೆ. ಅವರಿಗೆ ಅಪರಾತ್ರಿಯಲ್ಲಿ ಸಲಿಕೆ,ಗುದ್ದಲಿ ಸಿಗುವುದಿಲ್ಲ. ಈ ರೀತಿ ಮುಚ್ಚಿದ ಶವದ ಕಳೆಬರಗಳಿಂದ ದುರ್ನಾತ ಬರುತ್ತಿದೆ. ಅದನ್ನೇ ಗ್ರಹಿಸಿ ನಾಯಿಗಳು ಅಲ್ಲಿ ಮಣ್ಣನ್ನು ಕೆಬರಿ ಶವಗಳನ್ನು ಹೊರ ಎಳೆಯುತ್ತಿರುವುದು ನಂತರ ಅದರ ಭಾಗಗಳನ್ನು ಎಲ್ಲೆಂದರಲ್ಲಿ ಬಾಯಲ್ಲಿ ಕಚ್ಚಿಕೊಂಡು ತಿರುಗಾಡುವುದನ್ನು ನೋಡಿದರೆ ಎಂಥವರ ಎದೆಯೂ ಝಲ್ ಎನ್ನುತ್ತದೆ.
Subscribe to:
Post Comments (Atom)
0 comments:
Post a Comment